ಇತ್ತೀಚಿನ ಸುದ್ದಿ
ವಿದ್ಯಾರ್ಥಿಗಳು ಜೀವನದಲ್ಲಿ ಆದರ್ಶಗಳನ್ನು ಪಾಲಿಸಿದಾಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯ: ವಿನಯ್ ಕುಮಾರ್ ಹಿರೇಮಠ
07/08/2021, 09:23
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಪಟ್ಟಣದ ವಿದ್ಯಾನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಾಲೇಜು ಬ್ಯಾಗ್, ನೋಟ್ಬುಕ್, ಗ್ರಂಥಾಲಯ ಪುಸ್ತಕ, ಹಾಗೂ ಅಧ್ಯಯನ ಸಾಮಗ್ರಿಯನ್ನು ವಿತರಿಸಲಾಯಿತು. ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಾಚಾರ್ಯ ವಿನಯ್ ಕುಮಾರ್ ಹಿರೇಮಠ ಅವರು, ಸಮಾಜದಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕಾದರೆ ಜೀವನದಲ್ಲಿ ಗುರಿ ಇರಬೇಕು. ನಾವು ಬದುಕಬೇಕಾದರೆ ಸಮಾಜದಲ್ಲಿ ಹೇಗಿರಬೇಕು. ಹೀಗೆ ಬದುಕಬೇಕು. ಚೆನ್ನಾಗಿ ವಿದ್ಯಾಭ್ಯಾಸ ಮಾಡುವುದರಿಂದ ಸಮಾಜದಲ್ಲಿ ಉನ್ನತ ಹುದ್ದೆಯ ಪಡೆಯಬಹುದು. ನೀವು ಉನ್ನತ ಹುದ್ದೆ ಪಡೆದಾಗ ಹಡೆದ ತಂದೆ-ತಾಯಿಗಳಿಗೂ ಮತ್ತು ನಮ್ಮ ಕಾಲೇಜಿಗೂ ಕೀರ್ತಿ ಗೌರವ ಸಲ್ಲುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಚೆನ್ನಾಗಿ ಓದಿನ ಕಡೆ ಗಮನಕೊಟ್ಟು ಸಮಾಜದಲ್ಲಿ ಮುಂದೆ ಬರಬೇಕು. ಸಮಾಜದಲ್ಲಿ ಒಳ್ಳೆಯವರ ಮಾರ್ಗದರ್ಶನ ಅವರ ಆದರ್ಶಗಳನ್ನು ಪಾಲಿಸಿದಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಂಡಳಿಯ
ಬಸವರಾಜ ತೊಂತನಾಳ, ನಾಗರಾಜ ಶೆಟ್ಟಿ , ವಿದ್ಯಾಮನೋಹರ, ವೀರೇಶ ಗೋನಾಳ, ಶ್ರೀಧರ ಗುಡಿ, ಕಾಲೇಜಿನ ಪ್ರಾಂಶುಪಾಲರಾದ ವಿನಯಕುಮಾರ ಹಿರೇಮಠ, ಅಮರೇಶ ನಾಯಕ ಯಲ್ಲಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.