ಇತ್ತೀಚಿನ ಸುದ್ದಿ
ವೆನ್‍ಲಾಕ್ ಆಸ್ಪತ್ರೆಗೆ ಆಂಬುಲೆನ್ಸ್ ಹಸ್ತಾಂತರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಡುಗೆ
21/07/2022, 22:02

ಮಂಗಳೂರು(reporterkarnataka.com):ಕಾರ್ಪೊರೇಟ್ ಸಾಮಾಜಿಕ ಜವಬ್ದಾರಿ ಚಟುವಟಿಕೆಗಳಡಿ 15 ಲಕ್ಷ ರೂ.ಗಳ ಆಂಬುಲೆನ್ಸ್ ಅನ್ನು ನಗರದ ವೆನ್‍ಲಾಕ್ ಆಸ್ಪತ್ರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ಜು.21ರ ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ವೆನ್‍ಲಾಕ್ ಸರ್ಜನ್ ಸದಾಶಿವ ಶಾನುಭೋಗ್, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ.ಅಶೊಕ್, ಡಾ.ಜಗದೀಶ್, ಎಸ್.ಬಿ.ಐ ಮಹಾ ಪ್ರಬಂಧಕ ನಂದಕಿಶೋರ್, ಪ್ರಬಂಧಕ ಅನುರಾಗ್ ಜೋಷಿ, ಉಪ ಪ್ರಧಾನ ವ್ಯವಸ್ಥಾಪಕ ಜೋಬಿ ಜೋಸೆಫ್, ಪ್ರಾದೇಶಿಕ ವ್ಯವಸ್ಥಾಪಕ ಉದಯ್ ಕುಮಾರ್, ಉಪ ಪ್ರಧಾನ ವ್ಯವಸ್ಥಾಪಕಿ ಡೇಸಿ ಖಜೂರ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ಆಂಬುಲೆನ್ಸ್ ಅನ್ನು ಜಾಗರೂಕತೆಯಿಂದ ಚಲಾಯಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಚಾಲಕನಿಗೆ ಸಲಹೆ ನೀಡಿದರು.