ಇತ್ತೀಚಿನ ಸುದ್ದಿ
ಮೈಸೂರು -ಕೊಡಗು ಲೋಕಸಭೆ ಕ್ಷೇತ್ರದಲ್ಲೂ ಮತಗಳ್ಳತನ: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ
10/08/2025, 19:56

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರಿ ಪ್ರಮಾಣದ ಮತಗಳ್ಳತನ ವಾಗಿದೆ ಎಂದು ಪರಾಜಿತ ಅಭ್ಯರ್ಥಿ ಹಾಗೂ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಹಳಷ್ಟು ಲೋಪವಾಗಿದೆ. ಬಿಜೆಪಿ ಮತಯಂತ್ರಗಳಲ್ಲಿ ಮತಗಳ್ಳತನ ಮಾಡಿದೆ. ಒಟ್ಟು 2202 ಬೂತ್ ಗಳ ಪೈಕಿ 292 ಬೂತ್ ಗಳಲ್ಲಿ ಮತಗಳ್ಳತನ ವಾಗಿದೆ., 292 ಇವಿಎಂ ಯಂತ್ರದಲ್ಲಿ ರಿಗ್ಗಿoಗ್ ಆಗಿದೆ ಆರೋಪಿಸಿದರು. 292 ಬೂತ್ ಗಳಲ್ಲಿ 1 ಲಕ್ಷದ 45 ಸಾವಿರ ಮತಗಳಿದ್ದು, ಅದರಲ್ಲಿ 22 ಸಾವಿರ ಮತಗಳು ಕಾಂಗ್ರೆಸ್ ಪರ ಬಂದಿವೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಇದೇ ಬೂತಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ. 50-60 ಮತಗಳು ಬಂದಿದ್ದವು. ಒಂದು ಬೂತ್ ವ್ಯಾಪ್ತಿಯಲ್ಲಿ 15 ಮನೆಗಳು ಸಂಪೂರ್ಣ ಕಾಂಗ್ರೆಸ್ ಕಾರ್ಯಕರ್ತರದ್ದೇ ಆಗಿದೆ, ಅಲ್ಲಿಗೆ ಇದ್ದ ಅಷ್ಟೂ ಮತಗಳು ಬಿಜೆಪಿಗೆ ಹೋಗಲು ಹೇಗೆ ಸಾಧ್ಯ, ಮೈಸೂರಿನ ನರಸಿಂಹ ರಾಜ ಕ್ಷೇತ್ರದಲ್ಲೂ ಇದೇ ರೀತಿ ಆಗಿದೆ ಎಂದು ಗಂಭೀರ ಆರೋಪ ಮಾಡಿದರು.