10:18 PM Thursday21 - August 2025
ಬ್ರೇಕಿಂಗ್ ನ್ಯೂಸ್
ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ! Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ… ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ: 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು… ಸಂಸೆ ಯುವಕ ಆತ್ಮಹತ್ಯೆ ಪ್ರಕರಣ: ಕುದುರೆಮುಖ ಪೊಲೀಸ್ ಕಾನ್ ಸ್ಟೇಬಲ್ ಸಿದ್ದೇಶ್ ಗೋವಾದಲ್ಲಿ… ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ: ಶೃಂಗೇರಿ ಅಕ್ಷರಶಃ ಜಲಾವೃತ; ನಾಳೆ ಶಾಲೆಗಳಿಗೆ ರಜೆ

ಇತ್ತೀಚಿನ ಸುದ್ದಿ

ಅಡಿಕೆ–ತೆಂಗು ರೈತರ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಕೃಷಿ ಸಚಿವರ ಭೇಟಿ; ರಾಜ್ಯದ ಸಂಸದರ ನಿಯೋಗದೊಂದಿಗೆ ಮನವಿ

21/08/2025, 19:03

ನವದೆಹಲಿ(reporterkarnataka.com) ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರ್ನಾಟಕದ ಸಂಸದರು ಮತ್ತು ಮುಖಂಡರ ನಿಯೋಗವು ಗುರುವಾರ ಭೇಟಿಯಾಗಿ, ತೆಂಗು ಮತ್ತು ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟ ಪರಿಹಾರಕ್ಕಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಈ ನಿಯೋಗದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ,ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮುಂತಾದವರು ಉಪಸ್ಥಿತರಿದ್ದರು.

ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆ ಕ್ಷೇತ್ರದಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟಗಳ ಕುರಿತು ಗಮನಸೆಳೆದರು.
ಈ ನಿಯೋಗವು ಅಡಿಕೆ ಮತ್ತು ಮಾನವ ಆರೋಗ್ಯದ ಮೇಲೆ “ಪ್ರಮಾಣಾಧಾರಿತ ಸಂಶೋಧನೆ” ನಡೆಸಲು ಕೃಷಿ ಸಚಿವಾಲಯ ಮಂಜೂರು ಮಾಡಿದ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿತು.
ಅಡಿಕೆ ರೈತರು ಎದುರಿಸುತ್ತಿರುವ ಹಳದಿ ಎಲೆ ಹಾಗೂ ಹುಳು ರೋಗಗಳಿಗೆ ಸಮಗ್ರ ದೀರ್ಘಕಾಲಿಕ ಅಧ್ಯಯನ ನಡೆಸಲು ಖ್ಯಾತ ವೈಜ್ಞಾನಿಕ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಅಗತ್ಯವೆಂದು ತಿಳಿಸಲಾಯಿತು.
ಅಡಿಕೆಯ ಅಕ್ರಮ ಆಮದು ತಡೆಗಟ್ಟಲು ಕಸ್ಟಮ್ಸ್ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ, ಆಮದು ಅನುಮತಿಗೆ ಮುನ್ನ CAMPCO, TSS, MAMCOS ಮುಂತಾದ ಸಹಕಾರಿಗಳ ಸಲಹೆ ಪಡೆಯುವುದು ಸೂಕ್ತವೆಂದು ಸೂಚಿಸಲಾಯಿತು. ಹೆಚ್ಚಿನ ಪ್ರಮಾಣದ ಸಾಗಾಟಗಳಿಗೆ GPS ಟ್ರ್ಯಾಕಿಂಗ್ ಮತ್ತು ತಪಾಸಣಾ ಕೇಂದ್ರಗಳಲ್ಲಿ CCTV ಅಳವಡಿಕೆಯಿಂದ ಅಕ್ರಮ ವಹಿವಾಟು, ಅಂಡರ್-ಬಿಲ್ಲಿಂಗ್ ತಡೆಗಟ್ಟಲು ಸಾಧ್ಯವೆಂದು ಅಭಿಪ್ರಾಯ ವ್ಯಕ್ತವಾಯಿತು.
ಅಡಿಕೆಯ ಮೇಲಿನ GST ದರವನ್ನು 5% ನಿಂದ 2% ಕ್ಕೆ ಇಳಿಸುವಂತೆ ಮನವಿ ಮಾಡಲಾಯಿತು. GPS ಟ್ರ್ಯಾಕಿಂಗ್ ಮತ್ತು ಇ-ಡಾಕ್ಯುಮೆಂಟೇಶನ್ ಕಡ್ಡಾಯಗೊಳಿಸಿದರೆ ತೆರಿಗೆ ನಷ್ಟವಿಲ್ಲದೆ ಆದಾಯವನ್ನು ಕಾಪಾಡಬಹುದೆಂದು ಸೂಚಿಸಲಾಯಿತು. ಜೊತೆಗೆ, ಗೋದಾಮುಗಳ ಕೊರತೆಯಿಂದ ಸಣ್ಣ ರೈತರು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾವಾರು ಗೋದಾಮು ನಿರ್ಮಾಣಕ್ಕೆ ಸಹಕಾರಿಗಳಿಗೆ ಸಬ್ಸಿಡಿ ಆಧಾರಿತ ನೆರವು ನೀಡುವಂತೆ ಮನವಿ ಮಾಡಲಾಯಿತು.
ಇತ್ತೀಚೆಗೆ ಅಮೆರಿಕಾದಲ್ಲಿ ಅಡಿಕೆ ಎಲೆಗಳಿಂದ ತಯಾರಾದ ಬಯೋಡಿಗ್ರೇಡಬಲ್ ತಟ್ಟೆಗಳು ಕ್ಯಾನ್ಸರ್ ಉಂಟುಮಾಡುತ್ತವೆ ಎಂಬ ವರದಿ ರಫ್ತು ಹಾನಿಗೊಳಗಾಗಲು ಕಾರಣವಾದ ಹಿನ್ನೆಲೆಯಲ್ಲಿ, ಭಾರತದಲ್ಲಿಯೇ ವೈಜ್ಞಾನಿಕ ಅಧ್ಯಯನ ನಡೆಸಿ ಸೂಕ್ತ ಮಾಹಿತಿಯನ್ನು ಒದಗಿಸುವ ಅಗತ್ಯವಿದೆ ಎಂದು ತಿಳಿಸಲಾಯಿತು.
ಹವಾಮಾನ ಬದಲಾವಣೆಯಿಂದ ಬೆಳೆಗಳಿಗೆ ಉಂಟಾಗುತ್ತಿರುವ ಪರಿಣಾಮಗಳನ್ನು ಗಮನಿಸಿ ಮಳೆ, ವಿಪತ್ತು ಹಾಗೂ ರೋಗಗಳ ಕುರಿತು ನಿಖರ ಮಾಹಿತಿ ಪಡೆಯಲು ಆಧುನಿಕ ತಂತ್ರಜ್ಞಾನ ಬಳಕೆಯ ಅಗತ್ಯತೆಯನ್ನು ನಿಯೋಗ ಒತ್ತಿ ಹೇಳಿತು. ಬೆಳೆ ವಿಮೆ ಯೋಜನೆಗಳನ್ನು ಬಲಿಷ್ಠ ಮತ್ತು ತಂತ್ರಜ್ಞಾನ ಆಧಾರಿತವಾಗಿಸಲು ಕೇಂದ್ರ–ರಾಜ್ಯ ಸರ್ಕಾರಗಳ ಸಮನ್ವಯ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ದಾವಣಗೆರೆ ಕ್ಷೇತ್ರದ ಅಡಿಕೆ ಬೆಳೆಗಾರರ ಸಂಕಷ್ಟಗಳ ಕುರಿತು ಸಹ ನಿಯೋಗದಲ್ಲಿ ಪ್ರಸ್ತಾಪವಾಯಿತು. ಅಡಕೆಗೆ ಪ್ರತ್ಯೇಕ ‌ಮಂಡಳಿ ರಚನೆ ಕುರಿತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಈಗಾಗಲೇ ಸದನದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.ಕ್ಷೇತ್ರದ ಅಡಕೆಬೆಳಗಾರರ ಹಿತ ರಕ್ಷಣೆಗಾಗಿ ಸಂಸದರು‌‌ ಧ್ವನಿ ಎತ್ತಿದ್ದು ಬೆಳಗಾರರಲ್ಲಿ ಸಂತಸ ಮೂಡಿಸಿದೆ.
ಈ ನಿಯೋಗದಲ್ಲಿ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಆಹಾರ, ಸಾರ್ವಜನಿಕ ವಿತರಣೆ ಮತ್ತು ನವೀಕರಿಸಬಹುದಾದ ಶಕ್ತಿ ಸಚಿವರಾದ ಪ್ರಹ್ಲಾದ್ ಜೋಶಿ, ರೈಲು ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಸೇರಿದಂತೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಕೋಟ ಶ್ರೀನಿವಾಸ ಪೂಜಾರಿ, ಯದುವೀರ್ ಒಡೆಯರ್, ಗೋವಿಂದ ಕಾರಜೋಳ, ಮಾಜಿ ಸಚಿವರಾದ ಅರಗ ಜ್ಞಾನೇಂದ್ರ ಹಾಗೂ ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕೊಡ್ಗೆ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು