6:45 PM Monday16 - February 2026
ಬ್ರೇಕಿಂಗ್ ನ್ಯೂಸ್
ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ: ವಿಶೇಷ ಪೂಜೆ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ… ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ… ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್ ಕೊಡಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್: ಮಡಿಕೇರಿ ಸಮೀಪ ರೆಸಾರ್ಟ್ ಉದ್ಘಾಟನೆ ಸೋಮವಾರಪೇಟೆ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು,… ನಟ ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: 100 ಕಿಮೀ. ನಡಿಗೆ Kodagu | ಮಡಿಕೇರಿ ನಗರಸಭೆ: ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ನಿಷೇಧ

ಇತ್ತೀಚಿನ ಸುದ್ದಿ

ಉಡುಪಿ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವು: ಪುರೋಹಿತನ ಮೇಲೆ ಶಂಕೆ; ದೂರು ದಾಖಲು

30/07/2022, 10:55

ಉಡುಪಿ(reporterkarnataka.com):
ಉಡುಪಿ ಶ್ರೀಕೃಷ್ಣ ಮಠದ ಬಳಿಯ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವಾಗಿರುವ ಘಟನೆ ನಡೆದಿದೆ.

ಜು.26 ರಂದು ಬೆಳಿಗ್ಗೆ ಮಠದಲ್ಲಿ ಪೂಜೆಯ ಸಂದರ್ಭದಲ್ಲಿ 6 ಜನ ಮಠದ ವಿದ್ಯಾರ್ಥಿಗಳು ಮತ್ತು ಪುರೋಹಿತ ಲಕ್ಷ್ಮಿ ಪ್ರಸಾದ್  ಅವರು ಬಂದು ಹೋಗಿದ್ದು, ಪೂಜೆಯ ನಂತರ ಪೂಜಾ ಸಾಮಾಗ್ರಿಗಳನ್ನು ತೆಗೆದು ಇಡುವಾಗ 7 ಲಕ್ಷ ರೂಪಾಯಿ ಮೌಲ್ಯದ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಈ ಚಿನ್ನದ ಗಿಂಡಿಯನ್ನು ಪುರೋಹಿತ ಲಕ್ಷ್ಮಿ ಪ್ರಸಾದ್ ಅವರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನ ಇರುವುದಾಗಿ ಪುತ್ತಿಗೆ ಮಠದಲ್ಲಿ ವ್ಯವಸ್ಥಾಪಕರಾಗಿರುವ ವಿಷ್ಣುಮೂರ್ತಿ  ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು