3:58 AM Friday27 - September 2024
ಬ್ರೇಕಿಂಗ್ ನ್ಯೂಸ್
ಖಾಯಂ ಪಿಡಿಒ ನೇಮಕಕ್ಕೆ ಆಗ್ರಹಿಸಿ ತರುವೆ ಗ್ರಾ‌ಮ ಪಂಚಾಯಿತಿ ಎದುರು ಏಕಾಂಗಿ ಹೋರಾಟ ಸಿಬಿಐ ಬರಬಾರದು ಎಂದು ಬೇಲಿ ಹಾಕಿದ್ದು ಯಾಕೆ: ಮಾಜಿ ಗೃಹ ಸಚಿವ ಆರಗ… ಬಜಾಜ್ ಫಿನ್‍ಸರ್ವ್ ವತಿಯಿಂದ ವಯನಾಡ್ ಭೂಕುಸಿತ ಪರಿಹಾರಕ್ಕೆ 2 ಕೋಟಿ ರೂ. ದೇಣಿಗೆ ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿತನ: ಮೊಟ್ಟೆಗಾಗಿ ತಟ್ಟೆ ಹಿಡಿದು ಕುಳಿತ ವಿದ್ಯಾರ್ಥಿಗಳು! ಶಿರೂರು ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಜತೆಗೆ ಚಾಲಕ ಅರ್ಜುನ್ ಮೃತದೇಹ ಪತ್ತೆ: ಗಂಗಾವಳಿ… ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖದೀಮ: ಬಾಳೆಹೊನ್ನೂರು ಪೊಲೀಸರಿಂದ ಬಂಧನ ತೀರ್ಥಹಳ್ಳಿಯಲ್ಲೂ ಶುರುವಾಗಿದೆ ಡಿಜಿಟಲ್ ವಂಚನೆ: ಹಣ ಟ್ರಾನ್ಸ್ಫರ್ ಮಾಡುವುದಾಗಿ ನಂಬಿಸಿ 5 ಸಾವಿರ… ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಲಿ: ಶಾಸಕ ಡಾ.ಭರತ್ ಶೆಟ್ಟಿ… ನ್ಯಾಯಾಲಯದ ತೀರ್ಪಿಗಾದರೂ ತಲೆಬಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಲಿ: ಶಾಸಕ ವೇದವ್ಯಾಸ ಕಾಮತ್ ಆಗ್ರಹ ಕೆಎಸ್ಸಾರ್ಟಿಸಿ: ಅಕ್ಟೋಬರ್ 3ರಿಂದ 12ರ ವರೆಗೆ ದಸರಾ ವಿಶೇಷ ಪ್ರವಾಸ ಪ್ಯಾಕೇಜ್

ಇತ್ತೀಚಿನ ಸುದ್ದಿ

ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತಪೂರಣ ಕೇಂದ್ರದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ

15/06/2024, 15:33

ಮಂಗಳೂರು(reporterkarnataka.com): ಮೀನುಗಾರಿಕೆ ಇಲಾಖೆ ಮಂಗಳೂರು ಹಾಗೂ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತಪೂರಣ ಕೇಂದ್ರದ ಜಂಟಿ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮೀನುಗಾರಿಕೆ ಇಲಾಖೆಯ ಅಪರ ನಿರ್ದೇಶಕ ಹರೀಶ್ ಕುಮಾರ್ ನೆರವೇರಿಸಿದರು. ಮಂಗಳೂರು
ರಕ್ತ ನಿಧಿ ಕೇಂದ್ರ ವೈದ್ಯಾಧಿಕಾರಿ ಡಾ. ಶರತ್ ಕುಮಾರ್ ಮೀನುಗಾರಿಕೆ ಜಂಟಿ ನಿರ್ದೇಶಕ ಸಿದ್ದಯ್ಯ, ಮೀನುಗಾರಿಕೆ ಉಪನಿರ್ದೇಶಕರಾದ ರೇವತಿ ಜೆ., ದಿವ್ಯಾ ಬಿ. ಎಲ್., ಮೀನುಗಾರಿಕೆ ಉಪ ನಿರ್ದೇಶಕರು (ಪ್ರ) ದಿಲೀಪ್ ಕುಮಾರ್, ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಶ್ರೀದೇವಿ ಪ್ರಭು, ಕವಿತಾ, ದಿವಾಕರ ಖಾರ್ವಿ ಹಾಗೂ ಮೀನುಗಾರಿಕೆ ಇಲಾಖೆಯ ಸಿಬ್ಬಂದಿಗಳು, ರಕ್ತದಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕ
ದಿವಾಕರ ಖಾರ್ವಿ ಅವರು 80ನೆಯ ಬಾರಿ ಹಾಗೂ ವಾಹನ ಚಾಲಕರಾದ ಯೋಗೇಶ್ ದೇವಾಡಿಗ 52ನೇ ಬಾರಿ ರಕ್ತದಾನ ಮಾಡಿದರು. ಒಟ್ಟು 52 ದಾನಿಗಳು ರಕ್ತದಾನವನ್ನು ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು