ಇತ್ತೀಚಿನ ಸುದ್ದಿ
ಉಡುಪಿ: ಅಣ್ಣನ ಕ್ಯಾಂಟೀನ್ ಗೆ ಹೋಗಿ ಬರುವುದಾಗಿ ಹೊರಟ ಕಿದಿಯೂರಿನ ಯುವತಿ ನಾಪತ್ತೆ
23/02/2022, 12:42
ಉಡುಪಿ(reporterkarnataka.com): ಅಣ್ಣನ ಕ್ಯಾಂಟೀನ್ ಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಯುವತಿಯೊಬ್ಬಳು ಮನೆಗೆ ವಾಪಸು ಬಾರದೆ ನಾಪತ್ತೆಯಾಗಿರುವ ಘಟನೆ ಅಂಬಲಪಾಡಿ ಕಿದಿಯೂರು ಎಂಬಲ್ಲಿ ನಡೆದಿದೆ.
ಅಂಬಲಪಾಡಿ ಕಿದಿಯೂರು ನಿವಾಸಿ ಧರ್ಮಪಾಲ ವರ್ಮ ಅವರ ಪುತ್ರಿ ಏಕತಾ ವರ್ಮಾ(23) ನಾಪತ್ತೆಯಾದ ಯುವತಿ. ಈಕೆ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದಳು. ಫೆ. 21ರಂದು ಮಧ್ಯಾಹ್ನ 1.30 ಗಂಟೆಗೆ ಮಣಿಪಾಲದಲ್ಲಿರುವ ಅಣ್ಣನ ಕ್ಯಾಂಟೀನ್ ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದಳು. ಆ ಬಳಿಕ ಮಣಿಪಾಲ ಕ್ಯಾಂಟೀನ್ ಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿದ್ದಾಳೆ. ಇಂದ್ರಾಳಿ, ಉಡುಪಿ ಮಣಿಪಾಲ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ತಂದೆ ಧರ್ಮಪಾಲ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.