ಇತ್ತೀಚಿನ ಸುದ್ದಿ
ವಿಜಯಪುರ: ಸಾಲಬಾಧೆಯಿಂದ ಕಂಗೆಟ್ಟು ಕಾಮನಕೇರಿ ಗ್ರಾಮದ ರೈತ ನೇಣಿಗೆ ಶರಣು
11/07/2024, 15:18
ವಿಜಯಪುರ(reporterkarnataka.com): ಸಾಲ ಬಾಧೆಯಿಂದ ಬೇಸತ್ತು ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಾಮನಕೇರಿ ಗ್ರಾಮದಲ್ಲಿ ನಡೆದಿದೆ.
ಹನುಮಂತ ಭೀಮಪ್ಪ ಹಂಚಲಿ (59 ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಬಿ.ಸಿ , ಬೆಳೆ ಸಾಲ, ಕೈ ಸಾಲ,ಬಂಗಾರ ಅಡ ಇಟ್ಟಿರುವ ಸಾಲ, ಗ್ರಾಮೀಣ ವಿಕಾಸ ಬ್ಯಾಂಕ್ ಹಾಗೂ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಕುದರಿ ಸಾಲವಾಡಗಿ ಸೇರಿದಂತೆ 10 ಲಕ್ಷಕ್ಕೂ ಅಧಿಕ ಸಾಲವನ್ನು ಮಾಡಿದ್ದ ಎನ್ನಲಾಗಿದೆ. ಹೋದ ವರ್ಷದ ಬರಗಾಲ ಇದ್ದರಿಂದ ಹೊಲದಿಂದ ಅಪಾರ ನಷ್ಟ ಉಂಟಾಗಿತ್ತು. 10 ಎಕರೆ ಜಮೀನು ಹೊಂದಿದ್ರು ಕೂಡಾ ಯಾವುದೇ ಬೆಳೆ ಇಲ್ಲದೆ ನಷ್ಟಕ್ಕೆ ಒಳಗಾಗಿದ್ದ. ಲಕ್ಷಗಟ್ಟಲೆ ಸಾಲವನ್ನು ತೀರಿಸಲಾಗದೆ ಕಂಗೆಟ್ಟಿದ್ದ ರೈತ ನೇಣಿಗೆ ಶರಣಾಗಿದ್ದಾನೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.