ಇತ್ತೀಚಿನ ಸುದ್ದಿ
ವೈದ್ಯಕೀಯ ಸಾಧನಗಳ ಉದ್ಯಮ ನಿಯಂತ್ರಣ: ನೋಂದಣಿ ಪ್ರಮಾಣಪತ್ರ ಹೊಂದಿದ್ದರೆ ಮಾತ್ರ ಮಾರಾಟಕ್ಕೆ ಅವಕಾಶ
07/10/2022, 10:26
ಹೊಸದಿಲ್ಲಿ(reporter Karnataka.com): ಕೇಂದ್ರ ಸರ್ಕಾರವು ದೇಶದಲ್ಲಿ ವೈದ್ಯಕೀಯ ಸಾಧನಗಳ ಉದ್ಯಮವನ್ನು ನಿಯಂತ್ರಿಸಲು ನೋಂದಣಿ ಪತ್ರ ಕಡ್ಡಾಯ ಗೊಳಿಸಿದೆ .
ವಿಟ್ರೋ ಡಯಾಗ್ನೋಸ್ಟಿಕ್ ವೈದ್ಯಕೀಯ ಸಾಧನ ಸೇರಿದಂತೆ ವೈದ್ಯಕೀಯ ಸಾಧನವನ್ನು ಮಾರಾಟ ಮಾಡಲು, ದಾಸ್ತಾನು ಮಾಡಲು, ಪ್ರದರ್ಶಿಸಲು, ಮಾರಾಟ ಮಾಡಲು ಅಥವಾ ವಿತರಿಸಲು ಉದ್ದೇಶಿಸಿರುವ ಯಾವುದೇ ವ್ಯಕ್ತಿ, ಮಾರಾಟ ಮಾಡಲು ನೋಂದಣಿ ಪ್ರಮಾಣಪತ್ರಕ್ಕಾಗಿ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ ಫಾರ್ಮ್ MD-41 ರಲ್ಲಿ ಅರ್ಜಿ ಸಲ್ಲಿಸಬೇಕು” ಎಂದು ಆರೋಗ್ಯ ಸಚಿವಾಲಯದ ವೈದ್ಯಕೀಯ ಸಾಧನಗಳ (ಐದನೇ ತಿದ್ದುಪಡಿ) ನಿಯಮಗಳು 2022 ರ ಅಧಿಸೂಚನೆ ಹೊರಡಿಸಿದೆ
ರಾಜ್ಯ ಪರವಾನಗಿ ಪ್ರಾಧಿಕಾರದಿಂದ ಪ್ರಮಾಣ ಪತ್ರ
“ವೈದ್ಯಕೀಯ ಸಾಧನಗಳನ್ನು ಆಮದುದಾರರಿಂದ ಅಥವಾ ಪರವಾನಗಿ ಪಡೆದ ತಯಾರಕರಿಂದ ಅಥವಾ ನೋಂದಾಯಿತ ಅಥವಾ ಪರವಾನಗಿ ಪಡೆದ ಘಟಕದಿಂದ ಮಾತ್ರ ಖರೀದಿಸಬೇಕು” ಎಂದೂ ತಿಳಿಸಿದೆ.