ಇತ್ತೀಚಿನ ಸುದ್ದಿ
ಉಲೈಬೆಟ್ಟು ಕಾಯರಪದವು: ನೀರು ತುಂಬಿದ ಕಲ್ಲಿನ ಕ್ವಾರೆಯಲ್ಲಿ ಈಜಲು ಹೋದ ತರುಣ ಮುಳುಗಿ ಸಾವು
24/07/2022, 23:46
ಮಂಗಳೂರು(reporterkarnataka.com): ನಗರದ ಹೊರವಲಯದ ಉಲೈಬೆಟ್ಟು ಕಾಯರಪದವು ಎಂಬಲ್ಲಿ ಕೆಂಪು ಕಲ್ಲಿನ ಕ್ವಾರೆಯಲ್ಲಿ ಈಜಲು ಹೋದ ಶಿಯಾಬ್ (21) ಎಂಬ ತರುಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಭಾನಯವಾರ ಸಂಜೆ 5-30 ಗಂಟೆಗೆ ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಲೈಬೆಟ್ಟು ಕಾಯರಪದವು ಎಂಬಲ್ಲಿ ಶಿಯಾಬ್ ಹಾಗೂ ಆತನ ಗೆಳೆಯರು ಕ್ರಿಕೆಟ್ ಆಟವಾಡಿದ್ದರು..ನಂತರ ಅಲ್ಲಿಯೇ ಆಟದ ಮೈದಾನದ ಪಕ್ಕದ್ದಲ್ಲಿ ಕೆಂಪು ಕಲ್ಲಿನ ಕ್ವಾರೆ ಮಳೆಗಾಲದ ನೀರು ತುಂಬಿದ ಹೊಂಡದಲ್ಲಿ ಈಜಲು ಶಿಯಾಬ್ ಹೋಗಿದ್ದ.ದುರದೃಷ್ಟವಶಾತ್
ಜೋಕಟ್ಟೆ ನಿವಾಸಿಯಾದ ಶಿಯಾಬ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.