ಇತ್ತೀಚಿನ ಸುದ್ದಿ
ವಿಜಯನಗರ: ವರಲಹಳ್ಳಿ ಸೊಸೈಟಿಯಲ್ಲಿ ಕೋಟಿ ರೂ.ಗಳ ಹಗರಣ?; ದೂರು ದಾಖಲಿಸುವಂತೆ ರೈತರ ಅಗ್ರಹ
01/10/2022, 18:31
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ವರಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಸಕ್ತ ವರ್ಷದ ವಾರ್ಷಿಕ ಮಹಾಜನ ಸಭೆ ಜರುಗಿತು. ಷೇರುದಾರ ರೈತರು ಸಭೆಯಲ್ಲಿ ಸೊಸೈಟಿ ಸಿಬ್ಬಂದಿಯಿಂದ ನಿರಂತರ ಅನ್ಯಾಯ ಆಗುತ್ತಿದೆ ಹಾಗೂ ವಂಚನೆ ಮಾಡಿದ್ದಾರೆಂದು ಹತ್ತಾರು ರೈತರು ಆರೋಪಿಸಿದರು. ಸಿಬ್ಬಂದಿಯಿಂದ ಅಧಿಕಾರ ದುರುಪಯೋಗ ಮತ್ತು ಹಣ ದುರ್ಬಳಕೆ ಆಗಿದೆ. ಹಲವರಿಗೆ ಸೊಸೈಟಿಯ ಕೆಲ ಸಿಬ್ಬಂದಿಯಿಂದ ವಂಚನೆಯಾಗಿದೆ ಎಂದು ಹಲವು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಪ್ರಾರಂಭದಿಂದ ಕೊನೆಯ ವರೆಗೂ ಸೊಸೈಟಿಯಲ್ಲಿ ಜರುಗಿದೆ ಎನ್ನಲಾಗುತ್ತಿರುವ ಭಾರೀ ಹಗರಣ ಹಾಗೂ ಅವ್ಯವಹಾರಗಳ ಆರೋಪಗಳ ಸುರಿಮಳೆಯೇ ಸುರಿಯಿತು. ಸೊಸೈಟಿಯಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಆಗಿದ್ದು, ತಮ್ಮನ್ನು ಸದಸ್ಯತ್ವದಿಂದ ಕೈಬಿಡಿ ಎಂದು ಕೋರಿದರೂ ಸ್ಪಂದಿಸಿಲ್ಲ. ರೈತರ ಹೆಸರಲ್ಲಿ ಅವರಿಗೆ ತಿಳಿಯದಂತೆ ಸಿಬ್ಬಂದಿ ಸಾಲ ಪಡೆದಿದ್ದು, ಬಡ್ಡಿ ತಮ್ಮಂದಿಲೇ ವಸೂಲಿ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದರು.
ಒಬ್ಬರ ಹೆಸರಲ್ಲಿ ಹಲವು ಖಾತೆಗಳನ್ನು ತೆರದು ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಮೆಲ್ನೋಟಕ್ಕೆ ಇಪ್ಪತ್ತು ಲಕ್ಷದಷ್ಟು ಅವ್ಯವಹಾರ ಜರುಗಿದ್ದು ಬಯಲಿಗೆ ಬಂದಿದೆ, ತನಿಖೆಯಾದರೆ ಸುಮಾರ ಕೋಟಿ ರೂ.ಗಳಷ್ಟು ಮೊತ್ತದ ಹಗರಣಗಳು ಬೆಳಕಿಗೆ ಬರಲಿವೆ ಎಂದು ನೆರೆದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸೊಸೈಟಿ ಪ್ರಾರಂಭಗೊಂಡು ನಾಲ್ಕು ದಶಕಗಳೇ ಗತಿಸಿದ್ದು, ಈವರೆಗೂ ಸೊಸೈಟಿ ಸಭೆ ನಡೆಸಿಲ್ಲ ರೈತರಿಗೆ ನೆರವು ನೀಡಿಲ್ಲ. ರೈತರ ಹೆಸರಲ್ಲಿ ಖಾತೆಗಳನ್ನ ತೆರೆದು ಸಿಬ್ಬಂದಿಗಳೇ ರೈತರ ಹೆಸರಲ್ಲಿ ಸಾಲ ಪಡೆಯುತ್ತಿದ್ದಾರೆ, ಸರ್ಕಾರದ ಪರಿಹಾರ ಹಣ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ರೈತರ ಹೆಸರಲ್ಲಿ ಸಿಬ್ಬಂದಿಯವರೇ ದುರ್ಭಳಕೆ ಮಾಡಿದ್ದಾರೆ ಎಂದು ನೊಂದ ರೈತರು ಆರೋಪಿಸಿದ್ದಾರೆ. ಸೋಸೈಟಿಯೊಂದಿಗೆ ಸಹಕರಿಸುತ್ತಿರುವ ಬ್ಯಾಂಕ್ ನ ಸ್ಥಳೀಯ ಶಾಖೆಯಲ್ಲೂ ರೈತರಿಗೆ ಸರಿಯಾದ ಸ್ಪಂಧನೆ ಸಿಗುತ್ತಿಲ್ಲ. ಸಹಕಾರ ಬ್ಯಾಂಕ್ ನಲ್ಲಿ ಸಾಕಷ್ಟು ಅನ್ಯಾಯ ಹಾಗೂ ವಂಚನೆ ಜರುಗಿವೆ ಎಂದು ರೈತರು ದೂರಿದರು. ಒಬ್ಬ ರೈತನ ಆಧಾರ್ ಸಂಖ್ಯ ಬಳಸಿ ಫೋರ್ಜರಿ ಸಹಿ ಮಾಡಿಕೊಂಡು ತಾವೇ ಮತ್ತೊಂದು ಖಾತೆ ತೆರೆದು, ಕೆಲ ಸಿಬ್ಬಂದಿಯೇ ರೈತರ ಹೆಸರಲ್ಲಿ ಸಾಲ ಪಡೆದಿದ್ದಾರೆ. ಖಾತೆಯ ಸದಸ್ಯರ ಹೆಸರಲ್ಲಿ ಅನ್ಯರು ಎಟಿಎಮ್ ಬಳಸುತ್ತಿದ್ದಾರೆ, ರೈತರ ಹೆಸರಲ್ಲಿ ಅನ್ಯರು ಖಾತೆ ತೆರೆದು ಲಕ್ಷಗಟ್ಟಲೆ ಸಾಲಪಡೆದಿದ್ದಾರೆ, ಅವರ ಹೆಸರಲ್ಲಿ ಏಟಿಎಂ ಬಳಸಲಾಗುತ್ತಿದೆ. ಇಂತಹ ಹತ್ತಾರು ಪ್ರಕರಣಗಳು ಸಭೆಯಲ್ಲಿ ಬೆಳಕಿಗೆ ಬಂದಿವೆ. ಸಮಗ್ತ ತನಿಖೆಯಾಗಬೇಕಿದೆ. ಅಂದಾಗ ಮಾತ್ರ ರೈತರಿಗೆ ನ್ಯಾಯ ಸಿಗಲಿದೆ, ಸಹಕಾರ ಸಂಘ ಹಾಗೂ ಸಹಕಾರ ಬ್ಯಾಂಕ್ ನಲ್ಲಿರುವ ಭ್ರಷ್ಟಾ ಸಿಬ್ಬಂದಿಗಳ ನಿಜ ಬಣ್ಣ ಬಯಲಿಗೆ ಬರಲಿದೆ ಎನ್ನುತ್ತಾರೆ ರೈತ ಮುಖಂಡರು. ರೈತರು ತಾವು ಪಡೆಯದ ಸಾಲಕ್ಕೆ ಸಾಲಗಾರ ಪಟ್ಟ ಹೊಂದಿದ್ದಾರೆ. ಆ ಸಾಲ ಕಟ್ಟದಿರುವುದಕ್ಕೆ ನಿಜವಾದ ಅಮಾಯಕ ರೈತರಿಗೆ ಬ್ಯಾಂಕ್ ನವರು ಹಾಗೂ ರೈತರಿಗೆ ಸಾಲ ಮರುಪಾವತಿಗೆ ನೋಟೀಸ್ ಜಾರಿ ಮಾಡಿರುವ, ಪ್ರಕರಣಗಳು ಹತ್ತಾರು ಇವೆ ಎಂದು ರೈತರು ದೂರಿದರು.
ಇಂತಹ ನಾಚಿಗೆ ಇಲ್ಲದೇ ಭ್ರಷ್ಟಾಚಾರ ಎಸಗಿರುವ ಸೊಸೈಟಿ ಹಾಗೂ ಸಹಕಾರ ಬ್ಯಾಂಕ್ ತಪ್ಪಿತಸ್ತ ಸಿಬ್ಬಂದಿಗಳ ವಿರುದ್ಧ. ಕೂಡಲೇ ದೂರು ದಾಖಲಾಗಬೇಕು ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ಸೋಸೈಟಿ ಪ್ರಾರಂಭದಿಂದ ಇಲ್ಲಿಯವರೆಗೆ ಜರುಗಿರುವ ಎಲ್ಲಾ ಹಗರಣಗಳ ತನಿಖೆಯಾಗಬೇಕೆಂದು. ತಪ್ಪಿತಸ್ಥ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಪ್ರಾರಂಭದಲ್ಲಿ ಅವರ ಆಸ್ಥಿ ಮುಟ್ಟುಗೋಲು ಹಾಕಿಕೊಂಡು ತನಿಖೆ ಪ್ರಾರಂಭಿಸಬೇಕು ಜೊತೆ ಅವರಿಂದ ದಂಡ ಹಣ ವಸೂಲಿ ಮಾಡಬೇಕೆಂದು ರೈತರು ಸಭೆಯಲ್ಲಿ ಒತ್ತಾಯಿಸಿದರು. ಸಹಕಾರ ಸಂಘದ ಉತ್ತನಾಧಿಕಾರಿ ಮಾತನಾಡಿ, ಈಗಾಗಲೆ ಬಂದಿರು ದೂರುಗಳನ್ನಾಧರಿಸಿ ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ, ನಿಯಮಾನುಸಾರ ಶಿಸ್ಥು ಕ್ರಮ ಜರುಗಿಸಿರುವುದಾಗಿ ಸಭೆಗೆ ತಿಳಿಸಿದರು. ಅವ್ಯವಹಾರ ಕುರಿತು ಪರಿಶೀಸಿ ಕ್ರಮ ಜರುಗಿಸಲಾಗುವುದು, ಸಾಭೀತಾಗಿರುವ ಪ್ರಕರಣಗಳ ಕುರಿತು ಗಂಭೀರ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸೋಸೈಟಿ ನಿಯಮದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿದ್ದು, ಪ್ರಾಥಮಿಕ ಹಂತದಲ್ಲಿ ದಾಖಲುಗಳ ಪ್ರಕಾರ ಒಟ್ಟು ಹಣ ಇಪ್ಪತೆರೆಡು ಲಕ್ಷ ರೂಗಳನ್ನು ದುರುಪಯೋಗ ಮಾಡಿಕೊಂಡಿರುದು ಖಚಿತವಾಗಿದ್ದು, ತಪ್ಪಿತಸ್ತರಿಗೆ ನಿಗದಿತ ಸಮಯದೊಳಗೆ ಹಣ ಮರುಪಾವತಿಗೆ ಸೂಚಿಸಲಾಗಿದೆ ಎಂದರು. ಸಭೆಯಲ್ಲಿ ಪ್ರಸಕ್ತ ಸಾಲಿನ ಸೊಸೈಟಿ ನಿರ್ಧೇಶಕರು ಹಾಗೂ ಷೇರುದಾರರು ರೈತರು, ಸಹಕಾರ ಸಂಘದ ಮತ್ತು ಕೆಲ ಸಿಬ್ಬಂದಿ. ಸಹಕಾರ ಬ್ಯಾಂಕ್ ಅಧಿಕಾರಿಗಳು ಹಾಗೂ ಕೆಲ ಸಿಬ್ಬಂದಿ ಹಾಜರಿದ್ದರು. ವರಲಳ್ಳಿ ಗ್ರಾಮ ಸೇರಿದಂತೆ ಗ್ರಾಪಂ ವ್ತಾಪ್ತಿಯ ಗ್ರಾಮಗಳ ಗ್ರಾಮಸ್ಥರು ಹಾಗೂ ರೈತರು ಹಾಗೂ ಸೊಸೈಟಿ ಷೇರುದಾರರು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ತನಿಖೆ ನಡೆಸಬೇಕಿದೆ: ಜಿಲ್ಲಾಧಿಕಾರಿಗಳು ಸ್ವ ವಿವೇಚನೆಯಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ರೈತರ ಪರವಾಗಿ ತನಿಖೆ ನಡೆಸಬೇಕು ಅಂದಾಗ ಮಾತ್ರ ತಪಿತಸ್ಥರು ಬುದ್ಧಿ ಕಲಿಯಲು ಸಾಧ್ಯ, ಅದರಿಂದ ನೊಂದ ರೈತರಿಗೆ ನೆಮ್ಮದಿಯ ನ್ಯಾಯ ಸಿಗಲು ಸಾಧ್ಯ ಎನ್ನುತ್ತಾರೆ ರೈತ ಮುಖಂಡರು. ವರಲಳ್ಳಿ ಸೊಸೈಟಿ ಯಲ್ಲಿನ ಹಗರಣ ಬಟಾಬಯಲಾಗಿದ್ದು, ಮಾನ್ಯ ವಿಜಯ ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಸೊಸೈಟಿ ಅವ್ಯವಹಾರಗಳ ಕುರಿತು ದೂರ ದಾಖಲಿಸಿಕೊಂಡು, ಸೂಕ್ತ ಕ್ರಮಕ್ಕೆ ಮುಂದಾಗಲಿದ್ದಾರೆಂಬ ಭರವಸೆ ನೊಂದ ರೈತರದ್ದಾಗಿದೆ.