ಇತ್ತೀಚಿನ ಸುದ್ದಿ
ವೆನ್ಲಾಕ್ ಆಸ್ಪತ್ರೆ: ಮೃತದೇಹಗಳ ವಾರಿಸುದಾರರ ಪತ್ತೆಗೆ ಮನವಿ
28/10/2024, 22:02
ಮಂಗಳೂರು(reporterkarnataka.com): ನಗರದ ವೆನ್‍ಲಾಕ್ ಜಿಲ್ಲಾಆಸ್ಪತ್ರೆಯ ಶವಾಗಾರದಲ್ಲಿ ವಾರಿಸುದಾರರಿಲ್ಲದೆ ವಿಲೇವಾರಿಯಾಗದ, ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ 108 ಆಂಬುಲೆನ್ಸ್ ಮೂಲಕ ಕರೆತರಲಾದ ಮ್ಯಾಥ್ಯೂ (67), ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಿಂದ ಕರೆತರಲಾದ ರಮೇಶ್ (50) ಎಂಬ ಅಪರಿಚಿತ ವ್ಯಕ್ತಿಗಳ ಮೃತದೇಹಗಳನ್ನು ಇರಿಸಲಾಗಿದೆ.
ಮೃತದೇಹಗಳ ಗುರುತು ಪತ್ತೆಯಾದಲ್ಲಿ, ವಾರಿಸುದಾರರಿದ್ದಲ್ಲಿ ಗುರುತು ಚೀಟಿಯನ್ನು ಕಚೇರಿಗೆ ಸಲ್ಲಿಸಿ, ಏಳು ದಿನಗಳೊಳಗೆ ಮೃತ ದೇಹವನ್ನು ಪಡೆಯುವಂತೆ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.