6:41 PM Sunday16 - November 2025
ಬ್ರೇಕಿಂಗ್ ನ್ಯೂಸ್
ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ…

ಇತ್ತೀಚಿನ ಸುದ್ದಿ

ವಿವಾಹಿತ ಮಹಿಳೆಯ ಅತ್ಯಾಚಾರ; ನಗ್ನ ಪೋಟೋ ಕ್ಲಿಕ್ಕಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್: ಆರೋಪಿ ಗ್ರಾಪಂ ಮಾಜಿ ಸದಸ್ಯ ಪ್ರಶಾಂತ್ ಭಟ್ ಬಂಧನ

29/09/2023, 14:04

ಕಾರವಾರ(reporterkarnataka.com):ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ನಂಬಿಸಿ ವಿವಾಹಿತ ಮಹಿಳೆ ಜತೆ ದೈಹಿಕ ಸಂಬಂಧ ನಡೆಸಿ, ಖಾಸಗಿ ಕ್ಷಣದ ಫೋಟೋ ಕ್ಲಿಕ್ಕಿಸಿ ನಂತರ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಗ್ರಾಪಂ ಮಾಜಿ ಸದಸ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಎಂಬಾತ ಬಂಧಿತ ಆರೋಪಿ. ಈತನನ್ನು ಕಾರವಾರ ಪೋಲಿಸರು ಬಂಧಿಸಿದ್ದಾರೆ.
ಸಂಗೀತ ಪ್ರೇಮಿಯಾದ ಸಂತ್ರಸ್ತ ಮಹಿಳೆಯು ಮೊಬೈಲ್ ನಲ್ಲಿರುವ ಕ್ಲಬ್ ಹೌಸ್ ಅಪ್ಲಿಕೇಷನ್ ನಲ್ಲಿ ಆಗಾಗ ಹಾಡು ಹಾಡುತ್ತಿದ್ದರು. 2020 ರಲ್ಲಿ ಕ್ಲಬ್ ಹೌಸ್ ಅಪ್ಲಿಕೇಶನ್ ಮೂಲಕ ಈಕೆಗೆ ಪುತ್ತೂರು ಆರ್ಲಪದವಿನ ನಿವಾಸಿ
35ರ ಹರೆಯದ ಆರೋಪಿ ಪ್ರಶಾಂತ ಭಟ್ ಮಾಣಿಲ ಎಂಬಾತನ ಪರಿಚಯವಾಗುತ್ತದೆ. ನಂತರ ಫೇಸ್ ಬುಕ್ ನಲ್ಲಿ ಇಬ್ಬರೂ ಫ್ರೆಂಡ್ ಆಗುತ್ತಾರೆ.
ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಹೇಳಿ ಆರೋಪಿ ಆಸೆ ಹುಟ್ಟಿಸುತ್ತಾನೆ. ನಂತರ ವಾಟ್ಸಾಪ್ ನಂಬರ್ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಒಂದು ವರ್ಷಕ್ಕೂ ಹೆಚ್ಚುಕಾಲ ಮೊಬೈಲ್ ಮೂಲಕ ಸಂಪರ್ಕದಲ್ಲಿರುತ್ತಾರೆ. ನಂತರ ಆರೋಪಿಯು
ದೂರುದಾರಳ ಭೇಟಿಯಾಗುವ ಬಯಕೆ ವ್ಯಕ್ತಪಡಿಸುತ್ತಾನೆ. ಭೇಟಿಯಾಗುವಂತೆ ಆಗಾಗ ಒತ್ತಾಯಿಸುತ್ತಾನೆ. ನಂತರ ಸಂತ್ರಸ್ತ ವಿವಾಹಿತ ಮಹಿಳೆ ಕೂಡ ಒಪ್ಪಿಗೆ ಸೂಚಿಸುತ್ತಾರೆ. 2023 ಜನವರಿ ಕೊನೆಯ ವಾರದಲ್ಲಿ ಶಿರಸಿ ಮಾರಿಗುಡಿ ದೇವಸ್ಥಾನದಲ್ಲಿ ಇಬ್ಬರೂ ಭೇಟಿಯಾಗುತ್ತಾರೆ. ಅಲ್ಲಿಂದ ಆರೋಪಿ ಮಹಿಳೆಯನ್ನು ಶಿರಸಿಯ ಖಾಸಗಿ ಲಾಡ್ಜ್ ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಮಹಿಳೆಯ ಜತೆ ಬಲಾತ್ಕಾರದಿಂದ ದೈಹಿಕ ಸಂಪರ್ಕ ನಡೆಸುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇದಾದ ನಂತರ 2023 ರ ಫೆಬ್ರುವರಿ ಮೊದಲನೇ ವಾರದಲ್ಲಿ ಮತ್ತೆ ಅದೇ ಶಿರಸಿಯ ಖಾಸಗಿ ಲಾಡ್ಜ್‌ಗೆ ಆರೋಪಿಯು ದೂರುದಾರಳನ್ನು ಕರೆದುಕೊಂಡು ಹೋಗಿ, ಅಲ್ಲಿ ದೂರುದಾರಳ ಮೇಲೆ ಮತ್ತೆ ದೈಹಿಕ ಸಂಪರ್ಕ ನಡೆಸುತ್ತಾನೆ. ಜತೆಗೆ ದೂರುದಾರಳ ಮಹಿಳೆಯ ನಗ್ನ ಫೋಟೋ ಹಾಗೂ ಆತನ ಜೊತೆಗೆ ಫೋಟೋ ತೆಗೆದುಕೊಳ್ಳುತ್ತಾನೆ.
ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡ ಬಳಿಕ ಆರೋಪಿಯು ಪ್ರತಿ ದಿನ ವಾಟ್ಸಪ್‌ನಲ್ಲಿ ಮೆಸೆಜ್ ಮಾಡಿ, ನನ್ನ ನಿನ್ನ ಇಬ್ಬರ ಫೋಟೋ ಹಾಗೂ ನಿನ್ನ ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ನಿನ್ನ ತಾಯಿ ಹಾಗೂ ನಿನ್ನ ಗಂಡನಿಗೆ ಕಳುಹಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಲಾರಂಭಿಸಿದ. ನಂತರ ದೂರುದಾರಳಿಗೆ ಆರೋಪಿಯು ವೀಡಿಯೋ ಕಾಲ್ ಮಾಡಿ, ಬೆತ್ತಲೆ ದೇಹವನ್ನು ತೋರಿಸುವಂತೆ ಹೆದರಿಸಿ, ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದ. ಇದಾದ ಬಳಿಕ ತನಗೆ ಹಣದ ಸಮಸ್ಯೆ ಇದೆ, ನೀನು ನನಗೆ ಹಣ ನೀಡು, ಇಲ್ಲವಾದಲ್ಲಿ ನಾನು ನಿನ್ನ ಬೆತ್ತಲೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪಲೋಡ್ ಮಾಡುವೆ ಎಂದು ಕಿರುಕುಳ ನೀಡಲಾರಂಭಿಸಿದ. ಇದರಿಂದ ಹೆದರಿದ ಮಹಿಳೆ ಈ ವಿಷಯವನ್ನು ತನ್ನ ಗಂಡನಿಗೆ ತಿಳಿಸಿ 25 ಸಾವಿರ ಆರೋಪಿಯ ಮೊಬೈಲ್ ನಂಬರಿಗೆ ಗೂಗಲ್ ಪೇ ಮಾಡಿಸಿದ್ದಾರೆ. ಆದರೂ ಆರೋಪಿ ಪ್ರಶಾಂತ್ ಭಟ್ ಮಾಣಿಲ ತನಗೆ ಇನ್ನೂ ಹಣ ಬೇಕು ಎಂದು ದೂರುದಾರಳಿಗೆ ಬ್ಲ್ಯಾಕ್‌ ಮೇಲ್ ಮಾಡುತ್ತಾ, ಆಕೆಯ ಖಾಸಗಿ ಫೋಟೋಗಳನ್ನು ಹಾಗೂ ತನ್ನ ಜೊತೆ ಇರುವ ಫೋಟೋಗಳನ್ನು ದೂರುದಾರಳ ತಾಯಿಯ ಮೊಬೈಲಿಗೆ ವಾಟ್ಸಪ್ ಮೂಲಕ ಕಳಿಸಿದ್ದ ಎನ್ನಲಾಗಿದೆ. ನಂತರ ದೂರುದಾರ ಮಹಿಳೆಯ ಸ್ನೇಹಿತರಿಗೂ ಕಳುಹಿಸಿದ್ದಾನೆ. ದೂರುದಾರಳ ಗಂಡನಿಗೆ ನಿನ್ನ ಹೆಂಡತಿಯ ಮರ್ಯಾದೆ ಉಳಿಯಬೇಕೆಂದರೆ 7 ಲಕ್ಷ ರೂಪಾಯಿ ನೀಡಿ, ಮರ್ಯಾದೆ ಉಳಿಸಿಕೋ ಎಂದು ಬ್ಯಾಕ್‌ಮೇಲ್ ಮಾಡಿದ್ದು ಹಾಗೂ ದೂರುದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು, ದುಡ್ಡು ನೀಡದಿದ್ದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿದ್ದಾನೆಂದು‌ ಆರೋಪಿಸಲಾಗಿದೆ. ಈ ಕುರಿತು
ನೊಂದ ಮಹಿಳೆ ತನ್ನ ಮನೆಯವರಲ್ಲಿ ಈ ಬಗ್ಗೆ ಚರ್ಚಿಸಿ ಪೋಲಿಸ್ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಕಾರವಾರ ಮಹಿಳಾ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು