ಇತ್ತೀಚಿನ ಸುದ್ದಿ
ವಿರಾಜಪೇಟೆ ಆಡಳಿತ ಭವನಕ್ಕಿಲ್ಲ ಲಿಫ್ಟ್ ಸೌಲಭ್ಯ, ವೀಲ್ ಚೇರ್: ಮಾನವ ಹಕ್ಕು ಆಯೋಗಕ್ಕೆ ದೂರು ಪ್ರಕರಣ ದಾಖಲು
06/07/2025, 13:17

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲೂಕು ಆಡಳಿತ ಭವನ ( ಮಿನಿ ವಿಧಾನ ಸೌದ )
ದಲ್ಲಿ ಲಿಫ್ಟ್ ವ್ಯವಸ್ಥೆ ಇಲ್ಲದೆ ಮತ್ತು ವೀಲ್ ಚೇರ್ ಹೋಗಲು ಮಾರ್ಗ ವಿಲ್ಲದೆ ವಿಶೇಷ ಚೇತನರು, ವೃದ್ಧರು, ಹಿರಿಯ ನಾಗರೀಕರು, ಅರೋಗ್ಯ ಸಮಸ್ಯೆ ಇರುವವರು ತಾಲೂಕು ಆಡಳಿತ ಭವನದ ಮೊದಲ ಮಹಡಿಯಲ್ಲಿರುವ ಉಪ ನೋಂದಣಿ ಕಚೇರಿ, ಭೂ ದಾಖಲೆ ಗಳ ಕಚೇರಿ ಹೋಗಲು ಸಂಕಷ್ಟಪಡುತಿರುವ ಬಗ್ಗೆ ಹಲವು ಬಾರಿ ಮಾಧ್ಯಮದಲ್ಲಿ ಸುದ್ದಿ ಯಾಗಿದ್ದರು, ಅಧಿಕಾರಿ ಗಳಿಗೆ ದೂರು ನೀಡಿದರು ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. ಇದೀಗ ಮಾನವ ಹಕ್ಕು ಆಯೋಗಕ್ಕೆ ಸ್ಥಳೀಯರು ಒಬ್ಬರು ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗ ಮೊಕದ್ದಮೆ ಸಂಖ್ಯೆ 3333/10/23/2025 ಪ್ರಕರಣ ದಾಖಲಿಸಿಕೊಂಡಿದೆ.
ಯಾವುದೇ ಸರ್ಕಾರಿ ಕಚೇರಿಗಳಲ್ಲಿ, ಎರಡು ಮೂರು ಅಂತಸ್ತು ಕಟ್ಟಡ ನಿರ್ಮಿಸುವಾಗ ಕಡ್ಡಾಯವಾಗಿ ಲಿಫ್ಟ್ ವ್ಯವಸ್ಥೆ ಹಾಗೂ ಗಾಲಿ ಕುರ್ಚಿಗಳಲ್ಲಿ ತೆರಳಲು ಕಟ್ಟಡದಲ್ಲಿ ಅವಕಾಶ ಮಾಡಿಕೊಡಬೇಕಾಗಿರೋದು ನಿಯಮ. ಆದರೆ ವಿರಾಜಪೇಟೆ ಮಿನಿವಿಧಾನಸೌಧದಲ್ಲಿ, ಯಾವುದೇ ರೀತಿಯ ಸೌಕರ್ಯವನ್ನು ಕಲ್ಪಿಸಿಲ್ಲ. ಈ ಕಟ್ಟಡದ ಉದ್ಘಾಟನೆಗೆ ಕಂದಾಯ ಸಚಿವರು ಒಳಗೊಂಡು, ಹಿರಿಯ ಕಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು ಕೂಡ ಈ ಬಗೆ ಗಮನಿಸಲಿಲ್ಲ. ಕಚೇರಿ ಕಟ್ಟಡ ಕಾರ್ಯಾರಂಭ ಆದ ನಂತರ ವಿಕಲಚೇತನರು ಸೇರಿದಂತೆ, ಹಿರಿಯ ನಾಗರಿಕರಿಗೆ ಒಂದನೇ ಮಹಡಿಯಲ್ಲಿರುವ ಸರ್ವೆ ಕಚೇರಿ, ಭೂ ದಾಖಲೆಗಳ ಕಚೇರಿ, ಅದರಲ್ಲೂ ಪ್ರಮುಖವಾಗಿ ಉಪ ನೋಂದಣಿ ಕಚೇರಿಗೆ ತೆರಳಲು ಅನಾನುಕೂಲ ಉಂಟಾಗಿದೆ. ಕರ್ನಾಟಕಕ್ಕೆ ಹೆಚ್ಚು ರಾಜ್ಯಸ್ವ ಸಂಗ್ರಹಿಸಿ ನೀಡುವ ಅಬಕಾರಿ ಇಲಾಖೆಯ ಕಚೇರಿ ಎರಡನೇ ಮಹಡಿಯಲ್ಲಿದೆ.
ಸೋಜಿಗದ ವಿಚಾರವೇನೆಂದರೆ, ಕೆಳಗಿನ ಅಂತಸ್ತಿನಲ್ಲಿ ಹಲವು ಕೊಠಡಿಗಳು ಖಾಲಿ ಇವೆ ಸದ್ಯದ ಮಟ್ಟಿಗೆ ಪ್ರಮುಖವಾಗಿ ಉಪ ನೋಂದಾವಣೆ ಕಚೇರಿ ಸೇರಿದಂತೆ, ಭೂ ದಾಖಲೆಗಳ ಕಚೇರಿಯನ್ನು ಕೆಳ ಅಂತಸ್ತಿನ ಕೊಠಡಿಗಳಿಗೆ ವರ್ಗಾಯಿಸುವಂತೆ ಕೂಡ ಈ ಹಿಂದೆ ನಾಗರಿಕರು ಒತ್ತಾಯಿಸಿದ್ದರು. ಈ ಬಗ್ಗೆ ಪತ್ರಿಕೆ, ಮಾಧ್ಯಮಗಳಲ್ಲಿ ಸಹ ಸುದ್ದಿ ಪ್ರಕಟಗೊಂಡಿತ್ತು. ಜನಪ್ರತಿನಿಧಿಗಳು ಒಳಗೊಂಡು ಅಧಿಕಾರಿಗಳು ಕೂಡ ಇದನ್ನು ಗಮನಿಸಿ ಇದು ತಮಗೆ ಸಂಬಂಧಿಸಿದಲ್ಲ ಎಂಬಂತೆ ನಿರ್ಲಕ್ಷ ವಹಿಸಿ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. ಇದೀಗ ಇದನ್ನೆಲ್ಲವನ್ನು ಗಮನಿಸಿದ ಸ್ಥಳೀಯರು ಈ ಬಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ಆಯೋಗ ನೀಡುವ ಆದೇಶದಿಂದಲಾದರೂ ಇವರುಗಳು ಬುದ್ಧಿ ಕಲಿಯಬಹುದೇನೋ ಎಂಬ ನಿರೀಕ್ಷೆಯಲ್ಲಿ ದೂರು ನೀಡಿದವರು ಇದ್ದಾರೆ.