ಇತ್ತೀಚಿನ ಸುದ್ದಿ
ವರ್ಷದ 6 ತಿಂಗಳು ಯಕ್ಷಗಾನ ನಡೆಯುವ ಏಕೈಕ ಸ್ಥಳ: ವರ್ಷದ ಕೊನೆಯ ಯಕ್ಷ ವೈಭವ ಸಂಪನ್ನ
25/05/2022, 11:02
ಹೊನ್ನಾವರ(reporterkarnataka.com): ಹೊನ್ನಾವರ ತಾಲೂಕಿನ ಯಕ್ಷಗಾನ ಕಾಶಿ ಎಂದೇ ಪ್ರಸಿದ್ಧವಾದ ಗುಂಡುಬಾಳ ಶ್ರೀ ಲಕ್ಷ್ಮೀವೆಂಕಟೇಶ ಮುಖ್ಯಪ್ರಾಣ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಯಕ್ಷಗಾನ ಸೇವೆ ಸೋಮವಾರ ಅತೀ ವಿಜೃಂಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ವತಿಯಿಂದ ಕಲಾವಿದರಿಗೆ ಹಾಗೂ ಮೇಳದ ಯಾಜಮಾನರಾದ ಚಿಟ್ಟಾಣಿ ಪ್ರಭಾಕರ ಹೆಗ್ಡೆ, ಹಿರಿಯ ಭಾಗವತರಾದ ಕಪ್ಪೆಕೆರೆ ಸುಬ್ರಾಯ ಭಾಗವತ ಮತ್ತು ಮೇಳದ ಭಾಗವತರಾದ ಶ್ರೀಪಾದ ಹೆಗ್ಡೆ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.