ಇತ್ತೀಚಿನ ಸುದ್ದಿ
ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ
18/12/2025, 19:01
>
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವಿಗೆ ಕಾರಣರಾದವರ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ.
ಅರಣ್ಯ ಇಲಾಖೆಯ ಎಸಿಎಫ್ ಎ.ಎ. ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಮೀನುಕೊಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನುರಿತ ಶ್ವಾನ ಸ್ಟೆಲ್ಲಾ ಹಾಗೂ ಮೇಲ್ವಿಚಾರಕ ಬೋಳನೊಂದಿಗೆ ಕೂoಬಿಗ್ ಕಾರ್ಯಾಚರಣೆ ನಡೆಸಲಾಯಿತು. ಮೀನುಕೊಲ್ಲಿ ಅರಣ್ಯ ಭಾಗದಿಂದ ಹುಲಿ ಬಂದಿರಬಹುದು ಎಂದು ಶಂಕಿಸಲಾಗಿದ್ದು, ಸುತ್ತಮುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ ಶ್ವಾನ ಮತ್ತೆ ಹುಲಿ ಮೃತಪಟ್ಟ ಸ್ಥಳಕ್ಕೆ ಆಗಮಿಸಿದೆ. ಉರುಳು ಹಾಕಿದ ಜಾಗ ಇನ್ನೂ ಪತ್ತೆಯಾಗದ ಕಾರಣ ಶೋಧಕಾರ್ಯ ಮುಂದುವರೆದಿದೆ.












