ಇತ್ತೀಚಿನ ಸುದ್ದಿ
ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ: ಬಂಧನ
25/11/2025, 20:22
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ಸರ್ಕಾರಿ ಸಮುದಾಯ ಅರೋಗ್ಯ ಕೇಂದ್ರದ ವೈದ್ಯರ ಕರ್ತವ್ಯಕ್ಕೆ ಅಡ್ಡಿ ಮತ್ತು ಬೆದರಿಕೆ ಸಂಬಂಧ ಹಾಗೂ 10 ಲಕ್ಷ ಬೇಡಿಕೆ ಇಟ್ಟಿರುವ ಆರೋಪದ ಪ್ರಕರಣ ಸಂಬಂಧ ಪ್ರಖ್ಯಾತ್ ಗೌಡ ಎಂಬತನನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

ಆಸ್ಪತ್ರೆ ವೈದ್ಯ ಡಾ. ಚೇತನ್ ಅವರಿಗೆ ಸಂತಾನ ಹರಣ ಚಿಕಿತ್ಸೆ ಬಳಿಕವೂ ಪ್ರಖ್ಯಾತ್ ಗೌಡ ಪತ್ನಿಗೆ ಗರ್ಭ ಆಗಿರುವ ಹಿನ್ನಲೆಯಲ್ಲಿ, ಪ್ರಖ್ಯಾತ್ ಗೌಡ ಮತ್ತು ಇತರರು ಆಸ್ಪತ್ರೆಗೆ ತೆರಳಿ ಕರ್ತವ್ಯಕ್ಕೆ ಅಡ್ಡಿ ಮಾಡಿ ಜೊತೆಗೆ 10 ಲಕ್ಷ ಪರಿಹಾರ ನೀಡುವಂತೆ ಪದೇ ಪದೇ ಬೇಡಿಕೆ ಇಡುತ್ತಿದ್ದ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯ ಸರಕಾರಿ ವೈದ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ, ಕುಶಾಲನಗರ ಪೊಲೀಸರು ಪ್ರಖ್ಯಾತ್ ಗೌಡ ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.












