4:05 AM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ವೂಟ್ ಸೆಲೆಕ್ಟ್‌ನಲ್ಲಿ ವೀಕ್ಷಿಸಿ ‘ಸಕುಟುಂಬ ಸಮೇತ’  ವಿಶೇಷ ವರ್ಲ್ಡ್ ಡಿಜಿಟಲ್ ಪ್ರೀಮಿಯರ್

06/09/2022, 06:24

*ರಾಹುಲ್ ಪಿ.ಕೆ. ಬರೆದು ನಿರ್ದೇಶಿಸಿದ, ಪರಂವಾಹ್ ಸ್ಟುಡಿಯೋಸ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಿಸಿರುವ ಈ ಚಿತ್ರದಲ್ಲಿ ಭರತ್ ಜಿ.ಬಿ. ಮತ್ತು ಸಿರಿ ರವಿಕುಮಾರ್ ನಟಿಸಿದ್ದಾರೆ.

ಬೆಂಗಳೂರು(reporterkarnataka.com): ವೂಟ್ ಸೆಲೆಕ್ಟ್ ಬಹು ನಿರೀಕ್ಷಿತ ಕನ್ನಡ ಕೌಟುಂಬಿಕ ಚಿತ್ರ ‘ಸಕುಟುಂಬ ಸಮೇತ’ದ ಎಕ್ಸ್‌ಕ್ಲೂಸಿವ್ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಅನ್ನು ಸ್ಟ್ರೀಮ್ ಮಾಡುತ್ತಿದೆ. ಪರಮವಾಹ್ ಸ್ಟುಡಿಯೋಸ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಿಸಿದ ಮತ್ತು ರಾಹುಲ್ ಪಿ.ಕೆ. ಬರೆದು ನಿರ್ದೇಶಿಸಿದ ಈ ಚಲನಚಿತ್ರವು ಭ್ರಾತೃತ್ವದ ಸಂದೇಶವನ್ನು ಶ್ರೇಷ್ಠ ರೀತಿಯಲ್ಲಿ ಸಾರುತ್ತಿದೆ. ‘ಸಕುಟುಂಬ ಸಮೇತ’ದಲ್ಲಿ ಭರತ್ ಜಿ.ಬಿ., ಅಚ್ಯುತ್ ಕುಮಾರ್, ಪುಷ್ಪಾ ಬೆಳವಾಡಿ, ಕೃಷ್ಣ ಹೆಬ್ಬಾಳೆ ಮತ್ತು ಸಿರಿ ರವಿಕುಮಾರ್ ಪ್ರಧಾನ ಭೂಮಿಕೆಯಲ್ಲಿದ್ದಾರೆ. 

ಹಾಸ್ಯಮಯ ಚಿತ್ರವಾಗಿರುವ ‘ಸಕುಟುಂಬ ಸಮೇತ’ ಸಂಬಂಧದ ಸಂಕೀರ್ಣತೆಗಳನ್ನೂ ಅಷ್ಟೇ ಹೃದ್ಯವಾಗಿ ಕಟ್ಟಿಕೊಟ್ಟಿದೆ. ಪ್ರತಿ ಮನೆಯಲ್ಲೂ ಇರಬಹುದಾದ ಪಾತ್ರಗಳು, ಸಂಭವಿಸಬಹುದಾದ ಸನ್ನಿವೇಶಗಳ ಮೂಲಕ ಕಥೆಯು ಕೌಟುಂಬಿಕ ಸಂಬಂಧಗಳ ಸೊಗಸನ್ನು ಸಾರುತ್ತದೆ. 

ಮದುವೆಯಾಗಲು ತವಕಿಸುತ್ತಿರುವ ಸೂರಿಯ ಬದುಕಿನಲ್ಲಿ ಶ್ರದ್ಧಾ ಎಂಬ ಹುಡುಗಿಯ ಪ್ರವೇಶವಾಗುತ್ತದೆ. ಆದರೆ, ಮದುವೆಗೆ ಇನ್ನು ಒಂದು ವಾರ ಇದೆ ಎನ್ನುವಾಗ ಆಕೆ ನಿರಾಕರಿಸುತ್ತಾಳೆ. ಎರಡು ನಿಷ್ಕ್ರಿಯ ಕುಟುಂಬಗಳ ನಡುವೆ ಸಮನ್ವಯಕ್ಕಾಗಿ ಸಭೆ ನಡೆಯುತ್ತದೆ. ಅಲ್ಲಿ ಈಗೋ ಘಾಸಿಗೊಳ್ಳುತ್ತವೆ. ಹೃದಯಗಳು ಮುರಿದು ಹೋಗುತ್ತವೆ. ಈ ನಡುವೆಯೇ ಕೆಲವು ಹೃದಯಗಳ ಗಾಯವೂ ಮಾಯುತ್ತದೆ. ಸುಖಾಂತ್ಯದ ರೋಮ್ಯಾಂಟಿಕ್ ಕಾಮಿಡಿಗಾಗಿ ವೀಕ್ಷಿಸಿ- ವೂಟ್ ಸೆಲೆಕ್ಟ್ . 

ಚಿತ್ರದ ಕುರಿತು ಮಾತನಾಡಿದ ನಟ ಮತ್ತು ನಿರ್ಮಾಪಕ ರಕ್ಷಿತ್ ಶೆಟ್ಟಿ, “ಸಕುಟುಂಬ ಸಮೇತ ಸರಳವಾದ ಚಿತ್ರವಾಗಿದ್ದು, ಕೊನೆಯ ವರೆಗೂ ನಿಮ್ಮನ್ನು ನಗಿಸುತ್ತದೆ. ಲಾಕ್‌ಡೌನ್ ಸಮಯದಲ್ಲಿ ಈ ಪರಿಕಲ್ಪನೆ ಹುಟ್ಟಿಕೊಂಡಿತು. ಪ್ರತಿ ಪಾತ್ರವೂ ಎಷ್ಟು ಸಾಪೇಕ್ಷ ಮತ್ತು ನೈಜವಾಗಿದೆ ಎಂಬ ಅಂಶವೇ ಪ್ರೇಕ್ಷಕರನ್ನು ಬಹುವಾಗಿ ಕಾಡುತ್ತದೆ. ಏಕೆಂದರೆ, ಅಂತಹ ಪಾತ್ರಗಳು ನಮ್ಮ ಸುತ್ತಮುತ್ತ ಸಾಕಷ್ಟಿವೆ.

ನಿರ್ದೇಶಕ ರಾಹುಲ್ ಪಿ.ಕೆ. ಮಾತನಾಡಿ,”ಸಕುಟುಂಬ ಸಮೇತ ಮದುವೆ ಮತ್ತು ಕುಟುಂಬದ ಕುರಿತು ನನ್ನ ವೈಯಕ್ತಿಕ ದೃಷ್ಟಿಕೋನವಾಗಿದೆ. ಸಂಬಂಧಗಳು ಹೇಗೆ ನಿರಂತರ ಬೆಳೆಯುತ್ತಿರುತ್ತವೆ ಮತ್ತು ಬದಲಾಗುತ್ತಿರುತ್ತವೆ ಎಂಬ ಕುರಿತು ಸಂವಾದ ನಡೆಸಲು ನಾನು ಪ್ರಯತ್ನಿಸುತ್ತಿದ್ದೇನೆ” ಎಂದು ಹೇಳಿದರು.

ಸಕುಟುಂಬ ಸಮೇತವನ್ನು ವೀಕ್ಷಿಸಿ, ಇದೀಗ ವೂಟ್ ಸೆಲೆಕ್ಟ್ ನಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ!

ಇತ್ತೀಚಿನ ಸುದ್ದಿ

ಜಾಹೀರಾತು