ಇತ್ತೀಚಿನ ಸುದ್ದಿ
ವೀಕೆಂಡ್ ಕರ್ಪ್ಯೂ: ರಾಜ್ಯದಲ್ಲಿ ನಿಯಮ ಮೀರಿ ರಸ್ತೆಗಿಳಿದ 1,200 ವಾಹನಗಳು ಸೀಜ್
08/01/2022, 22:38
ಸಾಂದರ್ಭಿಕ ಚಿತ್ರ
ಬೆಂಗಳೂರು(reporterkarnataka.com): ರಾಜ್ಯ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ ಬಳಿಕ ನಿಯಮ ಮೀರಿ ರಸ್ತೆಗಿಳಿದ ಸುಮಾರು 1200 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ವೀಕೆಂಡ್ ಕರ್ಪ್ಯೂ ಜಾರಿಗೊಂಡಿದ್ದು, ಈ ವೇಳೆ ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡಿದ ಜನರ ವಾಹನಗಳನ್ನು ಸೀಜ್ ಮಾಡಿ, ದಂಡ ವಿಧಿಸಲಾಗಿದೆ.
ಈ ರೀತಿ ನಿಯಮ ಮೀರಿ ಹೊರಗೆ ಬಂದ 1,200 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ನಾಳೆಯೂ ಕೂಡ ಪೊಲೀಸರು ಅನಗತ್ಯವಾಗಿ ರೋಡಿಗೆ ಇಳಿದವರಿಗೆ ದಂಡ, ವಾಹನ ಸೀಜ್ ಮಾಡಲಿದ್ದಾರೆ ಎಂದು ತಿಳಿಸಿದರು.
ಕೊರೋನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ವಾರಾಂತ್ಯ ಕರ್ಪ್ಯೂ ಸಂದರ್ಭಪೊಲೀಸರು ತುಂಬಾ ಶ್ರಮಪಟ್ಟು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಜನರು ಅನಗತ್ಯವಾಗಿ ಹೊರಗೆ ಓಡಾಡಬಾರದು ಎಂಬುದಾಗಿ ಮನವಿ ಮಾಡಿದರು.