ಇತ್ತೀಚಿನ ಸುದ್ದಿ
Virajpete | ಸಿದ್ದಾಪುರ: ಗಣತಿಗೆ ತೆರಳಿದ್ದ ಶಿಕ್ಷಕನ ಮೇಲೆ ಕಾಡಾನೆ ದಾಳಿ; ತೀವ್ರ ಗಾಯ
08/10/2025, 13:46

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಜಾತಿಗಣತಿ ಸಮೀಕ್ಷೆಗೆ ತೆರಳುತ್ತಿದ್ದ ಶಿಕ್ಷಕನ ಮೇಲೆ ಕಾಡಾನೆ ದಾಳಿ ನಡೆದ ಘಟನೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಮಾಲ್ದಾರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಣ್ಯದ ಅಂಚಿನ ಅವರೆಗುಂದ ಅರಣ್ಯ ಪ್ರದೇಶದಲ್ಲಿ ಗೋಣಿಕೊಪ್ಪ ಪ್ರೌಢಶಾಲೆಯ ಶಿಕ್ಷಕ ಶಿವರಾಮ್ ತಮ್ಮ ಬೈಕ್ ನಲ್ಲಿ ಮಾಲ್ದಾರೆ ಮೂಲಕ ಅವರೆಗುಂದ ಬಸವನಹಳ್ಳಿ ಮಾರ್ಗವಾಗಿ ದುಬಾರೆ ಹಾಡಿಗೆ ಸಮೀಕ್ಷೆಗೆ ತೆರಳುತ್ತಿದ್ದ ವೇಳೆ ಶಿಕ್ಷಕ ಶಿವರಾಮ್ ಮೇಲೆ ದಾಳಿಗೆ ಒಂಟಿ ಸಲಗ ಮುಂದಾಗಿದ್ದು, ಗಾಬರಿಯಿಂದ ಬೈಕ್ ನಿಂದ ಬಿದ್ದು ಕಾಲಿಗೆ ಗಂಭೀರ ಗಾಯಗಳಿಂದ ಆನೆ ಯಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಸಿದ್ದಾಪುರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ವಿರಾಜಪೇಟೆ ತಾಲ್ಲೂಕು ತಹಸೀಲ್ದಾರ್ ಪ್ರವೀಣ್ ಕುಮಾರ್ ಹಾಗೂ ಕಂದಾಯ ಪರಿವಿಕ್ಷಕ ಅನಿಲ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.