ಇತ್ತೀಚಿನ ಸುದ್ದಿ
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ರಾಷ್ಟ್ರೀಯ ಸೇವಾ ಯೋಜನೆ ಪೂರಕ: ಡಾ. ನಾಗರತ್ನ ಕೆ.ಎ
10/12/2021, 07:58

ಮಂಗಳೂರು(reporterkarnataka.com): ಪದುವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾಯೋಜನೆ ಘಟಕ ಹಾಗೂ ಉದ್ಘಾಟನಾ ಸಮಾರಂಭ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಹೇಗೆ ಬದುಕ ಬೇಕು ಅನ್ನುವುದನ್ನು ರಾ.ಸೆ.ಯೋ. ತಿಳಿಸಿಕೊಡುತ್ತದೆ.
ನಿಮ್ಮ ನಿಮ್ಮ ಮನೆಗಳಲ್ಲಿ ಸಸಿ ನೆಡುವ ಕಾರ್ಯ ಮಾಡಿ. ಅದು ಕೂಡ ನೀವು ಸಮಾಜಕ್ಕೆ ಕೊಡುವ ಕೊಡುಗೆಯಾಗಿದೆ. ನಿಮ್ಮ ಪರಿಸರ ಸ್ವಚ್ಛಗೊಳಿಸಿ , ಅದೇ ಸೇವೆ ಎಂದು ಅವರ ಹೇಳಿದರು.ನಂತರ ರಾ.ಸೆ.ಯೋ ಪ್ರತಿಜ್ಞಾ ವಿಧಿ ಬೋಧಿಸಿದರು.
ಇನೋರ್ವ ಅತಿಥಿ ಆಂಕರ್ ವಿ.ಜೆ.ಡಿಕ್ಷನ್ ಮಾತನಾಡಿ, ರಾ. ಸೆ.ಯೋ ಒಂದು ಅದ್ಬುತ ವೇದಿಕೆ.ಇದನ್ನು ಕಾಲೇಜು ದಿನಗಳಲ್ಲಿ ಉತ್ತಮವಾಗಿ ಬಳಸಿಕೊಳ್ಳಿ. ಕಾಲೇಜು ಜೀವನವನ್ನು ಮನೋರಂಜಿಸುವ ಜತೆಗೆ ಜವಾಬ್ದಾರಿಯುತವಾಗಿ ಪರಿಗಣಿಸಿ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಿ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ರಂಜನ್ ವಿ. ಎನ್. ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೋವಿಡ್ ವಾರ್ ರೂಮ್ ನಲ್ಲಿ ಕಾರ್ಯನಿರ್ವಹಿಸಿದ ಸ್ವಯಂ ಸೇವಕರನ್ನು ಅಭಿನಂದಿಸಲಾಯಿತು. ರಾ.ಸೆ.ಯೋ ಯೋಜನಾಧಿಕಾರಿ, ಪ್ರೊ. ರೋಶನ್ ಸಾಂತುಮೆರ್, ರಾಹುಲ್ ಮತ್ತು ರೇಷ್ಮಾ ಉಪಸ್ಥಿತರಿದ್ದರು.
ಸ್ವಯಂ ಸೇವಕರಾದ ತನುಶ್ರೀ ನಿರೂಪಿಸಿ,ಬ್ಲಾನಿ ಡಿಸೋಜ ವಂದಿಸಿದರು.