12:31 PM Tuesday25 - November 2025
ಬ್ರೇಕಿಂಗ್ ನ್ಯೂಸ್
Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ… Chikkamagaluru | ಎನ್.ಆರ್.ಪುರ: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಜನರಲ್ಲಿ ಮತ್ತೆ… ಸಿದ್ದರಾಮಯ್ಯರ ಹಣಕಾಸು ಮಂತ್ರಿ ಮಾಡಿದ್ದೇ ನಾನು: ಸಿಎಂ ವಿರುದ್ದ ಮಾಜಿ ಪಿಎಂ ದೇವೇಗೌಡ…

ಇತ್ತೀಚಿನ ಸುದ್ದಿ

ವಿವಿ ಮಟ್ಟದ ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ ಪ್ರದಾನ ಸಮಾರಂಭ

09/03/2022, 21:53

ಮಂಗಳೂರು(reporterkarnataka.com): ಎನ್‌ಎಸ್‌ಎಸ್‌ ಮಾತ್ರ ಜನರೊಂದಿಗೆ ಅತ್ಯಂತ ಆಪ್ತವಾಗಿ ಬದುಕಲು ಸಾಧ್ಯ. ಎನ್‌ಎಸ್‌ಎಸ್‌ ಸ್ವಯಂ ಸೇವಕರನ್ನು ಈ ದೇಶದ ಆಸ್ತಿಗಳನ್ನಾಗಿ ಮಾಡಬೇಕಾದರೆ ಅವರಿಗೆ ಸರಕಾರದ ಕಾರ್ಯಕ್ರಮಗಳ ಪರಿಚಯ ಮಾಡಿಕೊಡಬೇಕು ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್‌. ಧರ್ಮ ಹೇಳಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಇತೀಚೆಗೆ ನಡೆದ ವಿವಿ ಮಟ್ಟದ ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ಸಮುದಾಯದಲ್ಲಿ ಕೆಲಸ ಮಾಡುವುದು. ಹಾಗಾಗಿ ಹಳ್ಳಿ ಹಳ್ಳಿಗೆ ಹೋಗಿ ಸೇವೆ ಮಾಡುತ್ತಿದ್ದೀರಿ. ಎನ್‌ಎಸ್‌ಎಸ್‌ ಸ್ವಯಂ ಸೇವಕರನ್ನು ಈ ದೇಶದ ಆಸ್ತಿಗಳನ್ನಾಗಿ ಮಾಡಬೇಕಾದರೆ ಅವರಿಗೆ ಸರಕಾರದ ಕಾರ್ಯಕ್ರಮಗಳ ಪರಿಚಯ ಮಾಡಿಕೊಡಬೇಕು ಎಂದರು.


ಎನ್‌ಎಸ್‌ಎಸ್‌ ಮಾತ್ರ ಜನರೊಂದಿಗೆ ಅತ್ಯಂತ ಆಪ್ತವಾಗಿ ಬದುಕುಲು ಸಾಧ್ಯ. ಇಂದು ಸರಕಾರವು ಹೆಣ್ಣು ಮಕ್ಕಳಿಗೆ ಬಿಡುಗಡೆ ಮಾಡಿರುವ ಅನುದಾನವು ಸರಿಯಾಗಿ ಉಪಯೋಗವಾಗದೇ ಸರಕಾರಕ್ಕೆ ಮರಳಿ ಹೋಗುತ್ತಿದೆ.ಅದಕ್ಕೆ ಮುಖ್ಯ ಕಾರಣ ಮಾಹಿತಿಯ ಕೊರತೆ. ಇದನ್ನು ಸರಿತೂಗಿಸುವ ಕೆಲಸವನ್ನು ಎನ್‌ಎಸ್‌ಎಸ್‌ ಮಾಡಬೇಕಿದೆ ಎಂದು ಹೇಳಿದರು.


ಇದೇ ವೇಳೆ ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಬೆಂಗಳೂರು ರಾಷ್ಟ್ರೀಯ  ಸೇವಾ ಯೋಜನಾ ಪ್ರಾಂತೀಯ ನಿರ್ದೇಶನಾಲಯದ ಯೂತ್ ಆಫೀಸರ್  ವೈ.ಎನ್. ಉಪ್ಪಿನ್,  ಮಂಗಳೂರು ನಗರ ಪೂರ್ವ ಸಂಚಾರಿ ಠಾಣಾಧಿಕಾರಿ ಗೋಪಾಲಕೃಷ್ಣ ಭಟ್‌, ವಿವಿ ಕಾಲೇಜಿನ ಪ್ರಾಂಶುಪಾಲೆ ಅನಸೂಯ ರೈ, ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ ಕಾರ್ಯಕ್ರಮ ಆಯೋಜಕರಾಗಿದ್ದರು.

ಪ್ರಶಸ್ತಿ ಪುರಸ್ಕೃತರು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ
2018-19 ನೇ ಸಾಲಿನ ವಿಶ್ವವಿದ್ಯಾನಿಲಯ ಮಟ್ಟದ ಪ್ರಶಸ್ತಿ
ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ ಪ್ರಶಸ್ತಿಗೆ ಎಸ್.ಡಿ.ಎಂ.ಕಾಲೇಜು, ಉಜಿರೆ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರಶಸ್ತಿಗೆ ಗಣೇಶ್ ವಿ.ಶೆಂಡ್ಯೆ, ಎಸ್.ಡಿ.ಎಂ.ಕಾಲೇಜು, ಉಜಿರೆ, ಡಾ. ಭಾರತಿ ಪಿಲಾರ್, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

ಅತ್ಯುತ್ತಮ ರಾಸೇಯೋಜನಾ ಸ್ವಯಂಸೇವಕ ಪ್ರಶಸ್ತಿಗೆ ಆದಿತ್ಯ, ಎಸ್.ಡಿ.ಎಂ.ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್, ಮಂಗಳೂರು, ಕೃತಿ ವಿ.ರಾವ್, ಗೋವಿಂದದಾಸ ಕಾಲೇಜು, ಸುರತ್ಕಲ್

2019-20ನೇ ಸಾಲಿನ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ ಪ್ರಶಸ್ತಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಹಾಗೂ ಎಸ್.ಡಿ.ಎಂ. ಕಾಲೇಜು, ಉಜಿರೆ

ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರಶಸ್ತಿಗೆ ಬಾಲರಾಜ್ ಡಿ.ಬಿ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ, ಆಶಾಕಿರಣ್, ಎಸ್.ಡಿ.ಎಂ. ಕಾಲೇಜು, ಉಜಿರೆ ಅತ್ಯುತ್ತಮ ರಾಸೇಯೋಜನಾ ಸ್ವಯಂಸೇವಕ ಪ್ರಶಸ್ತಿಗೆ ಸತ್ಯಪ್ರಸಾದ್ ಪಿ. ಎಸ್.ಡಿ.ಎಂ.ಕಾಲೇಜು, ಉಜಿರೆ ಹಾಗೂ ಬಿಂದಿಯಾ ಶೆಟ್ಟಿ, ಗೋವಿಂದದಾಸ ಕಾಲೇಜು, ಸುರತ್ಕಲ್.

2020-21 ನೇ ಸಾಲಿನ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ ಪ್ರಶಸ್ತಿಗೆ ಪಾದುವಾ ಕಾಲೇಜ್ ಆಪ್ ಕಾಮರ್ಸ್ ಆಂಡ್ ಮ್ಯಾನೇಜ್‌ಮೆಂಟ್,ನಂತೂರು ಹಾಗೂ ಕಾರ್ಮೆಲ್ ಕಾಲೇಜು, ಮೊಡಂಕಾಪು ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರಶಸ್ತಿಗೆ ರೋಶನ್ ವಿನ್ಸಿ ಸಾಂತುಮಾಯರ್, ಪಾದುವಾ ಕಾಲೇಜ್ ಆಫ್‌ ಕಾಮರ್ಸ್ ಆಂಡ್ ಮ್ಯಾನೇಜ್‌ಮೆಂಟ್, ನಂತೂರು, ಮಂಗಳೂರು, ಮಧುರ ಕೆ. ಕಾರ್ಮೆಲ್ ಕಾಲೇಜು, ಮೊಡಂಕಾಪು ಹಾಗೂ ಅತ್ಯುತ್ತಮ ರಾ.ಸೇ.ಯೋಜನಾ ಸ್ವಯಂಸೇವಕ ಪ್ರಶಸ್ತಿಗೆ ಪ್ರದೀಪ, ರುಕ್ಮಿಣಿ ಶೆಡ್ತಿ ಮೆಮೋರಿಯಲ್ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಾರ್ಕೂರು ಹಾಗೂ ರಶ್ಮಿ ಜೆ.ಅಂಚನ್, ದ್ವಿತೀಯ ಬಿ.ಕಾಂ. ಗೋವಿಂದದಾಸ ಕಾಲೇಜು, ಸುರತ್ಕಲ್ ಇವರಿಗೆ ನೀಡಿ ಗೌರವಿಸಲಾಯಿತು.



ಕೆನರಾ ಕಾಲೇಜಿನ  ಯೋಜನಾಧಿಕಾರಿ ಸೀಮಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.ಡಾ. ಗಾಯತ್ರಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು