ಇತ್ತೀಚಿನ ಸುದ್ದಿ
ವಿರಾಜಪೇಟೆ | ಕ್ಷುಲ್ಲಕ ಕಾರಣ: ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ಯುವಕರ ಮಾರಮಾರಿ..!!
05/12/2025, 20:41
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ಪಟ್ಟಣದ ಹೃದಯ ಭಾಗದಲ್ಲಿ ಯುವಕರಿಬ್ಬರು ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿ ಪರಸ್ಪರ ಹೊಡೆದಾಡಿದ ಘಟನೆ ನಡೆದಿದೆ.



ಹುತ್ತರಿ ಹಬ್ಬದ ಸಂಭ್ರಮದಲ್ಲಿದ್ದ ಇಬ್ಬರು ಹಗಲಿನಲ್ಲೇ ಬಾರಿನಲ್ಲಿ ಕುಡಿದು ಸಣ್ಣ ಪುಟ್ಟ ವಿಚಾರಕ್ಕೆ ಆರಂಭಗೊಂಡಿದ್ದು, ಜಗಳ ತೀವ್ರ ಸ್ವರೂಪಕ್ಕೆ ತೆರಳುತ್ತಿದ್ದಂತೆ, ಬಾರ್ ಮ್ಯಾನೇಜರ್ ಬಿಲ್ ಪಡೆದು ಹೊರದಬ್ಬಿದ್ದಾರೆ. ಬಳಿಕ ಈ ಜಗಳ ರಸ್ತೆಯಲ್ಲಿ ಮುಂದುವರೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇವರ ಜಗಳದಿಂದ ಸಾವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












