6:21 AM Saturday4 - October 2025
ಬ್ರೇಕಿಂಗ್ ನ್ಯೂಸ್
Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಜೂನ್ ತಿಂಗಳ ಟಾಪರ್ ಆಗಿ ಸಿಂಚನಾ ಮತ್ತು ಪ್ರೀತಮ್ ಶೆಟ್ಟಿ ಆಯ್ಕೆ

06/07/2023, 15:35

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜೂನ್ ತಿಂಗಳ ಟಾಪರ್ ಆಗಿ ಸಿಂಚನಾ ಎಸ್. ಶಂಕರ್ ಹಾಗೂ ಪ್ರೀತಮ್ ಶೆಟ್ಟಿ
ಆಯ್ಕೆಯಾಗಿದ್ದಾರೆ.
ಸಿಂಚನಾ ಎಸ್. ಶಂಕರ್ ಒಂಬತ್ತನೇ ತರಗತಿ ವಿದ್ಯಾರ್ಥಿ ನಿ. ಬೆಂಗಳೂರಿನ ಶ್ರೀ ಕುಮಾರನ್ಸ್ ಚಿಲ್ದ್ರೆನ್ಸ್ ಹೋಂ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾಳೆ.
ರಾಜ್ಯ ಸರ್ಕಾರದಿಂದ ಜಿಲ್ಲಾಮಟ್ಟದಲ್ಲಿ 2021-2022 ನೇ ಸಾಲಿನಲ್ಲಿ ಆಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಕೊಡುವ ಪ್ರತಿಭಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 1)ಕರ್ನಾಟಕ ಪ್ರತಿಭಾ ರತ್ನ(ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ವತಿಯಿಂದ ), 2)ಮೈಸೂರು ರತ್ನ(ಮೈಸೂರಿನಿಂದ), 3)ವರ್ಷದ ಸಾಧಕ ರತ್ನ (2020-2021), 4).ಅಂತಾರಾಷ್ಟ್ರೀಯ ಸ್ಪೆಲ್ ಬೀ(ಸ್ಪೆಲ್ ಬೀ )ನಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ 6ನೇ ಸ್ಥಾನ ದೊರೆತಿದೆ.
5). ಆಕಾಶವಾಣಿ ಬೆಂಗಳೂರಿನಲ್ಲಿ ಮಕ್ಕಳ ದಿನಾಚರಣೆಯಂದು ಸಂದರ್ಶನ ಮಾಡಿದ್ದಾಳೆ. ರೇಡಿಯೋ ಮಣಿಪಾಲದಲ್ಲೂ ಸಂದರ್ಶನ ಮಾಡಿದ್ದಾಳೆ.
ಬಂದಿರುವ ಬಿರುದುಗಳು:
1) ಬೆಳಕಿನ ಕೋಗಿಲೆ, 2) ಚೋಟಾ ಚಾಂಪಿಯನ್ (ನ್ಯಾನೋ ಕಥೆ ಬರೆಯುವ ಸ್ಪರ್ಧೆ), 3) ಜನಮನ ದಸರ ಪುರಸ್ಕಾರ ಪ್ರಶಸ್ತಿ (ಮೈಸೂರು ), 4.ಸ್ವರ್ಣ ಕಲಾರತ್ನ ಸಂಗೀತ (ಕರ್ನಾಟಕ ಶಾಸ್ತ್ರೀಯ, ಭಾವಗೀತೆ, ಚಿತ್ರಗೀತೆ…ಕರೋಕಿ ಗಾಯನ ), ರಾಗ ಸಹಿತ ಶ್ಲೋಕಗಳ ಗಾಯನ, ಭಗವದ್ಗೀತೆ ಅಧ್ಯಾಯಗಳ ಪಠಣ, ಈ ಎಲ್ಲಾ ವಿಭಾಗಗಳಲ್ಲಿ ಶಾಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಬಹುಮಾನಗಳು ಬಂದಿದೆ. ರಿಯಾಲಿಟಿ ಶೋಗಳಾದ ಹಾಡು ಬಾ ಕೋಗಿಲೆ, ಹಾಡು ಸಂತೋಷಕ್ಕೆ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ದೊರಕಿದೆ. ಏಕಪಾತ್ರಭಿನಯ, ಮೂಕಪಾತ್ರಾಭಿನಯ, ಪ್ರಬಂಧ, ಕಥೆ
ಹೇಳುವುದು, ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನಗಳು ಬಂದಿದೆ. ರಾಷ್ಟೀಯ, ಅಂತರ ರಾಷ್ಟೀಯ ‘ಸ್ಪೆಲ್ ಬೀ ‘ (spell bee-English) ಸ್ಪರ್ಧೆಯಲ್ಲಿ ಭಾಗವಹಿಸಿ ಎಕ್ಸಲೆಂನ್ಸ್ ಅವಾರ್ಡ್ (excellence award) ತೆಗೆದುಕೊಂಡಿದ್ದಾಳೆ. ಸಾಮಾನ್ಯ ಜ್ಞಾನ (general knowledge), ಗಣಿತ (maths), ಇಂಗ್ಲಿಷ್ ಒಲಂಪಿಯಾಡ್ನಲ್ಲಿ (Olympiad) ಶಾಲಾ ಚಿನ್ನದ ಹಾಗೂ ಬೆಳ್ಳಿ ಪದಕ ಬಂದಿದೆ.
ಅಬಾಕಸ್ (ABACUS)ನಲ್ಲಿ , ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟೀಯ ಮಟ್ಟದಲ್ಲಿ ಭಾಗವಹಿಸಿ ಶ್ರೀಲಂಕಾದಲ್ಲಿ ಪ್ರಶಸ್ತಿ ಪಡೆದಿದ್ದಾಳೆ. ರೂಬಿಕ್ ಕ್ಯೂಬ್ (Rubic cube) ವೇಗವಾಗಿ ಆಡುವ ಸ್ಪರ್ಧೆಯಲ್ಲಿ ಮತ್ತು ಚೆಸ್ (chess)ಆಟದಲ್ಲೂ ಬಹುಮಾನ ದೊರಕಿದೆ. ಕವನ , ನ್ಯಾನೋ ಕಥೆ , ಸಾಹಿತ್ಯ ಬರವಣಿಗೆಯಲ್ಲಿ ಬಹುಮಾನ ದೊರಕಿದೆ. ಇವಳು ಬರೆದಿರುವ ಕವನ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪುಸ್ತಕ ರೂಪದಲ್ಲಿ ಪ್ರಕಟಣೆ ಆಗಿದೆ.

ಹಲವಾರು ಕಡೆ ಸಂಗೀತ ಕಾರ್ಯಕ್ರಮ ನೀಡಿದ್ದಾಳೆ. ಉಡುಪಿಯ ಮಧ್ವಮಂಟಪದಲ್ಲಿ ಸಂಗೀತ ಗಾಯನ. ಮೈಸೂರಿನ ಅರಮನೆಯ ಮುಂದಿರುವ ಕೋಟೆ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಸಂಗೀತ ಗಾಯನ. ಸುತ್ತೂರು ಜಾತ್ರೆಯಲ್ಲಿ ಗಾಯನ, ಶಕ್ತಿಪೀಠ ದೇವಸ್ಥಾನದಲ್ಲಿ (ಮಹಾಲಕ್ಷ್ಮಿ ಲೇಔಟ್ ) ಗಾಯನ, ಶಂಕರ ಟಿವಿ ಮತ್ತು ಆಯುಷ್ ಟಿವಿಯಲ್ಲಿ ಹಾಡಿದ್ದಾಳೆ. ನಂಜನಗೂಡಿನ ಶಂಕರ ಮಠದಲ್ಲಿ ಹಾಡಿದ್ದಾಳೆ.
ಹಲವಾರು ಬಾರಿ ಫೇಸ್ ಬುಕ್ನಲ್ಲಿ ಲೈವ್ ಕಾರ್ಯಕ್ರಮ ಕೊಟ್ಟಿದ್ದಾಳೆ. ಮ್ಯಾನ್ಡೋಲಿನ್,
ಕೀಬೋರ್ಡ್ ನುಡಿಸುತ್ತಾಳೆ. ಭರತ ನಾಟ್ಯ ಕಲಿತಿದ್ದಾಳೆ. ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಕೊಟ್ಟಿದ್ದಾಳೆ ಮತ್ತು ಅವಳನ್ನು ಸಂದರ್ಶನ ಮಾಡಿದ್ದಾರೆ. ಮೈಸೂರು ಆಕಾಶವಾಣಿಯಲ್ಲಿ ಹಾಡು, ಕಥೆ ಹೇಳಿದ್ದಾಳೆ.


ಪ್ರೀತಮ್ ಶೆಟ್ಟಿ ಮೂರನೇ ತರಗತಿಯ ಪುಟ್ಟ ಬಾಲಕ. ಬೇಲೂರಿನ‌ ವಿದ್ಯಾ ವಿಕಾಸ್ ಪಬ್ಲಿಕ್ ಸ್ಕೂಲ್ ನಲ್ಲಿ ಕಲಿಯುತ್ತಿದ್ದಾನೆ.
ಹವ್ಯಾಸಗಳು: ಹಾಡು ಹೇಳುವುದು, ಡಾನ್ಸ್ ಮಾಡುವುದು , ಆಕ್ಟಿಂಗ್ ಪ್ರೀತಮ್ 4 ವರ್ಷದಿಂದ ಡಾನ್ಸ್ ಕಲಿಯುತ್ತಿದ್ದಾನೆ. ಹಲವಾರು ಡಾನ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾನೆ. ಪ್ರೀತಮ್ ವಿದ್ಯಾಭ್ಯಾಸದಲ್ಲಿ ಮುಂದೆ ಇದ್ದಾನೆ. ವಾಯ್ಸ್ ಆಫ್ ಆರಾಧನಾ ದಲ್ಲಿ ಫೇಸ್ ಬುಕ್ ಲೈವ್ ಬಂದಿದ್ದಾನೆ. ಸ್ಪಂದನ ವಾಹಿನಿಯಲ್ಲಿ ರೈಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ. ವಾಯ್ಸ್ ಆಫ್ ಆರಾಧನಾದಲ್ಲಿ 2022 ರ ಜನವರಿ ತಿಂಗಳ ವಿಜೇತರಾಗಿ ಪ್ರಶಸ್ತಿ ಸಿಕ್ಕಿದೆ. ವಾಯ್ಸ್ ಆಫ್ ಆರಾಧನಾದ ಹಾಡು ಸಂತೋಷಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ.
ಹಲವಾರು ಕಾರ್ಯಕ್ರಮದಲ್ಲಿ ಸ್ಟೇಜ್ ಪ್ರೋಗ್ರಾಂ ಕೊಟ್ಟು ಪ್ರಶಸ್ತಿಗಳನ್ನು ಗಳಿಸಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು