8:42 AM Friday21 - November 2025
ಬ್ರೇಕಿಂಗ್ ನ್ಯೂಸ್
ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ ಕೊಡಗಿನ ಪ್ರಮುಖ ಹಬ್ಬ ಪುತ್ತರಿಗೆ ದಿನಾಂಕ ನಿಗದಿ: ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ… ಕೊಡಗಿನಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿ ತಡೆಗೆ ಜಿಲ್ಲಾಡಳಿತ ಕ್ರಮ: ಶ್ವಾನಗಳ ಸ್ಥಳಾಂತರಕ್ಕಾಗಿ… Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ

ಇತ್ತೀಚಿನ ಸುದ್ದಿ

ಸಮುದ್ರದ ಉಪ್ಪು ನೀರನ್ನೆ ಸಿಹಿ ನೀರನ್ನಾಗಿ ಪರಿವರ್ತಿಸುವ ಯಂತ್ರದ ಬಗ್ಗೆ ಸಚಿವ ಅಂಗಾರ ಏನು ಹೇಳಿದರು ಗೊತ್ತಾ ?

04/09/2021, 00:00

ಮಂಗಳೂರು (reporterkarnataka.com):

ಸಮುದ್ರದಲ್ಲಿ ಆಳ ಹಾಗೂ ಒಳ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಸಮುದ್ರದಲ್ಲಿಯೇ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಿಕೊಡುವ ಯಂತ್ರವು ಅತ್ಯಂತ ಉಪಯುಕ್ತವಾಗಿದೆ ಹಾಗೂ ಈ ಯತ್ನ ಯಶಸ್ವಿಯಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

ಅವರು ಶುಕ್ರವಾರ ಸಮುದ್ರದ ಹಳೆ ಬಂದರು ಮಾರ್ಗದ ಮೂಲಕ ಬೆಂಗರೆಗೆ ತೆರಳುವ ಸಂದರ್ಭದಲ್ಲಿ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಯಂತ್ರದ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾತನಾಡಿದರು.  

ಆಸ್ಟ್ರೇಲಿಯಾ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿರುವ ಯಂತ್ರ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುತ್ತದೆ. ಅದು ಈ ಭಾಗದ ಮೀನುಗಾರರಿಗೆ ಅತಿ ಉಪಯುಕ್ತ, ಏಕೆಂದರೆ, ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ಮೀನುಗಾರರು ಒಂದು ವಾರ ಅಥವಾ 10 – 15 ದಿನಕ್ಕೂ ಹೆಚ್ಚು ಸಮಯ ಸಮುದ್ರದಲ್ಲಿರುತ್ತಾರೆ.

ಈ ಸಂದರ್ಭಗಳಲ್ಲಿ ಕುಡಿಯಲು, ಸ್ನಾನ ಸೇರಿದಂತೆ ಇತರೆ ಅನುಕೂಲಗಳಿಗೆ ಸಮುದ್ರದ ತಟದಿಂದ ನೀರನ್ನು ಪೂರೈಕೆ ಮಾಡಬೇಕು, ಅದರ ಬದಲಾಗಿ ಸಮುದ್ರದ ನೀರನ್ನೇ ಸಿಹಿ ನೀರನ್ನಾಗಿ ಪರಿವರ್ತಿಸುವ ಘಟಕವನ್ನು ಮೀನುಗಾರಿಕೆ ಬೋಟುಗಳಿಗೆ ಅಳವಡಿಸಿಕೊಟ್ಟಲ್ಲೀ, ಸಿಹಿ ನೀರನ್ನು ಕೊಂಡುಹೋಗಬೇಕಾದ ಪರಿಸ್ಥಿತಿ ಬರುವುದಿಲ್ಲ, ಅಲ್ಲದೇ ಬೋಟುಗಳಿಗೆ ಹಾಕುವ ಲೋಡು ಕೂಡ ಕಡಿಮೆಯಾಗುತ್ತದೆ, ಮುಖ್ಯವಾಗಿ ಬೋಟಿನಲ್ಲಿ ನೀರು ಸಂಗ್ರಹಿಸಲು ಮೀಸಲಿರಿಸಿದ್ದ ಸ್ಥಳವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಮೀನುಗಾರರು ಎಲ್ಲಿಯೇ ಹೋದರೂ, ಯಾವುದೇ ಸಂದರ್ಭದಲ್ಲಿ ಕೂಡ ಅವರಿಗೆ ಸಿಹಿ ನೀರಿನ ಅವಶ್ಯಕತೆ ಬಂದಾಗ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತತಿಸುವ ಯಂತ್ರವನ್ನು ಬಳಸಿಕೊಂಡು ಸಿಹಿ ನೀರನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಒಳ ಹಾಗೂ ಆಳ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಈ ಯಂತ್ರದ ಉಪಯುಕ್ತತೆಯನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದೆ, ಅಗತ್ಯವಿರುವ ಮೀನುಗಾರರು ಈ ಯಂತ್ರವನ್ನು ಖರೀದಿಸಲು ಸರಕಾರದ ವತಿಯಿಂದ ನೀಡಬಹುದಾದ ಸಹಾಯಧನದ ಕುರಿತಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಅದನ್ನು ಕಾರ್ಯರೂಪಕ್ಕೆ ತರಲು ಕ್ರಮವಹಿಸಲಾಗುವುದು ಎಂದು ಸಚಿವರು ಹೇಳಿದರು.

ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ನಿತೀನ್ ಕುಮಾರ್, ಬೆಂಗಳೂರಿನ ಮೀನುಗಾರಿಕೆ ಇಲಾಖೆಯ ನಿರ್ದೇಶಕ ರಾಮಚಾರ್ಯ, ಜಿಲ್ಲಾ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್. ದೊಡ್ಡಮನಿ ಸೇರಿದಂತೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು