ಇತ್ತೀಚಿನ ಸುದ್ದಿ
ಅಕ್ರಮ ಗೋವು ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿ: ಗಾಯಗೊಂಡ ಗೋವುಗಳನ್ನು ಬಿಟ್ಟು ಆರೋಪಿಗಳು ಪರಾರಿ
14/10/2025, 10:16

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ರಸ್ತೆಯಲ್ಲಿನ ಕಾಗದಿಕಟ್ಟೆ ಬಳಿ ಇಂದು ಬೆಳಗ್ಗಿನ ಜಾವ ಅಕ್ರಮ ಗೋವು ಸಾಗಾಟ ಮಾಡುತ್ತಿದ್ದ ವಾಹನ ನಿಯಂತ್ರಣ ಪಲ್ಟಿಯಾದ ಘಟನೆ ನಡೆದಿದೆ. KA-13 B 3078 ಸಂಖ್ಯೆ ಹಾಸನ ಮೂಲದ ವಾಹನ ಇದಾಗಿದ್ದು, ಅಘಾತದಲ್ಲಿ ವಾಹನದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಗೊಂಡವರನ್ನು ಅವರ ಕಡೆಯವರು ಬಂದು ಬೇರೆಡೆಗೆ ಸಾಗಿಸಲಾಗಿದೆ ಎನ್ನಲಾಗಿದೆ. ಇತ್ತ ಗಾಯಗೊಂಡ ಗೋವುಗಳು, ಸಾವು ಬದುಕಿನ ನಡುವೆ ನರಳಾಡು ತ್ತಿದ್ದು ಸ್ಥಳೀಯರು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ.ನಾಪತ್ತೆಯಾಗಿರ ಆರೋಪಿಗಳ ಪತ್ತೆಗೆ ಶನಿವಾರ ಸಂತೆ ಪೊಲೀಸರು ಬಲೆ ಬೀಸಿದ್ದಾರೆ.