ಇತ್ತೀಚಿನ ಸುದ್ದಿ
ಉಕ್ರೇನ್ ನಿಂದ 15 ವಿಮಾನಗಳ ಮೂಲಕ 3,352 ಭಾರತೀಯರ ಸ್ಥಳಾಂತರ: ಭಾರತೀಯ ವಿದೇಶಾಂಗ ಸಚಿವಾಲಯ
03/03/2022, 12:03
ಹೊಸದಿಲ್ಲಿ(reporterkarnataka.com):
ಉಕ್ರೇನ್ ನಲ್ಲಿ ಸಿಲುಕಿರುವ 3.352 ಭಾರತೀಯರನ್ನು15 ವಿಮಾನಗಳ ಮೂಲಕ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಭಾರತೀಯ ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಾಮ್ ಬಾಗ್ಚಿ, ಉಕ್ರೇನ್ನಿಂದ ಸುಮಾರು 17,000 ಭಾರತೀಯರು ಗಡಿಗಳನ್ನು ತೊರೆದಿದ್ದಾರೆ ಎಂದು ಅಂದಾಜಿಸಲಾಗಿದೆ.
ಇನ್ನು ಮುಂದಿನ 24 ಗಂಟೆಗಳಲ್ಲಿ ಉಕ್ರೇನ್ ನಿಂದ 15 ವಿಮಾನಗಳು ಭಾರತದತ್ತ ಬರಲಿದ್ದು, ಈಗಾಗಲೇ ಕೆಲವು ಮಾರ್ಗಮಧ್ಯದಲ್ಲಿವೆ ಎಂದು ಮಾಹಿತಿ ನೀಡಿದರು.
ಕಳೆದ 24 ಗಂಟೆಗಳಲ್ಲಿ 6 ವಿಮಾನಗಳು ಸ್ವದೇಶಕ್ಕೆ ಬಂದಿಳಿದೆ.ಇಲ್ಲಿಯವರೆಗೆ 3,352 ಭಾರತೀಯರನ್ನು ಉಕ್ರೇನ್ ನಿಂದ ಸ್ಥಳಾಂತರಿಸಲಾಗಿದೆ ಎಂದರು.
ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ತಮ್ಮ ಸೇವೆ ನೀಡುತ್ತಿದ್ದು, ಬುಚಾರೆಸ್ಟ್ (ರೊಮೇನಿಯಾ) ನಿಂದ ಮೊದಲ ಸಿ-17 ವಿಮಾನ ಈಗಾಗಲೇ ಹೊರಟಿವೆ. ಇಂದು ರಾತ್ರಿ ದೆಹಲಿಗೆ ತಲುಪುವ ನಿರೀಕ್ಷೆಯಿದೆ.
ಇದಲ್ಲದೇ ಬುಡಾಪೆಸ್ಟ್ (ಹಂಗೇರಿ), ಬುಚಾರೆಸ್ಟ್ (ರೊಮೇನಿಯಾ) ಮತ್ತು ರ್ಜೆಸ್ಜೋವ್ (ಪೋಲೆಂಡ್) ಅರಿಂದಾಮ್ ಬಾಗ್ಚಿ ನಿಂದಲೂ ಇನ್ನೂ 3 ಐಎಎಫ್ ವಿಮಾನಗಳು ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲು ಹೊರಟಿವೆ ಎಂದು ಮಾಹಿತಿ ನೀಡಿದರು.