ಇತ್ತೀಚಿನ ಸುದ್ದಿ
USA | ಡ್ರೈವರ್ ಇಲ್ಲದ ಕಾರಿನಲ್ಲಿ ಪ್ರಯಾಣಿಸಿದ ಸ್ಪೀಕರ್ ಯು.ಟಿ. ಖಾದರ್!: ಇದು ಬೆಂಗಳೂರು ಅಲ್ಲ; ಅಮೆರಿಕದ ಬೋಸ್ಟನ್!!
30/07/2025, 12:35

ಬೋಸ್ಟನ್(reporterkarnataka.com): ಡ್ರೈವರ್ ಇಲ್ಲದೇ ಸಂಚರಿಸುವ ಕಾರಿನ ಬಗ್ಗೆ ನಾವೆಲ್ಲಾ ಕೇಳಿದ್ದೆವು. ಈಗ ಅಮೇರಿಕಾ ಪ್ರವಾಸಕ್ಕೆ ತೆರಳಲಿರುವ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಅಮೇರಿಕದಲ್ಲಿ ಚಾಲಕ ರಹಿತ ( ಡ್ರೈವರ್ ಲೆಸ್ ) ಕಾರಿನಲ್ಲಿ ಸಂಚರಿಸುವ ವಿಡಿಯೋ ಒಂದು ವೈರಲ್ ಆಗಿದೆ.
ಅಮೆರಿಕದ ಬೋಸ್ಟನ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಪೀಕರ್ ಗಳ ಸಮ್ಮೇಳನದಲ್ಲಿ ಭಾಗವಹಿಸಲು ಶಾಸಕರುಗಳ ಜೊತೆ ಸ್ಪೀಕರ್ ಯು.ಟಿ. ಖಾದರ್ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕದ ರಸ್ತೆಯಲ್ಲಿ ಡ್ರೈವರ್ ಲೆಸ್ ಕಾರಿನಲ್ಲಿ ಪ್ರಯಾಣಿಸಿದ ಸ್ಪೀಕರ್ ಯು.ಟಿ. ಖಾದರ್ ಅವರ ಧೈರ್ಯವನ್ನು ಮೆಚ್ಚಲೇ ಬೇಕು.
#karnatakaspeaker
#utkhadar
#kudla
#mangaluru
#tulunadu
#tulu