ಇತ್ತೀಚಿನ ಸುದ್ದಿ
ಉಡುಪಿ: ಎ.ಆರ್.ಎಂ. ಮೋಟರ್ಸ್ ನೂತನ ಅತ್ಯಾಧುನಿಕ ಶೋರೂಂ ಮತ್ತು ಸರ್ವಿಸ್ ಸೆಂಟರ್ ಉದ್ಘಾಟನೆ
25/07/2024, 12:11

ಉಡುಪಿ(reporterkarnataka.com): ದೇಶದ ಪ್ರಖ್ಯಾತ ಅಟೋಮೊಬೈಲ್ ಕಂಪನಿ ಕಿಯಾ ಇಂಡಿಯಾ ಇದರ ಅಧಿಕೃತ ಡೀಲರ್ ಎ.ಆರ್.ಎಂ. ಮೋಟರ್ಸ್‌ರವರ ನೂತನ ಅತ್ಯಾಧುನಿಕ ಶೋರೂಂ ಮತ್ತು ಸರ್ವಿಸ್ ಸೆಂಟರ್ ಉಡುಪಿಯ ಉದ್ಯಾವರದಲ್ಲಿ ಇಂದು ಶುಭಾರಂಭಗೊಂಡಿತು.
ಮಾಂಡವಿ ಬಿಲ್ಡರ್ಸ್ ಎಂಡಿ ಡಾ. ಜೆರ್ರಿ ವಿನ್ಸೆಂಟ್ ಡಯಾಸ್‌ರವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಶೋರೂಂ ಮತ್ತು ಸರ್ವಿಸ್ ಸೆಂಟರ್‌ಗೆ ಚಾಲನೆ ನೀಡಿ ಇಲ್ಲಿರುವ ಅತ್ಯಾಧುನಿಕ ಸವಲತ್ತುಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದರು.
ಕಿಯಾ ಇಂಡಿಯಾದ ರೀಜನಲ್ ಮೆನೇಜರ್ (ಸೇಲ್ಸ್) ನಿಖಿಲ್ ಕರಿಯಪ್ಪ ಮತ್ತು ರೀಜನಲ್ ಮೇನೆಜರ್ (ಸರ್ವೀಸ್) ಯುವರಾಜ್ ಎಸ್. ಅವರು ದೀಪ ಬೆಳಗಿಸಿ ಹಾರೈಸಿದರು. ಈ ಸಂದರ್ಭದಲ್ಲಿ ಎ.ಆರ್.ಎಂ ಮೋಟರ್ಸ್‌ನ ಎಂಡಿ ಆರೂರು ಗಣೇಶ್ ರಾವ್, ಡೈರೆಕ್ಟರ್ಸ್ ಆರೂರು ವರುಣ್ ರಾವ್ , ಆರೂರು ವಿಕ್ರಂ ರಾವ್, ಜನರಲ್ ಮ್ಯಾನೇಜರ್ (ಸರ್ವೀಸ್) ಶಶಿಕುಮಾರ್, ಜನರಲ್ ಮೆನೇಜರ್ (ಸೇಲ್ಸ್) ನಿತಿನ್ ಕೃಷ್ಣ, ಎಜಿಎಂ ಕನಕ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಗ್ರಾಹಕರ ಅನುಕೂಲಕ್ಕಾಗಿ ಎಲ್ಲಾ ಆದಿತ್ಯವಾರವೂ ಶೋರೂಂ ಮತ್ತು ಸರ್ವಿಸ್ ಸೆಂಟರ್ ತೆರೆದಿರುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿರುತ್ತದೆ.