12:27 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ವಿದ್ಯಾಭ್ಯಾಸದ ಜತೆಗೆ ಮಕ್ಕಳ ಹವ್ಯಾಸ ಗುರುತಿಸಿ ಸೃಜನಶೀಲತೆಗೆ ವೇದಿಕೆ ಕಲ್ಪಿಸುವ ಅಗತ್ಯವಿದೆ: ಡಾ. ಶೆಟ್ಟಿಗಾರ್

23/11/2021, 09:44

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜೊತೆಗೆ ಅವರ ಹವ್ಯಾಸಗಳನ್ನು ಗುರುತಿಸಿ ಮಕ್ಕಳ ಸೃಜನಶೀಲತೆಗೆ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದು ಡಾ.ಎಸ್.ಪಿ. ಪದ್ಮಾನಾಭ್ ಶೆಟ್ಟಿಗಾರ್ ಹೇಳಿದರು.

ಬಣಕಲ್‌ನಲ್ಲಿ ಸೋಮವಾರ ಸ್ಯಾಷ್ ದಿ ಸ್ಟೆöಟಿಲ್ ಡ್ಯಾನ್ಸ್ ಕ್ಲಾಸ್ ಅಂಡ್ ಎಎಸ್‌ಎನ್ ಮ್ಯೂಸಿಕ್ ಸ್ಟುಡಿಯೋ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು, ನೃತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗವರ ವ್ಯಕ್ತಿತ್ವ ಸೃಜನಾತ್ಮಕವಾಗಿ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ ಎಂದರು.

ಜೆಸಿಐ ನೂತನ ಅಧ್ಯಕ್ಷರಾದ ವಿದ್ಯಾರಾಜು ಮಾತನಾಡಿ, ಮಕ್ಕಳು ನೃತ್ಯ ಮುಂತಾದ ಕಲಾ ಪ್ರಕಾರಗಳಲ್ಲಿ ತೊಡಗಿಕೊಂಡಾಗ ಅಪಾರ ಆತ್ಮವಿಶ್ವಾಸವನ್ನು ಪಡೆಯುವ ಜೊತೆಗೆ ಲವಲವಿಕೆಯಿಂದ ಇರುತ್ತಾರೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೃತ್ಯ ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ನೃತ್ಯಶಾಲೆಯ ಶಿಕ್ಷಕ ಅಜಿತ್ ಕೆವಿಯಾರ್, ಬಿಎಸ್‌ಪಿ ಮುಖಂಡರಾದ ಜಾಕೀರ್ ಹುಸೇನ್, ಶ್ರೀಕಾಂತ್,ಮಾಸ್ಟರ್ ಪ್ರಸಾದ್ ಅಮೀನ್, ಪಿಡಿಓ ಯತೀಶ್, ಗಾಯಕ ರವೀಂದ್ರ ಬಕ್ಕಿ, ವಿರೂಪಾಕ್ಷ, ಜಯಪ್ರಕಾಶ್ ಕಡುವಳ್ಳಿ, ಬಣಕಲ್ ಕಸಾಪ ಪೂರ್ವಾದ್ಯಕ್ಷ ವಸಂತ್ ಹಾರ್‌ಗೋಡು,  ಶಿಕ್ಷಕರಾದ ನಾಗರಾಜ್, ಲಿಂಗರಾಜ್, ಭಕ್ತೇಶ್, ನಿರೂಪಕರಾದ ಶಂಕರ್, ಎಂ.ಎಸ್.ನಾಗರಾಜ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು