6:29 AM Wednesday31 - December 2025
ಬ್ರೇಕಿಂಗ್ ನ್ಯೂಸ್
ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ

ಇತ್ತೀಚಿನ ಸುದ್ದಿ

ಟ್ರಕ್ -ಟೆಂಪೋ ಮುಖಾಮುಖಿ ಡಿಕ್ಕಿ: ಅಯೋಧ್ಯೆಗೆ ತೆರಳುತ್ತಿದ್ದ ಬೀದರ್ ನ 7 ಮಂದಿ ದಾರುಣ ಸಾವು

29/05/2022, 22:21

ಬೀದರ್(reporterkarnataka.com): 
ಉತ್ತರ ಪ್ರದೇಶದ ಬಹ್ರೆöಪುಚ್-ಲಖಿಂಪುರ ಖೇರಿ ಹೆದ್ದಾರಿಯಲ್ಲಿ ನಡೆದ ಟ್ರಕ್ ಮತ್ತು ಟೆಂಪೋ ಟ್ರಾವೆಲರ್ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದು, ಇತರ 12 ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರನ್ನು ಬೀದರ್ ಜಿಲ್ಲೆಗೆ ಸೇರಿದವರು ಎಂದು ಗುರುತಿಸಲಾಗಿದೆ.

ಟ್ರಕ್ ಮತ್ತು ಟೆಂಪೋ ಮುಖಾಮುಖಿ ಡಿಕ್ಕಿ ಹೊಡೆದು ಈ ಘೋರ ದುರಂತ ನಡೆದಿದೆ. ಅಪಘಾತದ ತೀವ್ರತೆಯಲ್ಲಿ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.
ಮೃತರನ್ನು ಶಿವಕುಮಾರ ಪೂಜಾರಿ (29), ಜಗದಾಂಬ (52), ಮನ್ಮತ್ (36), ಅನಿಲ್ (30), ಸಂತೋಷ್ (35), ಶಶಿಕಲಾ (38) ಮತ್ತು ಸರಸ್ವತಿ (47) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ವಾಹನದೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಇನ್ನೂ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಟೆಂಪೋ ಟ್ರಾವೆಲರ್ ಕರ್ನಾಟಕದಿಂದ ಅಯೋಧ್ಯೆಗೆ ತೆರಳುತ್ತಿತ್ತು ಎನ್ನಲಾಗಿದೆ. ಬೀದರ್‌ನ ಗಾಂಧಿಗಂಜ್ ಪ್ರದೇಶದ 16ಮಂದಿ ಅಯೋಧ್ಯೆಗೆ ಶ್ರೀರಾಮ ಜನ್ಮಭೂಮಿ ಪೂಜೆಗೆಂದು ತೆರಳುತ್ತಿದ್ದರು. ಈ ಅಪಘಾತದಲ್ಲಿ ಟೆಂಪೋ ಚಾಲಕ ಸೇರಿ ಏಳು ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು