9:56 PM Thursday18 - December 2025
ಬ್ರೇಕಿಂಗ್ ನ್ಯೂಸ್
ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ…

ಇತ್ತೀಚಿನ ಸುದ್ದಿ

ವೈಟ್ ಹೌಸ್ ನಲ್ಲಿ ಅರಳದ ಕಮಲ: ಅಮೆರಿಕದ ನೂತನ‌ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ

06/11/2024, 20:47

ವಾಷಿಂಗ್ಟನ್(reporterkarnataka.com): ವಿಶ್ವದ ಬಲಾಢ್ಯ ರಾಷ್ಟ್ರ ಎಂದು ಕರೆಸಿಕೊಳ್ಳುವ
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಾರ್ಟಿಯ ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸಿದ್ದು, ಅವರು ಡೆಮಾಕ್ರಟಿಕ್ ಪಾರ್ಟಿಯ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದ್ದಾರೆ.


ಟ್ರಂಪ್ ಅವರು 277 ಎಲೆಕ್ಟ್ರಲ್ ಮತಗಳನ್ನು ಪಡೆದರೆ, ಕಮಲಾ ಹ್ಯಾರಿಸ್ ಅವರು 224 ಮತಗಳನ್ನು ಪಡೆದಿದ್ದಾರೆ. ಇದೀಗ
ಟ್ರಂಪ್ ಅವರು ಅಮೆರಿಕದ 47 ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಟ್ರಂಪ್ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಾರ್ಟಿಯ ಬೈಡನ್ ಎದುರು ಸೋಲು ಅನುಭಸಿದ್ದರು. ಇದು ಮೂರನೇ ಬಾರಿ ಸ್ಪರ್ಧಿಸಿದ್ದು,ಎರಡನೇ ಅವಧಿಯ ಗೆಲುವು ಅವರದ್ದಾಗಿದೆ.
ವಿಜಯವನ್ನು ಘೋಷಿಸಲು ಬುಧವಾರ ವೇದಿಕೆಗೆ ಬಂದ ಟ್ರಂಪ್ ಅವರು ಯುನೈಟೆಡ್ ಸ್ಟೇಟ್ಸ್‌ಗೆ “ಸುವರ್ಣಯುಗ” ತರುವುದಾಗಿ ಪ್ರತಿಜ್ಞೆ ಮಾಡಿದರು. ಡೊನಾಲ್ಡ್ ಟ್ರಂಪ್ ನಿರ್ಣಾಯಕ ಸ್ವಿಂಗ್ ರಾಜ್ಯಗಳಾದ ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾವನ್ನು ಗೆದ್ದಿದ್ದಾರೆ, ಆ ಮೂಲಕ ಮ್ಯಾಜಿಕ ಸಂಖ್ಯೆಯಾದ 270ಕ್ಕಿಂತ ಹೆಚ್ಚು ಚುನಾವಣಾ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಮಲಾ ಹ್ಯಾರಿಸ್ ವರ್ಜೀನಿಯಾ ಮತ್ತು ಹವಾಯಿಗಳನ್ನು ಗೆದ್ದಿದ್ದಾರೆ, ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಮತ್ತು ಇಲಿನಾಯ್ಸ್‌ನಂತಹ ಡೆಮಾಕ್ರಟಿಕ್ ಭದ್ರಕೋಟೆಗಳಲ್ಲಿ ಅವರ ಹಿಂದಿನ ವಿಜಯಗಳನ್ನು ಸೇರಿಸಿದ್ದಾರೆ. ಟ್ರಂಪ್ ಅವರು ನೆಬ್ರಸ್ಕಾದ ಮೂರನೇ ಕಾಂಗ್ರೆಸ್ ಜಿಲ್ಲೆಯ ಜೊತೆಗೆ ಅಲಬಾಮಾ, ಫ್ಲೋರಿಡಾ, ಟೆಕ್ಸಾಸ್ ಮತ್ತು ಓಹಿಯೋ ಸೇರಿದಂತೆ ರಾಜ್ಯಗಳ ಸರಮಾಲೆಯನ್ನು ಸಹ ಹಕ್ಕು ಸಾಧಿಸಿದ್ದಾರೆ, ಚುನಾವಣಾ ಸ್ಪರ್ಧೆಯಲ್ಲಿ ತಮ್ಮ ಹಿಡಿತವನ್ನು ಬಲಪಡಿಸಿದ್ದಾರೆ.
ಡೋನಾಲ್ಡ್‌ ಟ್ರಂಪ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಈ ಹಿಂದೆ ಅಂದರೆ 2018 ರಲ್ಲಿ ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿದ್ದ ವಿಚಾರ ಮುನ್ನಲೆಗೆ ಬಂದಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪ್ರಯತ್ನಗಳನ್ನು ದುರ್ಬಲಗೊಳಿಸುವ ಮೂಲಕ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯವನ್ನು ಪಾಕ್ ನೀಡುತ್ತಿದೆ ಎಂದು ಟ್ರಂಪ್ ಹೇಳಿದ್ದರು. ಇದರ ಜೊತೆಗೆ ಭಾರತದೊಂದಿಗೆ ಬಲವಾದ ಸಂಬಂಧ ಬೆಳೆಸಲು ಟ್ರಂಪ್‌ ಆದ್ಯತೆ ನೀಡಬಹುದು ಎನ್ನಲಾಗಿದ್ದು, ವಿಶೇಷವಾಗಿ ಚೀನಾದ ಹೆಚ್ಚುತ್ತಿರುವ ಶಕ್ತಿಗೆ ಪ್ರತಿಯಾಗಿ ಹಾಗೂ ಭವಿಷ್ಯದ ಯುಎಸ್ ವಿದೇಶಾಂಗ ನೀತಿಯಲ್ಲಿ ಪಾಕಿಸ್ತಾನವನ್ನು ಬದಿಗೊತ್ತಬಹುದು ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು