11:34 PM Sunday25 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

ವಿರಾಜಪೇಟೆ: ವ್ಯಾಘ್ರ ದಾಳಿಗೆ 2 ಹಸು ಸಾವು; ಸಿಸಿಟಿವಿಯಲ್ಲಿ ಹುಲಿ ಚಿತ್ರ ಸೆರೆ; ಸ್ಥಳೀಯರಲ್ಲಿ ಆತಂಕ

24/06/2022, 19:35

ಸಾಂದರ್ಭಿಕ ಚಿತ್ರ
ಮಡಿಕೇರಿ(reporterkarnataka.com):
ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಘಟ್ಟದಳ ಬಳಿ ಟಾಟಾ ಸಂಸ್ಥೆಯ ಮಾರ್ಗೊಲ್ಲಿ ಎಸ್ಟೇಟ್ ಹಾಗೂ ಪಾಲಿಬೆಟ್ಟ ದ ದುಬಾರಿ ಎಸ್ಟೇಟ್ ನಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಎರಡೂ ಕಡೆಯೂ‌ ಒಂದೊಂದು ಹಸುವನ್ನು ಕೊಂದಿದೆ.‌‌ ಎರಡೂ ಕಡೆಯೂ ಒಂದೇ ಹುಲಿ ದಾಳಿ ನಡೆಸಿದೆಯೆ ಅಥವಾ ಎರಡೂ ಬೇರೆ ಬೇರೆಯೆ ಎಂಬುದು ತಿಳಿದು ಬಂದಿಲ್ಲ.

ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪ 10 ಕಿ.ಮೀ ವ್ಯಾಪ್ತಿಯಲ್ಲಿ ಹುಲಿಯ ಚಲನವಲನಗಳು ಕಂಡು ಬಂದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿದೆ. 

ಘಟ್ಟದಳ ಸಮೀಪದ ಟಾಟಾ ಸಂಸ್ಥೆಯ ಮಾರ್ಗೊಲ್ಲಿ ಎಸ್ಟೇಟ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಹುಲಿ ಚಿತ್ರ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೆಲ ದಿನಗಳ ಹಿಂದೆ ಎಸ್ಟೇಟ್ ನಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಸಂಸ್ಥೆಯ ವತಿಯಿಂದ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಎಸ್ಟೇಟ್ ನ ತೋಟದ ಒಳಭಾಗದಲ್ಲಿ ಹಸುವೊಂದನ್ನು ಹುಲಿ ಬೇಟೆಯಾಡಿ ಕೊಂದಿದ್ದು, ಸಿ.ಸಿ.ಟಿ‌.ವಿ ಕ್ಯಾಮೆರಾದಲ್ಲಿ  ದೃಶ್ಯ ಸೆರೆಯಾಗಿದೆ. ದಷ್ಟಪುಷ್ಟವಾದ ಹುಲಿಯಾಗಿದ್ದು, 8 ವರ್ಷ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಕೂಂಬಿಂಗ್ ಆರಂಭಿಸುವುದಾಗಿ ತಿಳಿಸಿದ್ದಾರೆ. 

ಪಾಲಿಬೆಟ್ಟದಲ್ಲೂ ಆತಂಕ: ಬುಧವಾರ ರಾತ್ರಿ ಪಾಲಿಬೆಟ್ಟ ದ ದುಬಾರಿ ಎಸ್ಟೇಟ್ ನಲ್ಲಿ ಹುಲಿ ದಾಳಿ ನಡೆಸಿ  ಹಸುವೊಂದನ್ನು ಕೊಂದು ಹಾಕಿತ್ತು. ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಕ್ಯಾಮೆರಾ ಅಳವಡಿಸಿದೆ‌. ಶುಕ್ರವಾರ ಕ್ಯಾಮೆರಾದಲ್ಲಿ ಹುಲಿ ದೃಶ್ಯ ಸೆರೆಯಾಗಿಲ್ಲ. ಹುಲಿ ಇದೆ ಎಂಬ ಕಾರಣ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿ ಇದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು