3:17 AM Wednesday12 - November 2025
ಬ್ರೇಕಿಂಗ್ ನ್ಯೂಸ್
ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ

ಇತ್ತೀಚಿನ ಸುದ್ದಿ

ಉಳ್ಳಾಲ: ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆ ಪ್ರಕರಣದ ಆರೋಪಿ ನೇಣಿಗೆ ಶರಣು

11/05/2023, 18:45

ಉಳ್ಳಾಲ(reporterkarnataka.com): ಭಾರೀ ಸುದ್ದಿ ಮಾಡಿದ್ದ ಉದಯೋನ್ಮುಖ
ರೂಪದರ್ಶಿ ಕುಂಪಲದ ಪ್ರೇಕ್ಷಾ ಆತ್ಮಹತ್ಯೆ ಪ್ರಕರಣದ ಆರೋಪಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕುಂಪಲದ ಆಶ್ರಯ ಕಾಲನಿಯ ನಿವಾಸಿ ಪ್ರೇಕ್ಷಾಳ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿ ಯಲ್ಲಿ ಎರಡು ವರ್ಷಗಳ ಹಿಂದೆ ಅವರ ಮನೆಯಲ್ಲಿ ಪತ್ತೆಯಾಗಿತ್ತು. ಕುತ್ತಾರು, ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ (20) ಎಂಬಾತ ಪ್ರೇಕ್ಷಾ ಸಾವಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ. ಇದೀಗ ಯತಿರಾಜ್ ಬುಧವಾರ ದಿನ ತನ್ನ ಮನೆಯ ಹಿಂದಿನ ಚಿಕ್ಕಮ್ಮನ ಮನೆಯ ಎದುರಿನ ಸಿಟ್ ಔಟ್ ನ ಕಬ್ಬಿಣದ ಹುಕ್ಸ್ ಒಂದಕ್ಕೆ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾನೆ. ನಿನ್ನೆ ರಾತ್ರಿ 11 ರ ವೇಳೆ ಮನೆಗೆ ಬಂದಿದ್ದ ಯತಿರಾಜ್, ಚಿಕ್ಕಮ್ಮ ಮನೆಯಲ್ಲಿರದ ವೇಳೆ ನೇಣು ಬಿಗಿದಿದ್ದಾನೆ.

ಇಂದು ಬೆಳಿಗ್ಗೆ ಯತಿರಾಜ್ ನ ಮಾವ ಹುಡುಕಾಡಿದಾಗ ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮನೆಮಂದಿ ನೇಣು ಕುಣಿಕೆಯನ್ನ ಕಡಿದರೂ ಅದಾಗಲೇ ಯತಿರಾಜ್ ಮೃತಪಟ್ಟಿದ್ದ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು