ಇತ್ತೀಚಿನ ಸುದ್ದಿ
ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ!
20/12/2025, 10:08
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಆರೋಗ್ಯ ರಂಗದಲ್ಲಿ ವೈದ್ಯರ ಪಾತ್ರದಷ್ಟೇ ಅವರ ಬೆನ್ನಿಗೆ ನಿಂತು ಸಹಕರಿಸುವ ದಾದಿಯರ ಪಾತ್ರ ಬಹಳ ಮುಖ್ಯವಾದದ್ದು. ಆದರೆ, ಇಂದು ವೈದ್ಯಕೀಯ ಕ್ಷೇತ್ರದಲ್ಲೂ, ಸಾಮಾಜಿಕ ರಂಗದಲ್ಲಿ ದಾದಿಯರನ್ನು ಕಡೆಗಣಿಸಲಾಗಿದೆ. ಅವರು ಎಲೆ ಮರೆಯ ಕಾಯಿ ತರಹವೇ ಉಳಿಯಬೇಕಾಗಿದೆ.
ಆಸ್ಪತ್ರೆ… ಸರಕಾರಿ ಇರಲಿ, ಖಾಸಗಿ ಇರಲಿ, ಪ್ರಾಥಮಿಕ ಆರೋಗ್ಯ ಕೇಂದ್ರವಿರಲಿ, ಸಮುದಾಯ ಆರೋಗ್ಯ ಕೇಂದ್ರವಿರಲಿ, ದಾದಿಯರು ಮಾತ್ರ ಬೇಕೇ ಬೇಕು. ವೈದ್ಯರು ಎಷ್ಟು ಅಗತ್ಯವೋ, ದಾದಿಯರು ಕೂಡ ಅಷ್ಟೇ ಅಗತ್ಯ. ವೈದ್ಯ ಅನಾರೋಗ್ಯಪೀಡಿತನ ಕಾಯಿಲೆಯನ್ನು ಗುರುತಿಸಬಲ್ಲನಾದರೆ, ದಾದಿ ಮುಂದಿನ ಎಲ್ಲ ಪ್ರಕ್ರಿಯೆಗೆ ಕಾರಣೀಭೂತಳಾಗುತ್ತಾಳೆ. ವೈದ್ಯರ ಸಲಹೆ- ಸೂಚನೆಯಂತೆ ಅನಾರೋಗ್ಯಪೀಡಿತರ ಮತ್ತೆ ಸ್ವಾಸ್ಥ್ಯ ವಂತರನ್ನಾಗಿ ಮಾಡಲು ಶ್ರಮಿಸುತ್ತಾಳೆ.
ಆರೋಗ್ಯವೇ ಭಾಗ್ಯ ಆರೋಗ್ಯ ವಿದ್ದಲ್ಲಿ ಏನನ್ನೂ ಸಾದಿಸಬಹುದು ಎನ್ನುವ ಮಾತಿದೆ. ಹಾಗೆಯೇ ಹುಟ್ಟಿದ ಪ್ರತಿ ಮಗು ಬೆಳೆಯುತ್ತಲೇ ಒಂದಿಲ್ಲ ಒಂದು ಕಾರಣದಿಂದ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಆಸ್ಪತ್ರೆಗೂ ದಾಖಲಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಹುಟ್ಟು ಕಾಣುತ್ತೇವೆ. ಸಾವು ಕೂಡ ಕಾಣುತ್ತೇವೆ. ಹಾಗೆಯೇ ವೈದ್ಯೋ ನಾರಾಯಣೋ ಹರಿ ಎಂಬಂತೆ ವೈದ್ಯರಲ್ಲಿ ನಾವು ದೇವರನ್ನು ಕಾಣುತ್ತೇವೆ. ಅದು ಅಕ್ಷರ ಸಹ ನಿಜ, ಹಾಗೆಯೇ
ವೈದ್ಯರು ಮಾತ್ರ ಮುಂಚೂಣಿಯಲ್ಲಿ ಕಾಣುತ್ತಾರೆ. ಅದರ ಜೊತೆಗೆ ನರ್ಸ್ ಗಳ ಪಾತ್ರ ಬಹಳ ಮುಖ್ಯ ಎನ್ನುವುದು ನಾವು ಮರೆತಿರುತ್ತೇವೆ. ದಾಖಲಾದ ಪ್ರತಿ ರೋಗಿಯ ಆರೈಕೆಯನ್ನು ಹಗಲಿರುಳೆನ್ನದೆ ರಾತ್ರಿ ಇಡೀ ನಿದ್ದೆ ಗೆಟ್ಟು ಜೋಪಾನ ಮಾಡುತ್ತಾರೆ. ಅವರ ಹಿಂದಿನ ನೋವನ್ನ ಕಷ್ಟವನ್ನು ನಾವು ಅರ್ಥೈಸೋದಿಲ್ಲ. ರೋಗಿಯಿಂದ ಹಿಡಿದು ರೋಗಿಯ ಕಡೆಯವರು. ಒಂದಿಲ್ಲ ಒಂದು ಕಾರಣಕ್ಕೂ ಬೈಯುವುದು ದಾದಿಯರನ್ನೇ. ವೈದ್ಯರ ಬೈಗುಳವು ದಾದಿ ಯರಿಗೆ, ಅವರಿಗೂ ಮನಸಿದೆ ಅವರಿಗೂ ಕುಟುಂಬವಿದೆ, ಅವರಿಗೂ ನೋವಾಗುತ್ತದೆ. ಕೆಲವು ಮಹಿಳಾ ದಾದಿಯರು ತಮ್ಮ ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟು ರಾತ್ರಿ ಪಾಳಿಯಲ್ಲೂ ರೋಗಿಗಳ ಆರೈಕೆ ಮಾಡುತ್ತಾರೆ. ಹಾಗಾಗಿ ಅವರನ್ನು ವೈದ್ಯರಷ್ಟೇ ಗೌರವಿಸೋಣ…ಅವರಲ್ಲೂ ನಗು ಮೊಗದಿಂದ ವರ್ತಿಸೋಣ. ವೈದ್ಯರ ಎಷ್ಟು ಗೌರವಿಸುತ್ತವೆ, ಅಷ್ಟೇ ಮುನ್ನಲೆಗೆ ದಾದಿಯರ ದಿನವೂ ಮುನ್ನೆಲೆ ಬರಲಿ.
ಬೇರೆ ಬೇರೆ ಊರುಗಳಿಂದ ಬಂದು ಸೇವೆಸಲ್ಲಿತ್ತಿರುವ ದಾದಿಯರು ಕೊರೋನ ಸಮಯ ದಲ್ಲಿ ತಮ್ಮ ಪ್ರಾಣ ವನ್ನು ಲೆಕ್ಕಿಸದೆ ನೀಡಿದ ಸೇವೆಯನ್ನು ಸ್ಮರಿಸಲೆಬೇಕು. ದಾದಿಯರಿಗೂ ಮನಸಿದೆ ಎನ್ನುವುದು ಬಹುತೇಕರು ಮರೆತಿದ್ದಾರೆ.
ದಾದಿಯರು ತಮ್ಮ ಮನೆ ಮಠ ಮರೆತು ದೂರದ ಊರಿನಿಂದ ಬಂದು ಸೇವೆ ಸಲ್ಲಿಸುತ್ತಾರೆ. ಅವರಿಗೂ ರಾತ್ರಿ ಪಾಳಿಯಲ್ಲಿ ನಿದ್ದೆ, ಆರೋಗ್ಯ ಸಮಸ್ಯೆ ಕಾಡುತ್ತದೆ. ಅದೆಲ್ಲವನ್ನು ಮರೆತು ಆಸ್ಪತ್ರೆ ದಾಖಲಾಗುವ ರೋಗಿ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿ ಸೇವೆ ಸಲ್ಲಿಸುತ್ತಾರೆ. ಆಸ್ಪತ್ರೆ ಗೆ ಬಂದ ಮೇಲೆ ಮನೆ ಸಂಸಾರ ಮರೆತು ರೋಗಿಯ ಆರೈಕೆ ಅಷ್ಟೇ ದಾದಿಯರ ಗುರಿ. ದಾದಿಯರು ಕೂಡ ಮನುಷ್ಯರೇ, ಸಣ್ಣ ಪುಟ್ಟ ತಪ್ಪುಗಳು ಸಹಜ. ದಾದಿಯರ ಜತೆ ಗೌರವದಿಂದ ಮಾತನಾಡಿ.
– ಚಿಂತನಾ, ನರ್ಸ್ ಮಂಗಳೂರು












