5:39 PM Monday25 - August 2025
ಬ್ರೇಕಿಂಗ್ ನ್ಯೂಸ್
Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಇತ್ತೀಚಿನ ಸುದ್ದಿ

ಗಣೇಶೋತ್ಸವಕ್ಕೆ ವಿನಾಯಕ ರೆಡಿ: 5 ಸಾವಿರಕ್ಕೂ ಹೆಚ್ಚು ಗಣಪತಿ ವಿಗ್ರಹ ರೂಪಿಸಿದ ಎಸ್.ಎನ್.ಹೊಳ್ಳ!

25/08/2025, 17:34

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ಕಳೆದ 40 ವರ್ಷಗಳಿಂದ ಐದು ಸಾವಿರಕ್ಕೂ ಹೆಚ್ಚಿನ ಗಣೇಶ ಮೂರ್ತಿಯನ್ನು ನಿರ್ಮಾಣ ಮಾಡಿ ಸಾರ್ವಜನಿಕ ಗಣೇಶೋತ್ಸವಕ್ಕೆ ಒದಗಿಸಿದವರು ಬಂಟ್ವಾಳದ ಶಂಕರ ನಾರಾಯಣ ಹೊಳ್ಳರು ಈ ಬಾರಿಯೂ 100ಕ್ಕೂ ಹೆಚ್ಚಿನ ಗಣೇಶನ ವಿಗ್ರಹವನ್ನು ನಿರ್ಮಾಣ ಮಾಡಿದ್ದು, ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಠಾಪನೆಯಾಗಿ ಪೂಜೆಗೊಳ್ಳಲಿದೆ.


ಹೊಳ್ಳರು ತನ್ನ ತಂದೆ ಎಸ್.ವಿ.ಎಸ್ .ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಬಿ.ಕೃಷ್ಣ ಹೊಳ್ಳರಿಂದ ವಿಗ್ರಹದ ನಿರ್ಮಾಣದ ಕೈಚಳಕವನ್ನು ಕರಗತ ಮಾಡಿಕೊಂಡಿದ್ದಾರೆ. ಆವೆ ಮಣ್ಣಿನಿಂದ ಮಾಡಿದ ವಿಗ್ರಹವು ಯಾವುದೇ ಪೈಂಟ್ ಬಳಸದೆ ವಾಟರ್ ಕಲರ್‌ನಿಂದ ನಿರ್ಮಾಣ ಮಾಡಿರುತ್ತಾರೆ. ಕಳೆದ 3 ತಿಂಗಳಿನಿಂದ ಮೂರ್ತಿ ನಿರ್ಮಾಣದ ಕೆಲಸವನ್ನು ಗಣೇಶೋತ್ಸವ ಸಮಿತಿಗಳ ಅಪೇಕ್ಷೆಯಂತೆ ವಿವಿಧ ಅಕಾರದ ಪೀಠಗಳಲ್ಲಿ ನಿರ್ಮಿಸಿದ್ದಾರೆ. 1ಅಡಿಯಿಂದ 5 ಅಡಿಯವರೆಗಿನ ಮೂರ್ತಿಗಳು ಪಾಣೆಮಂಗಳೂರು ವೀರವಿಠಲ ದೇವಸ್ಥಾನದ ವಠಾರದಲ್ಲಿ ಸಿದ್ಧವಾಗಿದೆ. ಮೂರ್ತಿಯ ಮೇಲೆ ಬೆಳ್ಳಿ ಕಿರೀಟವನ್ನು ಇರಿಸಿ ಗಣೇಶೋತ್ಸವ ಸಂದರ್ಭದಲ್ಲಿ ವಿವಿಧ ಹೂವಿನ ಅಲಂಕಾರಗಳನ್ನು ಮಾಡಲಾಗುತ್ತದೆ. ಮನೆಗಳಲ್ಲಿಯೂ ಪೀತಾಂಬರ ಬಣ್ಣದ ವಿಗ್ರಹವನಿಟ್ಟು ಆರಾಧನೆ ಮಾಡುತ್ತಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಸಜಿಪ ಯುವಕ ಮಂಡಲದ 52ನೇ ವರ್ಷದ ಗಣೇಶೋತ್ಸವ , ಕಲ್ಲಡ್ಕದಲ್ಲಿ 50ನೇ ಗಣೇಶೋತ್ಸವ , ಬಿ.ಸಿ.ರೋಡಿನಲ್ಲಿ 46ನೇ ಗಣೇಶೋತ್ಸವ, ಫರಂಗಿಪೇಟೆಯಲ್ಲಿ 43ನೇ ಗಣೇಶೋತ್ಸವ, ಪಾಣೆಮಂಗಳೂರು ನರಿಕೊಂಬು ನವಜೀವನ ವ್ಯಾಯಾಮ ಶಾಲೆಯಲ್ಲಿ 43ನೇ ಗಣೇಶೋತ್ಸವ ಸೇರಿದಂತೆ ವಿವಿಧೆಡೆ ಸಾರ್ವಜನಿಕ ಗಣೇಶೋತ್ಸವಕ್ಕೆ ಸಿದ್ದತೆಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು