ಇತ್ತೀಚಿನ ಸುದ್ದಿ
ವಿಧಿಯ ಕ್ರೂರ ಆಟ: ಮನೆ ಯಜಮಾನನ ಅಂತ್ಯ ಸಂಸ್ಕಾರ ವೇಳೆ ಹೊತ್ತಿ ಉರಿದ ಮನೆ; ಸೊತ್ತು ನಾಶ, ಹಸು- ಕುರಿಗಳ ಜೀವಂತ ದಹನ
01/08/2023, 17:59
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವಿಧಿಯ ಕ್ರೂರತ್ವಕ್ಕೆ ಕಾಫಿನಾಡ ಈ ಘಟನೆ ಜೀವಂತ ಸಾಕ್ಷಿಯಾಗಿದೆ. ಮನೆ ಮಾಲೀಕನ ಅಂತ್ಯ ಸಂಸ್ಕಾರಕ್ಕೆ ಹೋದಾಗ ಮನೆ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಾಣೂರು ಗ್ರಾಮದಲ್ಲಿ ನಡೆದಿದೆ.
ಮನೆ ಸುಟ್ಟು ಕರಕಲಾಗಿ, ಕೊಟ್ಟಿಗೆಯಲ್ಲಿದ್ದ ರಾಸುಗಳ ಸಜೀವ ದಹನವಾಗಿದೆ.
ಮನೆ ಮಾಲೀಕ ಹನುಮಂತಪ್ಪ ಮರಣ ಹೊಂದಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಮನೆಯವರು ಸ್ಮಶಾನಕ್ಕೆ ತೆರಳಿದ್ದರು. ಮನೆಯಲ್ಲಿದ್ದ ಗ್ಯಾಸ್‍ನಿಂದ ಅನಿಲ ಸೋರಿಕೆಯಾಗಿ ಆಕಸ್ಮಿಕ ಬೆಂಕಿ ತಗುಲಿದೆ. ಸಿಲಿಂಡರ್ ಬ್ಲಾಸ್ಟ್ ಆಗಿ ಮನೆ, ಮನೆ ಸಾಮಾನು, ಕೊಟ್ಟಿಗೆ, ಹಸು, ಕುರಿ ಎಲ್ಲವೂ ಬೆಂಕಿಗಾಹುತಿಯಾಗಿದೆ. ಕುಟುಂಬಸ್ಥರ ನೋವಿನ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಶ್ರಮಿಸಿದರು.