2:18 PM Saturday10 - May 2025
ಬ್ರೇಕಿಂಗ್ ನ್ಯೂಸ್
Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ… Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ವಕ್ಫ್ ಬೋರ್ಡ್ ಪ್ರಕರಣ ನಿಜಾಮರ ಕಾಲ ನೆನಪಾಗುತ್ತಿದೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿ

04/11/2024, 19:09

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail com

ರಾಜ್ಯದ ದೇವಾಲಯ, ಮಠ, ಬಡವರ ದಲಿತರ ಜಮೀನುಗಳನ್ನು ವಕ್ಫ್ ಹೆಸರಲ್ಲಿ ಲಪಟಾಯಿಸುವ ಪ್ರಯತ್ನ ನಡೆಯುತ್ತಿರುವುದು ನಿಜಾಮರ ಕಾಲದ ದರೋಡೆ ನೆನೆಪಾಗುತ್ತಿದೆ ಎಂದು ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅವರು ರೈತರ ಪಹಣಿಗಳಲ್ಲಿ ವಕ್ಪ್ ಹೆಸರು ಸೇರಿಸುತ್ತಿರುವುದರ ವಿರುದ್ದ ಇಂದು ನಗರದಲ್ಲಿ ನಾರಾಯಣರಾವ್ ಪಾರಗಕ್ ನಿಂದ ಡಿಸಿ ಕಚೇರಿ ವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ್‍ಯಾಲಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಆಡಳಿತ 15 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಕೊಳ್ಳೆ ಹೊಡೆಯುವ ಪ್ರಯತ್ನ ಸಚಿವ ಜಮೀರ್ ಅಹಮ್ಮದ್ ಮೂಲಕ ಮಾಡುತ್ತಿದೆ. ರೈತ ವಿರೋಧಿಯಾಗಿರುವ ಜಮೀರ್ ಡಿಸಿಗಳನ್ನು ಬೆದರಿಸಿ ರೈತರ ಜಮೀನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ.
ಜಮೀರ್ ಅಹಮ್ಮದ್ ತೀವ್ರ ವಾಗ್ದಾಳಿ ನಡೆಸಿದ ಅವರು, ಬಿಜಾಪುರ, ಕೊಪ್ಪಳ, ಕಲ್ಬುರ್ಗಿ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಎಂದು ಸಿದ್ದರಾಮಯ್ಯನವರೇ 420 ಜಮೀರನಿಂದ ಈ ದಬ್ಬಾಳಿಕೆ ಮಾಡುತ್ತಿದ್ದಾರೆ.
ಇದನ್ನು ನೋಡಿ ಸುಮ್ಮನಿರಲ್ಲ. ಅದಕ್ಕಾಗಿ ಪ್ರಧಾನ ಮಂತ್ರಿಮೋದಿ ಅವರು ವಕ್ಫ್ ಕಾಯ್ದೆ ತಿದ್ದುಪಡಿಗೆ ಸಂಸತ್ ಉಪ ಸಮಿತಿ ರಚಿಸಿದ್ದಾರೆಂದರು.
ಜಮೀರ್ ಅವರ ದುಸ್ಸಾಹಸ ಹಿಂದು ವಿರೋಧಿಯಾಗಿದೆ. ಇದು ರಾಜ್ಯದ ದುರ್ದೈವ ಎಂದ ವಿಜಯೇಂದ್ರ, ನೀವು ಪ್ರಾಮಾಣಿಕರಿದ್ದರೆ ವಕ್ಫ್ ಹೆಸರಲ್ಲಿ ಜಮೀನು ಲೂಟಿ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಸವಾಲು ಹಾಕಿದರು.
ವಕ್ಫ್ ದಬ್ಬಾಳಿಕೆ ವಿರುದ್ಧ ಹೋರಾಟಕ್ಕೆ ರಾಜ್ಯಾದ್ಯಂತ ನ್ಯಾಯವಾದಿಗಳ ತಂಡ ರಚನೆ ಮಾಡಿದೆ. ವಕ್ಪ್ ನೋಟೀಸ್ ನೀಡಿದರೆ ನಮ್ಮ ವಕೀಲರನ್ನು ಭೇಟಿ ಮಾಡಿ. ಯಾವುದೇ ಕಾರಣಕ್ಕೂ ರೈತರ ಒಂದು ಇಂಚು ಜಮೀನು ವಕ್ಪ್ ಪಾಲಾಗ ಬಾರದು ಎಂದು ಈ ಪ್ರತಿಭಟನೆಯ ಹೋರಾಟದ ಮೂಲಕ ರಾಜ್ಯದ ರೈತರಿಗೆ ಧೈರ್ಯ ನೀಡಲಿದೆ ಎಂದರು.
ಈ ವೇಳೆ ಸಂಸದ ಗೋವಿಂದ ಕಾರಜೋಳ,ಬಿ. ಶ್ರೀರಾಮುಲು, ಜನಾರ್ಧನ ರೆಡ್ಡಿ, ಅನಿಲ್ ನಾಯ್ಡು, ಸೋಮಶೇಖರ ರೆಡ್ಡಿ, ಗಣಪಾಲ ಐನಾಥ ರೆಡ್ಡಿ, ಸಣ್ಣ ಪಕ್ಕೀರಪ್ಪ. ಕೆ.ಎ.ರಾಲಿಲಿಂಗಪ್ಪ, ಡಾ.ಎಸ್.ಜೆವಿ.ಮಹಿಪಾಲ್ , ಎಸ್. ಗುರುಲಿಂಗನಗೌಡ, ಹೆಚ್.ಹನುಂಮತಪ್ಪ, ಪಾರ್ವತಿ ಇಂದು ಶೇಖರ್, ಸುರೇಖ ಮಲ್ಲನಗೌಡ ಮೊದಲಾದವರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು