4:14 PM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ತುಂಬಾ ಸೆಂಟಿಮೆಂಟಲ್ ಕಣ್ರೀ ನಮ್ಮ ಸಿಎಂ: ಮುದ್ದಿನ ನಾಯಿ ಸತ್ತಾಗ ಕಣ್ಣೀರಿಟ್ಟ ಬೊಮ್ಮಾಯಿ !

28/07/2021, 21:07

ಬೆಂಗಳೂರು(reporterkarnataka news): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಕಣ್ಣೀರಿಟ್ಟ ಘಟನೆ ನಡೆದಿತ್ತು. ಸಿಎಂ ಆಗುವ ಕೇವಲ ಒಂದು ವಾರದ ಮುನ್ನ ಬೊಮ್ಮಾಯಿ ಅವರು ದುಃಖ ತಾಳಲಾಗದೆ ಕರ್ಚೀಫನ್ನು ಕಣ್ಣಿಗೆ ಒತ್ತಿಕೊಂಡಿದ್ದರು. ತನ್ನ ಕುಟುಂಬದ ಸದಸ್ಯರ ಎದುರೇ ಬೊಮ್ಮಾಯಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು.


ಬೊಮ್ಮಾಯಿ ಅವರ ಬೆಂಗಳೂರಿನ ನಿವಾಸದಲ್ಲೇ ಈ ಘಟನೆ ನಡೆದಿತ್ತು. ಇವೆಲ್ಲ ನಡೆದಾಗ ಅವರು ಗೃಹ ಸಚಿವರಾಗಿದ್ದರು. ಅವರು ಸಾಕಿ ಸಲಹಿದ ಮುದ್ದಿನ ನಾಯಿ ಮೃತಪಟ್ಟಾಗ ಅವರು ದುಃಖ ತಾಳಲಾಗದೆ ಕಣ್ಣೀರು ಹಾಕಿದ್ದರು. ಈ ಕುರಿತು ವೀಡಿಯೊವೊಂದು ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ವೈರಲ್ ಆಗಿದೆ. ಮುದ್ದಿನ ನಾಯಿಗೆ ಅಂತಿಮ ವಿದಾಯ ಹೇಳುವಾಗ ಬೊಮ್ಮಾಯಿ ಜತೆ ಕುಟುಂಬಸ್ಥರು ಉಪಸ್ಥಿತರಿದ್ದರು. ಶ್ವಾನದ ಮೃತದೇಹದ ಮೇಲೆ ಹೂವಿನ ಹಾರ ಹಾಕಲಾಗಿತ್ತು.

ಬೊಮ್ಮಾಯಿ ಅವರು ನೆಲದಲ್ಲಿ ಮಂಡಿಯೂರಿ ಬಾಗಿ ಶ್ವಾನಕ್ಕೆ ಅಂತಿಮ ಮುತ್ತು ನೀಡಿದ್ದರು. ನಂತರ ದುಃಖ ತಾಳಲಾಗದೆ ಕಂಗಳನ್ನು ಕರ್ಚೀಫ್ ನಲ್ಲಿ ಒರಸಿಕೊಂಡರು. ಮುಖ್ಯಮಂತ್ರಿಯವರ ಪ್ರಾಣಿ ಪ್ರೇಮಕ್ಕೆ ಹಾಟ್ಸಾಪ್. 

ಇತ್ತೀಚಿನ ಸುದ್ದಿ

ಜಾಹೀರಾತು