2:01 PM Tuesday8 - July 2025
ಬ್ರೇಕಿಂಗ್ ನ್ಯೂಸ್
ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ…

ಇತ್ತೀಚಿನ ಸುದ್ದಿ

Ugadi | ರಾಜಭವನದದಲ್ಲಿ ಚಿಗುರಿದ ‘ಚಂದನ’ದ ‘ಚೈತ್ರಾಂಜಲಿ’: ಗಾಜಿನ ಮನೆಯಲ್ಲಿ ಮೂಡಿ ಬಂತು ಯುಗಾದಿ ನೃತ್ಯ, ಗಾನ ಸುಧೆ!

23/03/2025, 12:03

ಬೆಂಗಳೂರು(reporterkarnataka.com): ಹೊಸ ವರ್ಷವೆಂದೇ ಕರೆಯಲ್ಪಡುವ ಯುಗಾದಿ ಹಬ್ಬವನ್ನು ಚೈತ್ರ ಮಾಸದಲ್ಲಿ ಆಚರಿಸಲಾಗುವುದು. ಚೈತ್ರ ಮಾಸದಲ್ಲಿ ಎಲ್ಲಾ‌ ಮರಗಳು ತಮ್ಮ ಹಳೆಯ ತನವನ್ನು ಕಳೆದುಕೊಂಡು ಹೊಸ‌ ಚಿಗುರಿನೊಂದಿಗೆ ಯುಗಾದಿ ಹಬ್ಬವನ್ನು ಬರ ಮಾಡಿಕೊಳ್ಳುವುದು. ಯುಗಾದಿಯ ಆಗಮನದ ದಿನ ಎಲ್ಲೆಲ್ಲೂ ಸಿಹಿ-ಕಹಿ ಸವಿದು ಒಂದಾಗಿ ಮುನ್ನಡೆಯೋಣ ಎಂಬ ಸಂದೇಶದೊಂದಿಗೆ ದೂರದರ್ಶನ ಕೇಂದ್ರ, ಬೆಂಗಳೂರು ಚಂದನ ವಾಹಿನಿ ವತಿಯಿಂದ ರಾಜಭವನದ ಗಾಜಿನಮನಯಲ್ಲಿ ಶನಿವಾರ ಆಯೋಜಿಸಿದ್ದ ಯುಗಾದಿಯ ವಿಶೇಷ “ಚೈತ್ರಾಂಜಲಿ” ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು.


“ಎಲ್ಲರಿಗೂ ನಮಸ್ಕಾರ, ತಮ್ಮೆಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು” ಎಂದು ಕನ್ನಡ ಭಾಷೆಯಲ್ಲಿ ಶುಭ ಕೋರಿದ ಗೌರವಾನ್ವಿತ ರಾಜ್ಯಪಾಲರು, ಇಡೀ ದೇಶದಲ್ಲಿ ಮಾರ್ಚ್ 30ರಂದು ಹೊಸ ವರ್ಷ ಆರಂಭವಾಗಲಿದೆ. ಯುಗಾದಿಯ ಹಬ್ಬ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ದೂರದರ್ಶನದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶದ ಸಂಸ್ಕೃತಿ, ದೇಶದ ಧರ್ಮಾ, ದೇಶದ ಸಭ್ಯತೆ, ದೇಶದ ಹಬ್ಬಗಳ ಬಗ್ಗೆ ಇಂದಿನ ಯುವಪೀಳಿಗೆಗೆ ಮನದಟ್ಟು ಮಾಡಿಕೊಡಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ದೂರದರ್ಶನ ಕೇಂದ್ರ ಚಂದನ ವಾಹಿನಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಈ ಸಂಭ್ರಮದಲ್ಲಿ ಭಾಗಿಯಾಗಿರುವ ಸಿನೆಮಾ ತಾರೆಯರು, ಗಣ್ಯರು, ಅಧಿಕಾರಿಗಳು, ಮಕ್ಕಳು, ಯುವಕರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಹೊಸ ವರ್ಷವು ಎಲ್ಲರಿಗೂ ಸಂತೋಷ, ಸಮೃದ್ಧಿ, ಹೊಸತನ್ನು ತರಲಿ ಎಂದು ಪ್ರಾರ್ಥಿಸುತ್ತೇನೆಂದರು.
*ಮನಸೂರೆಗೊಳಿಸಿದ ನೃತ್ಯ, ಗಾನ ಸುಧೆ:*
ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭಾಗ್ಯಶ್ರೀ ಅವರು ಪ್ರಾರ್ಥನೆ ಸಲ್ಲಿಸಿದರು. ಅದೇ ಸಮಯಲ್ಲಿ ಕಲಾವಿದೆ ವಿಜಯಶ್ರೀ ಅವರಿಂದ ಪ್ರಕೃತಿ ಮಾತೆಯ ಚಿತ್ತಾರ ಮೂಡಿಬಂತು. ನಂತರ ಸುಂದರೇಶ್ ಸಿ. ಮತ್ತು ತಂಡದವರು ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ನಂದಿಕೋಲು ಕುಣಿತವನ್ನೊಳಗೊಂಡ ಜಾನಪದ ನೃತ್ಯ ನೆರದಿದ್ದವರ ಮನಸೂರೆಗೊಳಿಸಿತು.
ನಂತರ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸಿನೆಮಾ ನಟ ಹಾಗೂ ನಿರ್ದೇಶಕರಾದ ಎಸ್. ನಾರಾಯಣ್ ಅವರು ಯುಗಾದಿ ಹಬ್ಬದ ಆಚರಣೆ ಬಗ್ಗೆ ಹಳೆಯದನ್ನು ಮೆಲುಕು ಹಾಕಿ, ಸಂಬಂಧ ಮಹತ್ವದ ಮತ್ತು ಅನುಭವದ ಬಗ್ಗೆ ಹಂಚಿಕೊಂಡರು. ನಟಿಯರಾದ ಅನುಪ್ರಭಾಕರ್, ಸುಧಾ ಬೆಳವಾಡಿ, ಸಂಯುಕ್ತ ಬೆಳವಾಡಿ ಸೇರಿದಂತೆ ಮುಂತಾದ ಗಣ್ಯರು ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿ, ವಿಶೇಷ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಪಂಚಮ್ ಹಳಿಬಂಡಿ ಮತ್ತು ತಂಡದವರು ಯುಗಾದಿ ಕುರಿತು ರೆಟ್ರೋ ಟು ಮೆಟ್ರೋ ಎಂಬ ಶೈಲಿಯಲ್ಲಿ ಕನ್ನಡ ಹಾಡುಗಳ ಮಿಶ್ರಣದಲ್ಲಿ ಗೀತಗುಚ್ಛ ಪ್ರಸ್ತುತಿಪಡಿಸಿದರು. “ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ”, “ಯುಗಾ ಯುಗಾದಿ ಕಳೆದರೂ” ಈ ಹಸಿರ ಸಿರಿಯಲಿ, ಹೊಸಬೆಳಕು ಮೂಡುತಿದೆ, ನೇಸರ ನೋಡು, ದೀಪದಿಂದ ದೀಪವ, ಇಂದು ಬಾನೆಗೆಲ್ಲ ಹಬ್ಬ, ಸೇರಿದಂತೆ ಅನೇಕ ಗೀತೆಗೆಳು ಸುಮಧುರವಾಗಿ ಮೂಡಿಬಂದು, ನೆರೆದಿದ್ದವರು ಚಪ್ಪಾಳೆ ಮೂಲಕ ಹುರಿದುಂಬಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು