ಇತ್ತೀಚಿನ ಸುದ್ದಿ
ವಿಧಾನ ಪರಿಷತ್ ಚುನಾವಣೆ: ಮೊದಲ ಪ್ರಾಶಸ್ತ್ಯ ಮತ ಯಾರಿಗೆ?; ಸಸ್ಪೆನ್ಸ್ ಬಿಟ್ಟುಕೊಡದ ಮಾಜಿ ಸಚಿವ ರಮೇಶ್ ಜಾರಕಿಹೊಳಿ
03/12/2021, 10:08
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ವಿಧಾನ ಪರಿಷತ್ ಗೆ ಬೆಳಗಾವಿ ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ದ ಮತ ಲಖನ್ ಜಾರಕಿಹೊಳಿಗೋ? ಅಥವಾ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೋ? ಎಂಬುದನ್ನು ವರಿಷ್ಠರ ಜತೆ ಚರ್ಚಿಸಿ ಮುಂದೆ ಹೇಳುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಅಥಣಿ ನಗರದ ಸಭಾ ಭವನದಲ್ಲಿ ತಮ್ಮ ಬೆಂಬಲಿಗರ ಜತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸೋದೆ ನನ್ನ ಗುರಿ. ವಿವೇಕರಾವ ಪಾಟೀಲರಿಗೆ ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಕಾಂಗ್ರೆಸ್ ಗೆ ಬುದ್ದಿ ಕಲಿಸಲು ಲಖನ ಜಾರಖಿಹೋಳಿ ಕಣಕ್ಕಿಳಿದಿರೋದು ಎಂದು ಅವರು ನುಡಿದರು.
ಕಾಂಗ್ರೆಸ್ ನಿಂದ ನಮಗೆ ತುಂಬಾ ಅನ್ಯಾಯವಾಗಿದೆ.ಅಥಣಿ, ಕುಡಚಿ, ಕಾಗವಾಡ,
ಜನತೆ ತುಂಬಾ ಬುದ್ದಿವಂತರು. ಬರುವ ದಿನಗಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಬುದ್ದಿ ಕಲಿಸುತ್ತಾರೆ.
ಕಾಂಗ್ರೆಸ್ -ಜೆಡಿಎಸ್ ಸಮಿಶ್ರ ಸರಕಾರದ ಪತನಕ್ಕೆ ಡಿಕೆಶಿ ಮುಖ್ಯ ಕಾರಣ ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆದರು.