6:44 PM Tuesday18 - June 2024
ಬ್ರೇಕಿಂಗ್ ನ್ಯೂಸ್
ಬರ್ಬರವಾಗಿ ಹತ್ಯೆಗೀಡಾದ ರೇಣುಕಾ ಸ್ವಾಮಿ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ:… ಬಿಜೆಪಿ ನಾಯಕ ಭಾನುಪ್ರಕಾಶ್ ಹೃದಯಾಘಾತಕ್ಕೆ ಬಲಿ: ರಾಜ್ಯ ಸರಕಾರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿ… ಮಂಗಳೂರು ವಿವಿ 42ನೇ ಘಟಿಕೋತ್ಸವ: 155 ಮಂದಿಗೆ ಪಿಎಚ್.ಡಿ; ಮೂವರು ಉದ್ಯಮಿಗಳಿಗೆ ಗೌರವ… ಮುಖ್ಯಮಂತ್ರಿಗಳು ಭಂಡತನ ಬಿಟ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆ ಕೂಡಲೇ ಹಿಂಪಡೆಯಲಿ: ಬಿಜೆಪಿ… ನೀಟ್ ಬದಲು ರಾಜ್ಯಗಳೇ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರಕಾರ ಅವಕಾಶ ನೀಡಲಿ:… ರಷ್ಯಾದಲ್ಲಿ ಗುಡುಗು ಸಹಿತ ಭಾರೀ ಮಳೆ: ಭಾಗಶಃ ಮುಳುಗಿದ ಮಾಸ್ಕೋ ನಗರ ಯಡಿಯೂರಪ್ಪ ಕೇಸಿಗೆ ಪರಕಾಯ ಪ್ರವೇಶ ಮಾಡಿ ಜೀವ ಕೊಟ್ಟವರು ಯಾರು?: ಸಿ.ಟಿ.ರವಿ ಪ್ರಶ್ನೆ ಉಳ್ಳಾಲ ಕುಡಿಯುವ ನೀರಿನ ಮೊದಲ ಹಂತದ ಯೋಜನೆ ಉದ್ಘಾಟನೆಗೆ ಮುಖ್ಯಮಂತ್ರಿ ಆಗಮನ: ಸ್ಪೀಕರ್… ಪ್ರಧಾನಿ ಮೋದಿ ಇಟಲಿಗೆ: 14ರಂದು ಜಿ7 ಶೃಂಗಸಭೆಯಲ್ಲಿ ಭಾಗಿ ಉಡುಪಿ ಜಿಲ್ಲೆಯಲ್ಲೂ ಕಾಡಾನೆ ಕಾಟ ಶುರು: ಹೆಬ್ರಿ, ಸೋಮೇಶ್ವರ ಪ್ರದೇಶದಲ್ಲಿ ಒಂಟಿ ಸಲಗದ…

ಇತ್ತೀಚಿನ ಸುದ್ದಿ

ಉಳ್ಳಾಲ ಕುಡಿಯುವ ನೀರಿನ ಮೊದಲ ಹಂತದ ಯೋಜನೆ ಉದ್ಘಾಟನೆಗೆ ಮುಖ್ಯಮಂತ್ರಿ ಆಗಮನ: ಸ್ಪೀಕರ್ ಖಾದರ್

14/06/2024, 15:24

ಮಂಗಳೂರು(reporterkarnataka.com): ಚುನಾವಣೆ ಸಂದರ್ಭದಲ್ಲಿ ಕ್ಷೇತ್ರutದ ಜನತೆಗೆ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸುವ ಯೋಜನೆ ಬಗ್ಗೆ ಹೇಳಿದ್ದೆ. ಈಗ ಅದರ ಮೊದಲ ಹಂತದ ಕೆಲಸ ಪೂರ್ಣಗೊಂಡಿದೆ. ಮೊದಲ ಹಂತದ ಉದ್ಘಾಟನೆ ಹಾಗೂ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಉಳ್ಳಾಲ ನಗರಕ್ಕೆ 70 ಲಕ್ಷ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯದ ಸಿಂಗಲ್ ಟ್ಯಾಂಕ್ ನಿರ್ಮಾಣವಾಗಿದೆ. ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಡುಗಡೆಯಾದ 249 ಕೋಟಿ ರೂ.ಗಳ ಕಾಮಗಾರಿ ನಡೆದಿದೆ. ಇನ್ನು ಮನೆ ಮನೆಗಳಿಗೆ ನೀರು ಪೂರೈಕೆ ಕೆಲಸ ಆಗಬೇಕಿದೆ ಎಂದರು.
ಕುಡಿಯುವ ನೀರು ಯೋಜನೆಗೆ 386 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮೊದಲ ಹಂತದ ಉದ್ಘಾಟನೆ ಹಾಗೂ ಎರಡನೇ ಹಂತದ ಚಾಲನೆಗೆ ಸಿಎಂ ಸಿದ್ದರಾಮಯ್ಯ ಅವರು ಆಗಮಿಸುತ್ತಾರೆ. ರಸ್ತೆ, ವಿದ್ಯುತ್, ಶಿಕ್ಷಣಕ್ಕೆ ಅನುದಾನ ಮೀಸಲಿಡಲಾಗಿದೆ. ಅಬ್ಬಕ್ಕ ಭವನ ಹಾಗೂ ಬ್ಯಾರಿ ಭವನ ಕೆಲಸ ಅಗಲಿದೆ. ಕಡಲ್ಕೊರೆತ ಸಂಬಂಧ ಎನ್ಐಟಿಕೆ ಅಧ್ಯಯನದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಟೆಕ್ನಿಕಲ್ ಎಕ್ಸ್ ಪರ್ಟ್ ಜೊತೆ ಚರ್ಚಿಸಿ ಕಡಲ್ಕೊರೆತ ತಡೆ ಕಾರ್ಯ ನಡೆಸಲಾಗುವುದು. ಸಮುದ್ರ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಕೆಲಸ ಆದ ಬಳಿಕ ಸರ್ಕಾರ ಅದರ ನಿರ್ವಹಣೆಗೂ ಹಣ ಕೊಡಬೇಕು. ಸಮುದ್ರದಲ್ಲಿ ಮಾಡಿದ ಕಾರ್ಯಕ್ಕೆ ನಿರ್ವಹಣೆ ಅಗತ್ಯ ಇದೆ. ನಾವು ತಾತ್ಕಾಲಿಕ ಕೆಲಸ ಮಾಡಿ ಮನೆಗಳು ನಾಶ ಆಗದಂತೆ ನೋಡಿದ್ದೇವೆ.
ಈ ಬಾರಿ ಹೆಚ್ಚು ಅಪಾಯ ಇರೋ ಜಾಗಗಳಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ.
ಉಚ್ಚಿಲದ ಬಟ್ಟಪಾಡಿ ಕಡಲ ತೀರ ರಕ್ಷಣೆಯ ಕೆಲಸ ಆಗಬೇಕಿದೆ. ಇದಕ್ಕಾಗಿ ಎನ್ ಐಟಿಕೆ ಅಧ್ಯಯನ ಮಾಡಲು ಸೂಚಿಸಲಾಗಿದೆ ಎಂದು ಸ್ಪೀಕರ್ ಹೇಳಿದರು.
ಬಾಂಬೆಯಿಂದ ಕೊಚ್ಚಿಗೆ ಹೋಗುವ ಕ್ರೂಸ್ ಗೆ ಮಂಗಳೂರಿನಲ್ಲಿ ವ್ಯವಸ್ಥೆ ಬೇಕಾಗಿದೆ. ಸೋಮೇಶ್ವರದಲ್ಲಿ ಟೂರಿಸಂ ಬಂದರು ನಿರ್ಮಾಣದ ಯೋಜನೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ನುಡಿದರು.
ನಾನು ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಎಲ್ಲಾ ಸ್ಕಿಲ್ ಗೇಮ್, ಮಸಾಜ್ ಪಾರ್ಲರ್ ಬಂದ್ ಮಾಡಿಸಿದ್ದೇನೆ. ತುಂಬಾ ಒತ್ತಡ ಇದ್ದರೂ ನಾನು ಎಲ್ಲ ಅಕ್ರಮ ಬಂದ್ ಮಾಡಿಸಿದೆ. ನಾನು ಸಚಿವ ಆಗಿದ್ದಾಗ ಎಲ್ಲವೂ ಸಂಪೂರ್ಣ ಬಂದ್ ಆಗಿತ್ತು.
ಆದರೆ ಹೊಸ ಸರ್ಕಾರ ಬಂದು ಮತ್ತೊಬ್ಬರು ಸಚಿವರಾದರು. ಆಗ ಯಾರು ಅದನ್ನ ನಿಲ್ಲಿಸೋ ಕೆಲಸ ಮಾಡಿಲ್ಲ.‌ಈಗ ನನ್ನ ಕ್ಷೇತ್ರದಲ್ಲಿ ಅದನ್ನ ನಿಲ್ಲಿಸಿದ್ದೇನೆ. ಯಾವುದೇ ಅಕ್ರಮ ಇಲ್ಲ. ಉಳಿದಂತೆ‌ ಬೇರೆ ಕಡೆ ಇದ್ದರೆ ಅದಕ್ಕೆ ನಾನು ಏನು ಮಾಡೋದು?. ನಾನು ಅಧಿಕಾರದಲ್ಲಿದ್ದಾಗ ಸಂಪೂರ್ಣ ಕೆಲಸ ಮಾಡಿದ್ದೇನೆ. ಹಿಂದಿನ ಉಸ್ತುವಾರಿ ಸಚಿವರು ಎಷ್ಟು ಬಾರಿ ಮಂಗಳೂರಿನಲ್ಲಿ ಸಭೆ ಮಾಡಿದ್ದಾರೆ. ಈಗಿನ ಸಚಿವರು ಬೆಂಗಳೂರು ಹಾಗೂ ಜಿಲ್ಲೆಯಲ್ಲಿ ಸಭೆ ಮಾಡ್ತಾರೆ. ಹಿಂದಿನ ಸಚಿವರು ಯಾರ ಕೈಗಾದ್ರೂ ಸಿಗ್ತಾ ಇದ್ರಾ? ಎಂದು ಅವರು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು