ಇತ್ತೀಚಿನ ಸುದ್ದಿ
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು ಕೊಯ್ಯಲು ಹೊರಟ್ಟಿದ್ದ ವ್ಯಕ್ತಿ ಸಾವು
17/05/2024, 00:05
ಶಶಿ ಬೆತ್ತದಕೊಳಲು ಕೊಪ್ಪ ಚಿಕ್ಕಮಗಳೂರು
info.reporterkarnataka@gmail.com
ಹಲಸಿನ ಹಣ್ಣು ಕೊಯ್ಯಲು ತೆರಳುತ್ತಿದ್ದಾಗ ಅಲ್ಯುಮಿನಿಯಂ ಏಣಿ ವಿದ್ಯುತ್ ವೈರ್ ಗೆ ತಗಲಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ
ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೇತೋಟ ಎಂಬಲ್ಲಿ ಅಲುಮಿನಿಯಂ ಏಣಿಗೆ ವಿದ್ಯುತ್ ವಯರ್ ತಾಗಿ ವಿಜಯ ಗೌಡ(56) ಎಂಬವರು ಮೃತಪಟ್ಟಿದ್ದಾರೆ.
ವಿಜಯ ಗೌಡ ಅವರ ಮೃತರ ದೇಹದ ಬಹುತೇಕ ಭಾಗಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ಬರುತ್ತಿದ್ದ ಹೊಗೆಯನ್ನು ಗಮನಿಸಿದ ಸ್ಥಳೀಯರೊಬ್ಬರು ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಘಟನೆಯ ಕುರಿತು ಮೃತರ ಪತ್ನಿ ಪ್ರಮೀಳಾ ಜಯಪುರ ಠಾಣೆಗೆ ದೂರು ನೀಡಿದ್ದು, ಪಿಎಸ್ಐ ಅಂಬರೀಶ್ ತನಿಖೆ ನಡೆಸುತ್ತಿದ್ದಾರೆ.