4:36 AM Sunday25 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

ವೀರಾಜಪೇಟೆ: ಅನ್ನ ನೀಡಿದ ಸಂಸ್ಥೆಗೆ ಕನ್ನ;  1 ಲಕ್ಷ ರೂ. ದೋಚಿದ ಇಬ್ಬರು ಡೆಲಿವರಿ ಬಾಯ್ ಗಳ ಬಂಧನ

25/06/2022, 12:18

ಮಡಿಕೇರಿ(reporterkarnataka.com):  ಅನ್ನ ನೀಡಿದ ಸಂಸ್ಥೆಗೆ ಕನ್ನ ಹಾಕಲು ಹೋಗಿ ಇಬ್ಬರು ಆರೋಪಿಗಳು ಪೊಲೀಸ್ ಅತಿಥಿಯಾದ ಘಟನೆ ವೀರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿ ನಡೆದಿದೆ.

ವೆಬ್ ಸಿರೀಸ್ ನಲ್ಲಿ ಬರುವ ಸೀರಿಯಲ್ ಗಳನ್ನು ವೀಕ್ಷಿಸಿ ಅದೇ ತಂತ್ರವನ್ನು ಬಳಸಿ ನಗದು ಕಳ್ಳತನ ಮಾಡಲು ಹೊರಟು ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮದ ಹೆಗ್ಗಳ ನಿರ್ಮಲಗಿರಿ ಗ್ರಾಮದ ನಿವಾಸಿ ಎಸ್. ಸಿವಿನ್  (೨೦)  ಮತ್ತು ಸೆಬಾಸ್ಟೀನ್ ಡಿಸೋಜಾ (೨೦) ಬಂಧನಕ್ಕೀಡಾಗಿದ್ದಾರೆ.

ಘಟನೆಯ ವಿವರ: ವಿರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿರುವ ಇನ್ಪಾಕಾರ್ಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 12ರಂದು ರಾತ್ರಿ ನಗದು ಕಳ್ಳತನ ನಡೆದಿತ್ತು. ಬಂಧಿತ ಇಬ್ಬರು ಆರೋಪಿಗಳು  ಬಡ ಕುಟುಂಬದಿಂದ ಬಂದಿರುವರಾಗಿದ್ದಾರೆ. ಕೆಲಸ ಅರಿಸಿಕೊಂಡಿರುವ ವೇಳೆಯಲ್ಲಿ ಸಂಸ್ಥೆಯಲ್ಲಿ ಡೆಲೆವರಿ ಬಾಯ್ ಗಳಾಗಿ ಕೆಲಸಕ್ಕೆ ಸೇರಿಕೊಂಡಿದ್ದರು.

ಮೊದಲಿಗೆ ಪ್ರಕರಣದ ಎರಡನೇ ಆರೋಪಿಯಾಗಿರುವ ಸೆಬಾಸ್ಟೀನ್ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ನಂತರ ಸ್ನೇಹಿತನಾದ ಸಿವಿನ್ ಕೆಲಸಕ್ಕೆ ಸೇರ್ಪಡೆಯಾಗುತ್ತಾನೆ. ಒಂದೇ ಊರಿನವರಾದ ಇರ್ವರು ಸೇವೆಯಲ್ಲಿ ಮುಂದುವರೆಯುತ್ತಾರೆ. ಸಿವಿನ್ ಗೆ ಮೋಬೈಲ್ ನಲ್ಲಿ ಬರುವ  ಮನಿ ಹ್ಯಾಕ್ ವೆಬ್ ಸಿರೀಸ್ ನೋಡುವ ಹುಚ್ಚು ತೆಲೆಗೇರುತ್ತದೆ. ಸಿರೀಸ್ ನಿಂದ ಪ್ರಭಾವಿತನಾದ ಸಿವಿನ್ ತನ್ನ ಮಿತ್ರನಿಗೂ ತಿಳಿಸಿಕೊಡುತ್ತಾನೆ. ನಂತರದಲ್ಲಿ ಫ್ರೀ ಪ್ಲೇನ್ ಸಿದ್ದವಾಗುತ್ತದೆ. ದಿನ ನಿತ್ಯ ಸಂಸ್ಥೆಗೆ ಲಕ್ಷದ ವ್ಯವಹಾರ ನಡೆಯುತ್ತಿದೆ. ಹೇಗಾದರು ಮಾಡಿ ಹಣ ಲಪಾಟಯಿಸಬೇಕು ಎಂದು ಇರ್ವರ ಪ್ಲಾನ್ ಹಾಕುತ್ತಾರೆ. ಅದರಂತೆ ಸಂಸ್ಥೆಗೆ ಸೇರಿದ ಸುಮಾರು 1 ಲಕ್ಷ ರೂ. ಲಪಟಾಯಿಸಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು