8:34 AM Thursday6 - November 2025
ಬ್ರೇಕಿಂಗ್ ನ್ಯೂಸ್
Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ

ಇತ್ತೀಚಿನ ಸುದ್ದಿ

ವರ್ಷಕ್ಕೆ ಅರ್ಧ ಕೋಟಿಗೂ ಹೆಚ್ಚು ಆದಾಯವಿದ್ದರೂ ಅಭಿವೃದ್ಧಿ ಕಾಣದ ಮುಜರಾಯಿ ಇಲಾಖೆಯ ಮಾದಪ್ಪನ ದೇವಾಲಯ: ಗೋಪುರದಿಂದ ಕಳಚಿ ಬೀಳುತ್ತಿದೆ ವಿಗ್ರಹಗಳ ಬಿಡಿ ಭಾಗಗಳು

21/11/2023, 12:58

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಅಭಿವೃದ್ದಿ ಕಾಣಲೆಂದು ಮುಜರಾಯಿ ಇಲಾಖೆಗೆ ಸೇರ್ಪಡೆಯಾದ ಸುಂದರ ಪರಿಸರ ಹಾಗೂ ಕಾಡಂಚಿನಲ್ಲಿರುವ ಇತಿಹಾಸ ಪ್ರಸಿದ್ಧ ಬೇಲದಕುಪ್ಪೆ ಶ್ರೀ ಮಲೆಮಹದೇಶ್ವರಸ್ವಾಮಿ ದೇವಸ್ಥಾನ ಇಂದು ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆ ಭಕ್ತರನ್ನ ಹೊಂದಿರುವ ಈ ದೇವಾಲಯಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ. ಇಷ್ಟೇ ಅಲ್ಲದೆ ಸುಣ್ಣ,ಬಣ್ಣ ಹೊಡೆಯುವ ಭಾಗ್ಯವೂ ಸಿಕ್ಕಿಲ್ಲ.ಇನ್ನು ದೇವಾಲಯ ಹಾಗೂ ಗೋಪುರದ ವಿಗ್ರಹಗಳ ಪಾಡಂತೂ ಕೇಳುವರೇ ಇಲ್ಲದಂತಾಗಿ ಮುರಿದು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಮೂರು ತಾಲೂಕುಗಳ ಗಡಿಭಾಗದಲ್ಲಿರುವ ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ದುಃಸ್ಥಿತಿ.


ನಂಜನಗೂಡು, ಗುಂಡ್ಲುಪೇಟೆ, ಸರಗೂರು, ಈ ಮೂರು ತಾಲೂಕುಗಳ ವ್ಯಾಪ್ತಿಯ ಸರಹದ್ದಿನಲ್ಲಿ ಮಾದಪ್ಪನ ದೇವಾಲಯ ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿದೆ.
ವರ್ಷಕ್ಕೆ ಅರ್ಧ ಕೋಟಿಗೂ ಹೆಚ್ಚು ಆದಾಯ ಗಳಿಸುವ ದೇವಾಲಯವೂ ಆಗಿದೆ.
ಬ್ಯಾಂಕ್ ಖಾತೆಯಲ್ಲಿ ಕೋಟಿಗೂ ಅಧಿಕವಾದ ಹಣ ಇದ್ದರೂ ದೇವಸ್ಥಾನದ ಅಭಿವೃದ್ದಿ ಮಾತ್ರ ಮರೀಚಿಕೆಯಾಗಿದೆ.
ಅಮಾವಾಸ್ಯೆ ಹುಣ್ಣಿಮೆ ಹಾಗೂ ಸೋಮವಾರ, ಶುಕ್ರವಾರ ಬಂದರೆ ಇಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ.
ರಾಜ್ಯದ ವಿವಿಧ ಭಾಗಗಳಿಂದ ಭಕ್ತರ ದಂಡು ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡು ಹರಕೆ ಸಹ ಸಲ್ಲಿಸುತ್ತಾರೆ.
ಹಲವು ವರ್ಷಗಳಿಂದ ದೇವಸ್ಥಾನ ಖಾಸಗಿ ಟ್ರಸ್ಟಿನ ಆಡಳಿತದಲ್ಲಿತ್ತು.
ಇನ್ನೂ ಹೆಚ್ಚಿನ ಅಭಿವೃದ್ದಿ ಕಾಣಲೆಂಬ ಕಾರಣಕ್ಕೆ ಸುತ್ತಮುತ್ತಲಿರುವ ನೂರಾರು ಹಳ್ಳಿಗಳ ಭಕ್ತರ ಒತ್ತಾಯದ ಮೇರೆಗೆ ಸರ್ಕಾರದ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಲಾಯಿತು.
ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಚಾಮರಾಜನಗರ ಜಿಲ್ಲೆಯ ಮಾದೇಶ್ವರ ಬೆಟ್ಟದಂತೆ ಅಭಿವೃದ್ಧಿಪಡಿಸುತ್ತಾರೆ ಎಂಬ ಆಶಯದಿಂದ ಮುಜರಾಯಿ ಇಲಾಖೆಗೆ ಸೇರಿಸಲಾಯಿತು.
ದುರಂತವೆಂದರೆ ಒಂದು ವರ್ಷವಾದರೂ ದೇವಾಲಯದ ದುಃಸ್ಥಿತಿ ಬದಲಾಗಿಲ್ಲ‌.
ಇನ್ನು 15 ದಿನಗಳಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ದೊಡ್ಡ ಜಾತ್ರೆ ನಡೆಯಲಿದೆ.
ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ.
ಆದರೆ ಇಲ್ಲಿ ಇನ್ನೂ ಯಾವುದೇ ರೀತಿಯ ಮಂಜಾಗ್ರತ ಕ್ರಮ ಕೈಗೊಂಡಿಲ್ಲ.
ಜಾತ್ರಾ ಮಹೋತ್ಸವ ಕಾರ್ಯಕ್ಕೆ ಸಿದ್ಧತೆ ನಡೆಸಿಲ್ಲ. ದೇವಾಲಯದ ಮೇಲ್ಭಾಗದ ಗೋಪುರಗಳಲ್ಲಿ ದೇವರ ವಿಗ್ರಹಗಳ ಹಲವಾರು ಭಾಗಗಳು ಕಳಚಿ ಬಿದ್ದಿವೆ. ಸಾಕಷ್ಟು ವಿಗ್ರಹಗಳು ವಿಘ್ನವಾಗಿವೆ.
ದೇವಾಲಯದ ದುಃಸ್ಥಿತಿಯನ್ನ ಸಾರಿ ಹೇಳುವ ವಿಗ್ರಹಗಳನ್ನ ಸರಿಪಡಿಸುವ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.
ಚುನಾವಣೆ ಬಂತೆಂದರೆ ಮೂರು ತಾಲೂಕುಗಳ ಹಾಲಿ ಮತ್ತು ಮಾಜಿ ಶಾಸಕರುಗಳು ಈ ದೇವಾಲಯದಿಂದಲೇ ಮೊದಲ ಪೂಜೆ ಸಲ್ಲಿಸಿದ ನಂತರ ಪ್ರಚಾರ ಕೈಗೊಳ್ಳುತ್ತಾರೆ.
ಇಷ್ಟೆಲ್ಲಾ ನಂಬಿಕೆ, ಭಕ್ತಿ ಇರುವ ದೇವಾಲಯದ ಅಭಿವೃದ್ಧಿಗೆ ಮಾತ್ರ ಯಾರೂ ತಲೆಕೆಡಿಸಿಕೊಳ್ಳದೆ ಇರುವುದು ನಿಜಕ್ಕೂ ವಿಪರ್ಯಾಸ.
ಮೂಲಭೂತ ಸೌಕರ್ಯದ ಕೊರತೆ ಹಾಗೂ ಕಗ್ಗತ್ತಿಲಿನಲ್ಲಿ ಮುಳುಗಿರುವ ದೇವಾಲಯಕ್ಕೆ ಇನ್ನಾದರೂ ಜಿಲ್ಲಾ ಮತ್ತು ತಾಲೂಕು ಆಡಳಿತ ಎಚ್ಚೆತ್ತು ಕೊಂಡು ಪ್ರಸಿದ್ಧ ಧಾರ್ಮಿಕ ತಾಣವಾಗಿರುವ ಬೇಲದ ಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿಯ ದೇವಾಲಯವನ್ನು ಅಭಿವೃದ್ಧಿಪಡಿಸಲು ಮುಂದಾಗಿ ಭಕ್ತರ ಭಾವನೆಗೆ ಸ್ಪಂದಿಸಬೇಕಿದೆ ಎಂದು ಜನ ಸಂಗ್ರಾಮ ಪರಿಷತ್ತಿನ ರಾಜ್ಯಾಧ್ಯಕ್ಷ ನಗರ್ಲೆ ವಿಜಯಕುಮಾರ್ ಹೇಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು