ಇತ್ತೀಚಿನ ಸುದ್ದಿ
ವಿಜಯನಗರ: ಶ್ರೀ ಸಿದ್ದಲಿಂಗೇಶ್ವರ ಜಯಂತೋತ್ಸವ; ತೋಂಟದ ಸಿದ್ದಲಿಂಗಶ್ರೀ ಪ್ರಶಸ್ತಿ ಪ್ರದಾನ
05/01/2025, 22:10
ವಿಜಯನಗರ(reporterkarnataka.com): ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಜಯಂತೋತ್ಸವ ತೋಂಟದ ಸಿದ್ಧಲಿಂಗಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ಜಗದ್ಗುರು ವೀರಸಿಂಹಾಸನ ಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ತೋಂಟದ ಸಿದ್ಧಲಿಂಗಶ್ರೀ ಪ್ರಶಸ್ತಿ ಪುರಸ್ಕೃತರಾದ ಕನಕಪುರದ ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಬೇಲಿ ಮಠದ ಶ್ರೀ ಚರಮೂರ್ತಿ ಶಿವರುದ್ರ ಸ್ವಾಮಿಗಳು, ಗದ್ದುಗೆ ಮಠದ ಶ್ರೀ ಮಹಾಂತ ಸ್ವಾಮಿಗಳು, ಪವಾಡ ಶ್ರೀ ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಶಿವಸಿದ್ದೇಶ್ವರ ಸ್ವಾಮೀಜಿ,ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ. ಪಾಟೀಲ್, ಶೈಲಜಾ ವಿ.ಸೋಮಣ್ಣ,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಸೋಮಶೇಖರ್, ವೀರಶೈವ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಪರಮಶಿವಯ್ಯ, ಮಾಜಿ ಮಹಾಪೌರರಾದ ಗಂಗಾಬಿಕೆ ಮಲ್ಲಿಕಾರ್ಜುನ್, ಮಾಜಿ ಉಪಮಹಾಪೌರರಾದ ಬಿ.ಎಸ್.ಪುಟ್ಟರಾಜು, ಡಾ.ಅರುಣ್ ಸೋಮಣ್ಣ, ಕನ್ನಡ ಪರ ಹೋರಾಟಗಾರ ಪಾಲನೇತ್ರರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ವಿಜಯನಗರದಿಂದ ಮಾರುತಿ ಮಂದಿರದಿಂದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದ ವರಗೆ ಶ್ರೀ ಸಿದ್ದಲಿಂಗದೇವರನ್ನ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು, ಶಾಸಕರುಗಳಾದ ಎಂ.ಕೃಷ್ಣಪ್ಪ, ಪ್ರಿಯಾಕೃಷ್ಣರವರು ಭವ್ಯ ಮೆರವಣಿಗೆಯನ್ನು ಚಾಲನೆ ನೀಡಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿರವರು ಮಾತನಾಡಿ ಮಹಾನ್ ತಪಸ್ವಿಗಳು, ಜ್ಞಾನದಲ್ಲಿ ಪ್ರವೀಣರು ಇಂತಹ ವಿಶೇಷ ಮಹಾಚೇತನರಾದ ಸಿದ್ದಲಿಂಗೇಶ್ವರರು. 12ನೇ ಶತಮಾನದಲ್ಲಿ ಆರಂಭವದಲ್ಲಿ ಬಸವಣ್ಣನವರು ನಂತರ 500ವರ್ಷಗಳ ಸಿದ್ದಲಿಂಗೇಶ್ವರರು ಧಾರ್ಮಿಕ ಜಾಗೃತಿ ಮೂಡಿಸಿದರು.
ಅಜ್ಞಾನ ಸಮಾಜ ತೊಲಗಿಸಿ, ಜ್ಞಾನವಂತ ಸಮಾಜಕ್ಕೆ ನಾಂದಿಯಾದರು ಸಿದ್ದಲಿಂಗೇಶ್ವರರು.
ಸಿದ್ದಲಿಂಗೇಶ್ವರರ ಪಾದಸ್ಪರ್ಶದಿಂದ ಪುಣ್ಯಭೂಮಿಯಾಯಿತು. ಸಿದ್ದಲಿಂಗೇಶ್ವರ ಕೃಪೆಯಿಂದ ಅಮೇರಿಕಾದಲ್ಲಿ ಅತ್ಯಂತ ಯಶ್ವಸಿಯಾಗಿದ್ದೇನೆ ಎಂದು ಭಕ್ತರೊಬ್ಬರು ನನಗೆ ಹೇಳಿದರು, ಭಕ್ತಿ ಮತ್ತು ನಂಬಿಕೆ ಇರುವ ಕಡೆ ಯಶ್ವಸಿ ಸಾಧ್ಯ.
ಬೇಲಿಮಠದ ಶಿವರುದ್ರ ಸ್ವಾಮಿಗಳು ಮಾತನಾಡಿ, 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪದಲ್ಲಿ 27ವರ್ಷ ಕಾರ್ಯನಿರ್ವಹಿಸಿ ಕಲ್ಯಾಣಕ್ರಾಂತಿ ಮೂಡಿಸಿದ ಬಸವೇಶ್ವರು ನಂತರ ಶರಣ ಪರಂಪರೆಯನ್ನು ಸಿದ್ದಲಿಂಗೇಶ್ವರ ವಿಶ್ವಕ್ಕೆ ವಚನ ಸಾರ ಷರಿದರು.
ದ್ವೀತಿಯ ಅಲ್ಲಮ ಎಂದು ಸಿದ್ದಲಿಂಗೇಶ್ವರರು ಎಂದು ಭಕ್ತರು ಕರೆಯುತ್ತಿದ್ದರು. ಅವರ ಶಿಷ್ಯೆರಾದ 101ವಿಕ್ತರು ಜೊತೆಯಲ್ಲಿ ಇದ್ದರು.
ಪಟ್ಟಭದ್ರ ಹಿತಾಸಕ್ತಿಗಳು ಕಲ್ಯಾಣಕ್ರಾಂತಿ ಹತ್ತಿಕ್ಕುಲು ಪ್ರಯತ್ನಪಟ್ಟರು.
ಕೊಳ್ಳೆಗಾಲದ ಹರಳೆಗ್ರಾಮದಲ್ಲಿ ಹರಳಯ್ಯನವರ ಸಮಾಧಿ ಇದೆ. ಭಕ್ತ ಮತ್ತು ಜಂಗಮರ ಸಂಭಂದ ಏನು ಎಂದು ತಿಳಿಯಬೇಕು. ಕರ್ತವ್ಯಪಾಲನೆ ಮಾಡಿದಾಗ ಸಾಧನೆ ಸಾಧ್ಯ.
ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಅವರು ಮಾತನಾಡಿ ಸುತ್ತೂರು ಮಠ ಮಾತೃ ಹೃದಯ ಕನಕಪುರ ಮಠ ಬೇಲಿ ಮಠದ ತ್ರಿವೇಣಿ ಸಂಗಮವಾಗಿದೆ. ಜಗತ್ತಿನಲ್ಲಿ ಹುಟ್ಟಿದ ನಂತರ ಎರಡು ಋಣಿ ಇಟ್ಟಿಕೊಂಡು ಹುಟ್ಟುತ್ತೇವೆ ಒಂದು ತಾಯಿಋಣ ಇನ್ನೂಂದು ಭೂಮಿಯ ಋಣ ಅದರೆ ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಋಣಭಾರ ಕಡಿಮೆ ಮಾಡಿಕೊಳ್ಳಬೇಕು ಮಹನೀಯರಗಳ ಸ್ಮರಣೆ ಮಾಡಬೇಕು ಎಂದು ಹೇಳಿದರು.
ಸಚಿವ ಎಂ.ಬಿ.ಪಾಟೀಲ್ ರವರು ಮಾತನಾಡಿ, 12ಶತಮಾನದಲ್ಲಿ ಶ್ರೀ ಬಸವೇಶ್ವರರು ಅನುಭವ ಮಂಟಪ ಎಂಬ ಮೊಟ್ಟ ಮೊದಲ ಪ್ರಜಾಪ್ರಭುತ್ವ ಸ್ಥಾಪಿಸಿದರು, ಕಾಯಕ ಸಮಾಜವನ್ನು ಒಂದು ಮಾಡಿದ ಸಾಧಕ. ಕ್ರಾಂತಿಕಾರಿ ಸಿದ್ದಾಂತಗಳಾದ ಅಂತರಜಾತಿಯ ವಿವಾಹ, ಸಾಮಾನತೆ ಕೊಟ್ಟರು, ಮೂಢನಂಬಿಕೆ ವಿರುದ್ದ ಹೋರಾಟ ಮತ್ತು ಕಲ್ಯಾಣ ಕ್ರಾಂತಿಯಲ್ಲಿ ಬಸವಾದಿ ಶರಣರು ಛಿದ್ರ,ಛಿದ್ರವಾದರು.
ಬಸವಣ್ಣ ರವರ ವಿಚಾರ ಚಿಂತನೆಯನ್ನು ಮರು ಸೃಷ್ಟಿ ಮಾಡಿದ ಎರಡನೇಯ ಬಸವಣ್ಣ ಎಂದರೆ ಸಿದ್ದಲಿಂಗೇಶ್ವರರು.
ಕೊಟ್ಟೆ ವಚನಗಳು ಮತ್ತು ನೈಜ ವಚನಗಳ ಕುರಿತು ಭೌಗೋಳಿಕ ಸಂಶೋಧನೆ ಮಾಡಲಾಗುತ್ತಿದೆ.
ವಚನಸಾಹಿತ್ಯ ಕೇಂದ್ರ ಆರಂಭಿಸಲಾಗಿದೆ. 10ಸಾವಿರ ವಚನಗಳನ್ನು ಎಂ.ಎಂ.ಕಲರ್ಬುಗಿ ನೇತೃತ್ವದಲ್ಲಿ ತರಲಾಯಿತು.
ಲಿಂಗಾಯಿತ ಧರ್ಮ ಉಳಿಯುವಂತೆ ಮಾಡಿದವರು ಸಿದ್ದಲಿಂಗಾ ಶ್ರೀಗಳು.
ವೀರಶೈವ ಲಿಂಗಾಯಿತ ಸಮುದಾಯಕ್ಕೆ ಮೀಸಲಾತಿ ಪರ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಬದುಕಲು ಹೊರಟರ ಭಗವದ್ದೀತೆ ಕೃತಿ ಲೋಕರ್ಪಣೆ ಮಾಡಲಾಯಿತು, 40ಕ್ಕೂ ಹೆಚ್ಚು ವಿವಿಧ ಮಠಾಧೀಶರು ಹಾಗೂ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು