ಇತ್ತೀಚಿನ ಸುದ್ದಿ
ವೇತನ ತಾರತಮ್ಯ: ಕೊರೊನಾ ವಾರಿಯರ್ಸ್ ಹೋಮ್ ಗಾರ್ಡ್ ಗಳ ಯಾತನೆ ಕೇಳುವರ್ಯಾರು?
01/06/2021, 08:38
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಪೊಲೀಸರ ಅವಿಭಾಜ್ಯ ಅಂಗವೆಂದೇ ಕರೆಯಲ್ಪಡುವ ಹೋಮ್ ಗಾರ್ಡ್ ಪೊಲೀಸರಂತೆ ಕಾರ್ಯ ನಿರ್ವಹಿಸುತ್ತಾರೆ. ಪೋಲಿಸರೊಂದಿಗೆ ಸೇರಿ ದಿನನಿತ್ಯ ಉರಿಬಿಸಿ ನಲ್ಲಿ, ಮಳೆ ಗಾಳಿಯಲ್ಲಿ ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ಮರು ಮಾತಿಲ್ಲದೆ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಸಂಬಳದ ವಿಷಯ ಬರುವಾಗ ಇದ್ಯಾವುದನ್ನೂ ಪರಿಗಣಿಸಲಾಗುವುದಿಲ್ಲ. ವೇತನದಲ್ಲಿ ತಾರತಮ್ಯ ತೋರಿಸಲಾಗುತ್ತದೆ. ಅಷ್ಟೇ ಅಲ್ಲ, ಕೊಡುವ ವೇತನವನ್ನು ಕೂಡ ಕೆಲವೊಮ್ಮೆ ಸರಿಯಾದ ಸಮಯಕ್ಕೆ ಪಾವತಿಸುತ್ತಿಲ್ಲ.
ಲಾಕ್ ಡೌನ್, ನೆರೆ, ಚಂಡಮಾರುತ, ರೋಡ್ ಶೋ, ರ್ಯಾಲಿ, ಜಾತ್ರೆ, ಗಲಭೆಗಳು ಸಂದರ್ಭದಲ್ಲಿ ಹೋಮ್ ಗಾರ್ಡ್ ಗಳು ಬೇಕೇ ಬೇಕು. ಕೊರೊನಾ ಸಂದರ್ಭದಲ್ಲಿ ಜನರು ರಸ್ತೆಗಿಳಿಯದಂತೆ ನೋಡಿಕೊಳ್ಳಲು ಪೊಲೀಸರ ಜತೆ ಇವರು ಬೇಕೇ ಬೇಕು. ಗಲಭೆ, ನೆರೆ, ಚಂಡಮಾರುತ ಮುಂತಾದ ಆಪತ್ಕಾಲದಲ್ಲಿ ಜನರ ಪ್ರಾಣ ರಕ್ಷಣೆ ಮಾಡುತ್ತಾರೆ.ಆದರೆ ವೇತನದಲ್ಲಿ ಮಾತ್ರ ತಾರತಮ್ಯ.
ಸರಕಾರ ಏನೋ ಇವರಿಗೆ ಕೊರೊನಾ ವಾರಿಯಸ್ ಎಂದು ಬಿರುದು ಕೊಟ್ಟಿದೆ. ಅಷ್ಟು ಸಾಕೆ? ಅವರ ಕಷ್ಟ ಗಳನ್ನು ನೋಡ್ಬೇಕಲ್ವೇ? ಅವರಿಗೆ ಬಾರೋ ಸಂಬಳ ತರಕಾರಿಗೆ ಸಾಲದು. ತಿಂಗಳಲ್ಲಿ 20 ದಿನ ಕೆಲಸ. ಉಳಿದ ದಿನ ರಜೆ. ಆದರೆ ಆ ಸಾವಿರ ಅದೆಲ್ಲಿ ಸಾಕಾಗುತ್ತೆ? ಕುಟುಂಬದಲ್ಲಿ ಅವರಷ್ಟೇ ಈ ಲಾಕ್ ಡೌನ್ ನಲ್ಲಿ ದುಡಿಯಬೇಕಷ್ಟೆ. ಬೇರೆ ಯಾವ ಸದಸ್ಯನಿಗೂ ಉದ್ಯೋಗಳಲಿಲ್ಲ. ಅವರ ಮನೆ ಬಾಡಿಗೆ, ದಿನದ ದಿನಸಿ ಖರ್ಚು ಇದಕ್ಕೆಲ್ಲ ಏನು ಮಾಡಬೇಕು? ದಿನ ನಿತ್ಯ ಗಜಿ, ಸಾರು, ಉಪ್ಪಿನ ಕಾಯಿಯಷ್ಟೇ. ಅದಲ್ಲದೆ, ಮನೆಯಿಂದ ನಗರಕ್ಕೆ ಡ್ಯೂಟಿಗೆ ಬರಲು, ಸಂಜೆ, ಮಧ್ಯಾಹ್ನ ಹೋಗಲು ವಾಹನ ವ್ಯವಸ್ಥೆಯೂ ಇಲ್ಲ. ಇದೆಲ್ಲವನ್ನೂ ಮನಗಂಡೇ ನಮಗೂ ತಿಂಗಳಿಡೀ ಕೆಲಸ ಕೊಡಿ ಎನುತ್ತಾರೆ ಹೋಮ್ ಗಾರ್ಡ್ಸ್ …. ಜಿಲ್ಲಾಧಿಕಾರಿ ಗಳೇ ಒಮ್ಮೆ ಅವರ ಸಮಸ್ಯೆ ಆಲಿಸಿ.