ಇತ್ತೀಚಿನ ಸುದ್ದಿ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ: ಕಳ್ಳಿಗೆಯ ದೇವಂದಬೆಟ್ಟುನಲ್ಲಿ ಮನೆಗೆ ಹಾನಿ
21/12/2022, 15:12

ಬಂಟ್ವಾಳ(reporterkarnataka.com): ಕಳ್ಳಿಗೆ ಗ್ರಾಮ ದೇವಂದಬೆಟ್ಟು ಎಂಬಲ್ಲಿ ಸುಂದರಿ, ಶುಭ ಆನಂದ ಬಂಜನ್ ಎಂಬವರಿಗೆ ಸೇರಿರುವ ಮೊದಲ ಅಂತಸ್ತಿನ ಹಳೆಯ ಮನೆಗೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿ ಹಾನಿಗೀಡಾಗಿದೆ.
ಸ್ಥಳಕ್ಕೆ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಯವರು ಆಗಮಿಸಿ ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪ್ರಭಾರ ಅಧಿಕಾರಿ ಪುರುಷೋತ್ತಮ, ರೋಹಿತ್, ಪ್ರಸಾದ್ , ಗ್ರಹರಕ್ಷಕ ಸಿಬ್ಬಂದಿ ಜಯಗಣೇಶ್ ಚಾಲಕ ಕಿರಣ್ ಕುಮಾರ್ ಅವರು ಭಾಗವಹಿಸಿದ್ದರು.