ಇತ್ತೀಚಿನ ಸುದ್ದಿ
ವೀಳ್ಯ ಕೊಟ್ಟು ಅಭಿನಂದನಾ ಸಮಾರಂಭಕ್ಕೆ ನಾಡೋಜ ಪ್ರೊ. ಕೆ.ಪಿ. ರಾವ್ ಅವರಿಗೆ ಆಹ್ವಾನ
31/07/2023, 12:03
ಉಡುಪಿ(reporterkarnataka.com): ಆಗಸ್ಟ್ 6 ಭಾನುವಾರದಂದು ನಡೆಯಲಿರುವ ನಾಡೋಜ ಪ್ರೊ. ಕೆ.ಪಿ. ರಾವ್ ಅಭಿನಂದನಾ ಸಮಾರಂಭಕ್ಕೆ ಅಭಿನಂದನಾ ಸಮಿತಿ ವತಿಯಿಂದ ಪ್ರೊ. ಕೆ.ಪಿ ರಾವ್ ಅವರಿಗೆ ವೀಳ್ಯ ನೀಡಿ ಗೌರವ ಪೂರ್ವಕವಾಗಿ ಆಹ್ವಾನಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೆೈ, ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಪ್ರೊ. ಶಂಕರ್, ಕಾರ್ಯದರ್ಶಿ ಜನಾರ್ದನ ಕೊಡವೂರು, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಕಸಾಪ ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ್ ಎಚ್ ಪಿ, ಪೂರ್ಣಿಮಾ ಜನಾರ್ಧನ್, ಶ್ರೀನಿವಾಸ್ ಉಪಾಧ್ಯ, ರಾಮಾಂಜಿ ಉಪಸ್ಥಿತರಿದ್ದರು