ಇತ್ತೀಚಿನ ಸುದ್ದಿ
ಮಂಗಳೂರು ವಿವಿ ಘಟಿಕೋತ್ಸವ: ರಾಜ್ಯಪಾಲರ ನಡೆಗೆ ಎನ್ ಎಸ್ ಯುಐ ತೀವ್ರ ಖಂಡನೆ
17/06/2024, 21:07
ಮಂಗಳೂರು(reporterkarnataka.com):ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದ ವೇಳೆ ರಾಜ್ಯಪಾಲರ ನಡೆ ಕುರಿತು ಎನ್ ಎಸ್ ಯುಐ ತೀವ್ರ
ಖಂಡನೆ ವ್ಯಕ್ತಪಡಿಸಿದೆ.
ಘಟಿಕೋತ್ಸವ ಕಾರ್ಯಕ್ರಮ ಹಲವಾರು ವರ್ಷಗಳಿಂದ ಉತ್ತಮ ಗುಣಮಟ್ಟದಲ್ಲಿ ನಡೆಯುತ್ತಾ ಬಂದಿದೆ. ಆದರೆ ಈ ವರ್ಷ ನಡೆದ ಘಟಿಕೋತ್ಸವ ಕಾರ್ಯಕ್ರಮ ಉತ್ತಮ ರೂಪುರೇಷೆಯನ್ನು ಒಳಗೊಂಡಿತ್ತು. ಕಾರ್ಯಕ್ರಮದ ಸಂಪೂರ್ಣ ವರದಿ ರಾಜ್ಯಪಾಲರಿಗೆ ಗೊತ್ತಿತ್ತು.
ಆದರೆ ವೇದಿಕೆಗೆ ಬಂದ ಮೇಲೆ ರಾಜ್ಯಪಾಲರು ಹಾಗೂ ಅವರ ಅಧಿಕಾರಿ ವರ್ಗ ಕಾರ್ಯಕ್ರಮವನ್ನು ಒಟ್ಟು ಗೊಂದಲಕ್ಕೆ ಎಡೆಮಾಡಿ ಕೊಟ್ಟಿರೋದು ಅತೀವ ಬೇಸರ ತಂದಿದೆ. ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಅನೇಕರಿಗೆ ಸಾಮೂಹಿಕವಾಗಿ ಕಾಣಾಚಾರಕ್ಕೆ ನೀಡಿದ ಡಾಕ್ಟರೇಟ್ ಅಂತಿತ್ತು. ನಮ್ಮ ವಿಶ್ವವಿದ್ಯಾನಿಲಯ ಉಪಕುಲಪತಿಗಳ ಜೊತೆಗೆ ನಡೆದು ಕೊಂಡ ವರ್ತನೆಯೂ ರಾಜ್ಯಭಾರ ಮೆರೆಯುವಂತಿತ್ತು.
ಒಟ್ಟಿನಲ್ಲಿ ಒಂದು ಉತ್ತಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಜ್ಯಪಾಲರು ಹಾಗೂ ಅವರ ಅಧಿಕಾರಿ ವರ್ಗದ ಅನಾವಶ್ಯಕ ಗೊಂದಲದ ಹಸ್ತಕ್ಷೇಪದಿಂದ ಅಸ್ತವ್ಯಸ್ತಕ್ಕೆ ಕಾರಣವಾಯಿತು.
ರಾಜ್ಯಪಾಲರ ಈ ರಾಜ್ಯಭಾರವನ್ನು ಎನ್ ಎಸ್ ಯುಐ ಜಿಲ್ಲಾ ಅಧ್ಯಕ್ಷ ಸುಹಾನ್ ಆಳ್ವ ಅವರು ಖಂಡಿಸಿದ್ದಾರೆ.














